ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದೊಂದೆ ಆಘಾತಕಾರಿ ವಿಚಾರಗಳು ಬಹಿರಂಗವಾಗುತ್ತಿವೆ. ದರ್ಶನ್ ಅವರ ಹೆಸರನ್ನು ಪ್ರಕರಣದಿಂದ ತಪ್ಪಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದು, ಪೊಲೀಸರ ಲಾಠಿಯೇಟಿಗೆ ಸತ್ಯ ಹೊರಬಂದಿದೆ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಇದ್ದರು ಎನ್ನುವ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಆರೋಪಿ ನಂದೀಶ್ ಎನ್ನುವವನಿಂದ ದರ್ಶನ್ ಸಿಕ್ಕಿಬಿದ್ದಿದ್ದಾರೆ.
ನಂದೀಶ್, ಪವನ್, ನವೀನ್ ಎನ್ನುವವರು ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿಯನ್ನು ನಾವೇ ಕೊಲೆ ಮಾಡಿದ್ದೇವೆ ಎಂದು ಪೊಲೀಸರಿಗೆ ಶರಣಾಗಿದ್ದಾರೆ. ಆದರೆ ಆರೋಪಿಗಳ ಮೊಬೈಲ್ ಕರೆಗಳನ್ನು ಪರಿಶೀಲನೆ ಮಾಡಿದಾಗ ದರ್ಶನ್ ಅವರ ಜೊತೆ ಸಂಬಂಧ ಇರುವುದು ಗೊತ್ತಾಗಿದೆ.
ಬಳಿಕ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಸತ್ಯ ಹೊರಬಂದಿದೆ. ಅಕ್ಕ, ಅಣ್ಣ ಸ್ಥಳದಲ್ಲೇ ಇದ್ದರು, ರೇಣುಕಾಸ್ವಾಮಿ ಮೇಲೆ ಅವರು ಹಲ್ಲೆ ಮಾಡಿ ಅಲ್ಲಿಂದ ಹೋದರು, ಬಳಿಕ ನಾವು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದಾಗ ಆತ ಸ್ಥಳದಲ್ಲೇ ಸಾವನ್ನಪ್ಪಿದ. ಬಳಿಕ ಭಯಬಿದ್ದ ಆರೋಪಿಗಳು ರಾತ್ರಿಯಿಡೀ ದರ್ಶನ್ ಅವರಿಗೆ ಮೊಬೈಲ್ ಕರೆ ಮಾಡಿದ್ದಾರೆ.
ರೇಣುಕಾಸ್ವಾಮಿ ಸತ್ತಿರುವ ವಿಚಾರ ತಿಳಿದ ದರ್ಶನ್ ಶವವನ್ನು ಮುಚ್ಚಾಕುವಂತೆ ನಂದೀಶ್, ಪವನ್, ನವೀನ್ ಎನ್ನುವವರಿಗೆ ಸೂಚನೆ ಕೊಟ್ಟಿದ್ದಾರೆ. ಗಾಬರಿಯಲ್ಲಿ ಆರೋಪಿಗಳು ರೇಣುಕಾಸ್ವಾಮಿ ಶವವನ್ನು ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಎಸೆದಿದ್ದಾರೆ.
ಬೆಳಗ್ಗೆ ಆರೋಪಿಗಳು ಪ್ರಕರಣದಲ್ಲಿ ದರ್ಶನ್ ಹೆಸರು ಬರುತ್ತದೆ ಎಂದು ಭಯಪಟ್ಟು, ಪೊಲೀಸರ ಮುಂದೆ ತಾವೇ ಶರಣಾಗಿದ್ದಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದೇನೆ ಎಂದು ಪೊಲೀಸರನ್ನು ನಂಬಿಸಲು ಯತ್ನಿಸಿದ್ದಾರೆ, ಆದರೆ ಪೊಲಿಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದ್ದು, ಸತ್ಯ ಬಾಯಿಬಿಡಿಸಿದ್ದಾರೆ.
ಪ್ರಕರಣದ ಜಾಡು ಹಿಡಿದ ಪೊಲೀಸರು ಕೊನೆಗೆ ನಟ ದರ್ಶನ್, ಪವಿತ್ರಾ ಗೌಡ ಅವರನ್ನು ಬಂಧಿಸಿದ್ದಾರೆ. ಪೊಲಿಸರಿಗೆ ಘಟನೆ ಬಗ್ಗೆ ಮಹತ್ವದ ಸಾಕ್ಷಿಗಳನ್ನು ಕಲೆಹಾಕಿದ್ದು, ಸಿಸಿಟಿವಿ ದೃಶ್ಯಗಳು ಕೂಡ ಸಿಕ್ಕಿದೆ.
ದರ್ಶನ್ ಅವರಿಗೆ ಸೇರಿದ ಥಾರ್ ಜೀಪು ಪಟ್ಟಣಗೆರೆ ಶೆಡ್ಗೆ ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೇ ಜೀಪಿನಲ್ಲಿ ನಟ ದರ್ಶನ್ ಇದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್ ಅವರನ್ನು ಪ್ರಕರಣದಿಂದ ತಪ್ಪಿಸಲು ಸಹಚರರು ಸಾಕಷ್ಟು ಪ್ರಯತ್ನ ಪಟ್ಟ ಹೊರತಾಗಿಯೂ ಪೊಲಿಸರು ದರ್ಶನ್ ಅವರನ್ನು ಬಂಧಿಸಿದ್ದಾರೆ. ಘಟನೆ ಸಂದರ್ಭದಲ್ಲಿ ನಟ ದರ್ಶನ್ ಅವರ ಮೊಬೈಲ್ ಲೊಕೇಶನ್ ಪಟ್ಟಣೆಗರೆ ಶೆಡ್ನಲ್ಲಿ ಇದ್ದರು ಎನ್ನುವುದು ತಿಳಿದುಬಂದಿದೆ.
😂😂
ಪ್ರತ್ಯುತ್ತರಅಳಿಸಿ