Mysuru: ಮೈಸೂರಿನಲ್ಲಿ ಗ್ಯಾಸ್ ಪೈಪ್‌ಲೈನ್‌ ಯೋಜನೆ ನೆನೆಗುದಿಗೆ ಬಿದ್ದಿದ್ದೇಕೆ?

Arun Kumar
0

ಮೈಸೂರು, ಮೇ 21: ನಗರದಲ್ಲಿ ಪ್ರತಿ ಮನೆಗೆ ಅಡುಗೆ ಗ್ಯಾಸ್ ಅಳವಡಿಸುವ ಯೋಜನೆ ಸದ್ಯಕ್ಕೆ ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಯೋಜನೆ ವಿಚಾರದಲ್ಲಿ ಕೆಲವು ವರ್ಷಗಳ ಹಿಂದೆ ಬಿಜೆಪಿ ಸಂಸದರು ಮತ್ತು ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಈ ಯೋಜನೆಯನ್ನು ಮುಗಿಸಿಯೇ ಬಿಡುತ್ತೇನೆಂದು ಹೊರಟಿದ್ದ ಸಂಸದ ಪ್ರತಾಪ್ ಸಿಂಹ ಅವರು ಮೂರನೇ ಅವಧಿಗೆ ಸಂಸದರಾಗಲು ಅವಕಾಶ ಮಾಡಿಕೊಡದ ಕಾರಣದಿಂದ ಸದ್ಯಕ್ಕೆ ಈ ಯೋಜನೆ ಮುಂದುವರೆಯುವ ಲಕ್ಷಣಗಳು ಕಾಣುತ್ತಿಲ್ಲ.

ಈ ಯೋಜನೆ ಅನುಷ್ಠಾನ ಗೊಂಡಿದ್ದೇ ಆದಲ್ಲಿ ಪ್ರತಿ ಮನೆ, ಮನೆಗೆ ನಲ್ಲಿ ನೀರಿನಂತೆ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆಯಾಗುತ್ತದೆ. ಜನರಿಗೆ ಯಾವುದೇ ರೀತಿಯಲ್ಲಿ ಗ್ಯಾಸ್ ಅಭಾವ ಉಂಟಾಗುವುದಿಲ್ಲ. ಅಲ್ಲದೆ ಕಡಿಮೆ ಬೆಲೆಗೆ ಸೌಲಭ್ಯ ದೊರೆಯಲಿದೆ. ಇದರಿಂದ ಗ್ರಾಹಕರಿಗೂ ಅನುಕೂಲವಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಾ ಬಂದಿದ್ದರು. ಆದರೆ ಈ ಯೋಜನೆಗೆ ಅವತ್ತಿನ ಬಿಜೆಪಿ ಶಾಸಕರೇ ಆಗಿದ್ದ ರಾಮದಾಸ್ ಮತ್ತು ನಾಗೇಂದ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಯೋಜನೆ ಮುಂದುವರೆದಿತ್ತು. ಅವತ್ತು ಆರಂಭವಾದ ಯೋಜನೆ ಮುಂದೆ ಸಾಗಲೇ ಇಲ್ಲ.

ಎಜಿ ಆಂಡ್ ಪಿ ಪ್ರಥಮ್ ಕಂಪನಿ ನಿರ್ವಹಣೆಯಲ್ಲಿರುವ ಕಾಮಗಾರಿ ನಗರದ ರಿಂಗ್ ರಸ್ತೆಯಲ್ಲಿ ನಡೆಯುತ್ತಿದೆ. ಆಯ್ದ ಕೆಲ ಬಡಾವಣೆಗಳಲ್ಲಿ ಈಗಾಗಲೇ ಗ್ಯಾಸ್ ಪೈಪ್ಲೈನ್ ಅಳವಡಿಸಿ ಸಂಪರ್ಕ ಕೊಳವೆಗಳನ್ನು ಹಾಕಿದೆ. ಮೀಟರ್ ಅಳವಡಿಸಲು ಸಿದ್ಧತೆ ಕೂಡ ನಡೆದಿದೆ. ಆದರೆ, ಮುಖ್ಯ ಕಾಮಗಾರಿ ಇನ್ನೂ ನಡೆದೇ ಇಲ್ಲ. ಜತೆಗೆ ಮುಂದೆ ಪೈಪ್ಲೈನ್ ಅಳವಡಿಸಲು ರಸ್ತೆ ಅಗೆಯಬೇಕಾಗಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತಿಲ್ಲ. ಈ ಕಾರಣದಿಂದ ಯೋಜನೆಗೆ ನಿರೀಕ್ಷಿತ ವೇಗ ಸಿಗದೆ ಆಮೆಗತಿಯಲ್ಲಿ ಸಾಗುತ್ತಿದೆ.ನಗರಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿ ಸ್ಥಗಿತ
ಇನ್ನು ಪೈಪ್ಲೈನ್ ಹಾಕಲು ರಸ್ತೆ ಅಗೆಯಬೇಕಿದ್ದು, ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಪತ್ರ ಬರೆದಿದೆ. ಆದರೆ, ಅಲ್ಲಿಂದ ಈವರೆಗೆ ಯಾವುದೇ ಉತ್ತರ ಬಾರದಿದ್ದರಿಂದ ಪೈಪ್ಲೈನ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡುತ್ತಾ ಹೋದರೆ ನಗರ ಹೊರವಲಯ ಸೇರಿದಂತೆ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಕಾಮಗಾರಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಸ್ಥಗಿತಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)