ಬೇವಿನಮರಕಾಲೋನಿಯಲ್ಲಿ ಟ್ರಾನ್ಸ್ಫರಂ ಕೇವಲ 3-4 ಅಡಿ ಇದೆ ಅಷ್ಟೇ....! || Local News

Arun Kumar
0

ನವೆಂಬರ್ 20 ರಂದು ನಡೆದ ದುರ್ಘಟನೆ ಯಾರೂಕೂಡ ಮರೆಯಲಾರರು ನಮಗೆಲ್ಲ ತಿಳಿದಂತೆ ಅದು ಬೆಸ್ಕಾಂ ಬೇಜವಾಬ್ದಾರಿತನ ಎಂದು. ಬೇವಿನಮರ ಕಾಲೋನಿಯ ಗ್ರಾಮಸ್ಥರು ಟ್ರಾನ್ಸ್ಫರಂ ಕುರಿತು ಬೆಸ್ಕಾಂ ಸಹಾಯವಾಣಿಗೆ 4ವರ್ಷಗಳ ಹಿಂದೆಯೇ ದೂರನ್ನು ನೀಡಿದ್ದರು. ಇದರ ಕುರಿತು ಬೆಸ್ಕಾಂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದೇ ವಿಪರ್ಯಾಸ.

ಬೆಸ್ಕಾಂನ ಬೇಜವಬ್ದಾರಿತನಕ್ಕೆ ತಾಯಿ ಮಗುವಿನ ಪ್ರಾಣ ಹಾರಿಹೋಗಿದೆ. ಮತ್ತೆಬೆಸ್ಕಾಂ ನಿರ್ಲಕ್ಷದಿಂದಾಗಿ ಇನ್ನೆಷ್ಟು ಅಮಾಯಕ ಪ್ರಾಣ ಬಲಿಯಾಗಬೇಕು...?

ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರು ಸ್ಥಳಕ್ಕೆ ಯಾವುದೇ ಲೈನ್ ಮ್ಯಾನ್ ಆಗಿರಲಿ ಸ್ಥಳಕ್ಕೆ ಬಂದು ವೀಕ್ಷಿಸಿ ದೂರನ್ನು ಧಾಖಲಿಸುವ ಪ್ರಯತ್ನಕ್ಕೂ ಬೆಸ್ಕಾಂ ಕೈ ಹಾಕದಷ್ಟು ಬೇಜವಾಬ್ದಾರಿತನ ಮತ್ತು ನಿರ್ಲಕ್ಷ ಎಂಬುದು ಸ್ಪಷವಾಗಿ ಕಾಣುತ್ತಿದೆ. ಅಚ್ಚರಿ ಏನಪ್ಪಾ ಅಂದ್ರೆ ಅಲ್ಲಿ ಡೇಂಜರ್ ಅಥವಾ ಸೂಕ್ತ ಕ್ರಮವು ಕೈಗೊಂಡೆ ಇಲ್ಲ.

ಅಲ್ಲಿ ಯಾವುದಾದರೂ ಮಗು ಹೋಗಿ ಆ ಲೈನ್ ಮುಟ್ಟಿ ಪ್ರಾಣಕ್ಕೆ ಏನಾದರು ಆದರೆ ಯಾರು ಜವಾಬ್ದಾರಿ ಸ್ವಾಮಿ. ಹಾಗೆ ಸ್ಥಳೀಯರು ಹೇಳೋ ಪ್ರಕಾರ ಭೂಗೋಳ ಕ್ಷೋಣಿ ಹಾಕೆ ಇಲ್ಲ ಎಂದು ಹೇಳುತ್ತಾರೆ. ಹಾಕಿದ್ದರು ಸಹ ಅದು ಕೇವಲ ಲೈನ್ ಮಾತ್ರ ಮತ್ತು ಲೈನ್ ಹತ್ತಿರ ಸುತ್ತಿರುವಂತಹದ್ದು ಎಂದು ಬೇವಿನಮರ ಕಾಲೋನಿಯ ಗ್ರಾಮಸ್ಥರ ವಾದ.

ಬೆಸ್ಕಾಂ ಮೊದಲು ಇದನ್ನು ಗಮನಿಸಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದೇ ವೇಗ ನ್ಯೂಸ್ ನ ಕಳಕಳಿ 




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)