Chilkabanahalli| ಚಿಕ್ಕಬನಹಳ್ಳಿಯಲ್ಲಿ ಧರ್ಮಸ್ಥಳ ಮಾದರಿಯ ವೈಭವೀಕರಿಸಿದ ಗಣೇಶೋತ್ಸವ ಸೆಟ್‌

Arun Kumar
0

ಚಿಕ್ಕಬನಹಳ್ಳಿ ಗ್ರಾಮದಲ್ಲಿ ಈ ಬಾರಿ ಗಣೇಶೋತ್ಸವ ವಿಭಿನ್ನ ರೀತಿಯಲ್ಲಿ ಕಳೆಗಟ್ಟಿದೆ. ಮೊಟ್ಟ ಮೊದಲ ಬಾರಿಗೆ ಗ್ರಾಮದಲ್ಲಿ ಧರ್ಮಸ್ಥಳದ ದೇವಾಲಯದ ಮಾದರಿಯಲ್ಲಿ ಅಲಂಕಾರವನ್ನು ಸಿದ್ಧಪಡಿಸಿ, ಅದರಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.

ಗ್ರಾಮದಲ್ಲಿ ನಡೆದ ಈ ಹೊಸ ಪ್ರಯೋಗ ಎಲ್ಲರ ಗಮನ ಸೆಳೆದಿದೆ. ಧರ್ಮಸ್ಥಳದ ವೈಭವ, ಸೌಂದರ್ಯ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಿಸಿದ ಈ ಸೆಟ್‌ ಕರ್ನಾಟಕದಾದ್ಯಂತವೂ ವಿಶಿಷ್ಟವಾಗಿಯೇ ಕಾಣಿಸುತ್ತಿದೆ. ಇಷ್ಟೊಂದು ಅದ್ಭುತ ಮಾದರಿಯನ್ನು ನಿರ್ಮಿಸಿರುವುದು ರಾಜ್ಯದಲ್ಲಿಯೇ ಮೊಟ್ಟ ಮೊದಲನೆ ಬಾರಿ ಎಂಬ ಹೆಗ್ಗಳಿಕೆ ಚಿಕ್ಕಬನಹಳ್ಳಿಗೆ ಲಭಿಸಿದೆ.

ಈ ಅಲಂಕಾರಕ್ಕೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೊತ್ತ ಖರ್ಚಾಗಿದ್ದು, ಸಂಘಟಕರು ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಜನರನ್ನು ಇನ್ನಷ್ಟು ಆಕರ್ಷಿಸುವ ವಿಭಿನ್ನ ಪ್ರಯತ್ನಗಳನ್ನು ಕೈಗೊಳ್ಳುವುದರ ಜೊತೆಗೆ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ತಮ್ಮ ಉದ್ದೇಶ ಎಂದು ಸಂಘಟಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಚಿಕ್ಕಬನಹಳ್ಳಿಯ ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಕಲಾ-ಸಂಸ್ಕೃತಿ, ಭಕ್ತಿ ಹಾಗೂ ವೈಭವದ ಸಂಕೇತವಾಗಿಯೂ ಪರಿಣಮಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)