Monsoon: ವಿದ್ಯಾಕಾಶಿ ಜಿಲ್ಲೆಗೆ ಮೂರು ದಿನ ಗುಡು ಸಹಿತ ಭಾರೀ ಮಳೆ ಸಂಭವ: ಹವಾಮಾನ ಮುನ್ಸೂಚನೆ

Arun Kumar
0

ಧಾರವಾಡ, ಮೇ 21: ವಿದ್ಯಾಕಾಶಿ ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಆಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನದಲ್ಲಿನ ಬದಲಾವಣೆಗಳಿಂದ ಮುಂದಿನ ಕೆಲವು ದಿನಗಳ ಕಾಲ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹುಬ್ಬಳ್ಳಿ, ಕಲಘಟಗಿ ಸೇರಿದಂತೆ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದೆ. ಬಿಸಿಲಿನಿಂದ ರೋಸಿ ಹೋಗಿದ್ದ ಜನರಿಗೆ ಮಳೆರಾಯ ಆಗಾಗ ತಂಪೆರೆಯುತ್ತಿದ್ದಾನೆ. ಇದೀಗ ಮುಂದಿನ ಮೇ 24ರವರೆಗೂ ಇದೇ ರೀತಿಯ ಮಳೆ, ತಂಪು ವಾತಾವರಣ ಮುಂದುವರಿಯಲಿದೆ ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಉಂಟಾಗುತ್ತಿದ್ದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಮಳೆ ಆವರಿಸಿಕೊಂಡಿದೆ. ಇದಕ್ಕೆ ಅರಬ್ಬಿ ಸಮುದ್ರದಲ್ಲಿ ಉಂಟಾದ ವೈಪರಿತ್ಯಗಳ ಪ್ರಭಾವ, ಏರಿಳಿತ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಎರಡು ವಾರದಿಂದ ಜಿಲ್ಲೆಯಲ್ಲಿ ತಂಪು ವಾತಾವರಣ
ಧಾರವಾಡದಲ್ಲಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಿರುಗಾಳಿ, ಗುಡುಗು ಮಿಂಚು ಸಹಿತ ಭಾರಿ ಮಳೆ ಆರ್ಭಟಿಸಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತವಾಗಿತ್ತು. ಬಿರುಗಾಳಿಯ ರಭಸಕ್ಕೆ ಮನೆಯ ತಗಡು, ಮೇಲ್ಛಾವಣಿ ಹಾರಿ ಹೋಗಿದ್ದವು. ಮರಗಳು, ಕೊಂಬೆಗಳು ಮುರಿದು ಬಿದ್ದಿವೆ.

ಅಲ್ಲದೇ ಕೈಗೆ ಬಂದ ಮಾವು ಬೆಳಗೆ, ಬಾಳೆ ಸೇರಿದಂತೆ ಕೆಲವು ತೋಟಗಾರಿಕೆ ಬೆಳೆಗೆ ಹಾನಿ ಉಂಟು ಮಾಡಿತ್ತು. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಿತ್ತು. ಅದಾದ ನಂತರ ದಿನಗಳಲ್ಲಿ ಹಗುರವಾಗಿ, ಕೆಲವೆಡೆ ಸಾಧಾರಣ, ವ್ಯಾಪಕ ಮಳೆ ಆಗುತ್ತಿದೆ. ವಾತಾವರಣ ತಂಪಿನಿಂದ ಕೂಡಿದೆ.

ಹುಬ್ಬಳ್ಳಿಯಲ್ಲೂ ಕೆಲವೇ ನಿಮಿಷಗಳ ವರೆಗೆ ಸುರಿದ ಮಳೆಗೆ ರಸ್ತೆಗಳ ಮೇಲೆ ಕೊಚ್ಚೆ ಬಂದು ನಿಂತಿತ್ತು. ಮಳೆ ನೀರು ಸುಸೂತ್ರವಾಗಿ ಹರಿಯಲು ಆಗದ ಸ್ಥಿತಿ ನಗರದಲ್ಲಿದೆ. ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಯಿತು.

ಮುಂದಿನ ಮೂರು ದಿನ ಭಾರಿ ಮಳೆ
ಹುಬ್ಬಳ್ಳಿ, ಕಲಘಟಗಿ, ನಲಗುಂದ, ಕುಂದಗೋಳ ತಾಲೂಕುಗಳ ವ್ಯಾಪ್ತಿಯಲ್ಲಿ ತಡಸ, ಸಂಶಿ, ವರೂರು, ವ್ಯಾಪ್ತಿಯಲ್ಲಿ ಭಾರೀ ಮಳೆ ಆಗಲಿದೆ. ಮೇ 24ರವರೆಗೆ ಗುಡುಗು ಸಹಿತ ಮಳೆ ಅಬ್ಬರ ಕಂಡು ಬರಲಿದೆ. ತಾಪಮಾನ ಸದ್ಯದ ಯಥಾ ಸ್ಥಿತಿಯಲ್ಲಿಯೇ ಮುಂದುವರಿಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)