Namma Metro: ನಿಲ್ದಾಣಕ್ಕೆ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಭೇಟಿ ನೀಡಿದ್ದೇಕೆ?

Arun Kumar
0

ಬೆಂಗಳೂರು, ಜೂನ್ 11: ಬೆಂಗಳೂರಿನ ಲಕ್ಷಾಂತರ ನಿವಾಸಿಗಳಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ನೀಡುತ್ತಿರುವ ಬೆಂಗಳೂರು ನಮ್ಮ ಮೆಟ್ರೋ ಒಟ್ಟು 73 ಕಿಲೋ ಮೀಟರ್ ಜಾಲ ಹೊಂದಿವೆ. ಇದೀಗ ಈ ನಮ್ಮ ಮೆಟ್ರೋ ನಿಲ್ದಾಣಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ (KSCW) ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದರು.

ಹೌದು, ಮಂಗಳವಾರ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳಿಗೆ ಬಿಎಂಆರ್ಸಿಎಲ್ ಒದಗಿಸಿರುವ ಸೌಲಭ್ಯ ಮತ್ತು ಕಲ್ಯಾಣ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಈ ವೇಳೆ BMRCL ಅಧಿಕಾರಿಗಳು ಹಾಗೂ ಮಹಿಳಾ ಉದ್ಯೋಗಿಗ ಜೊತೆ ಚರ್ಚಿಸಿ ವಿವರ ಪಡೆದರು.

ಕೆ.ಆರ್ ಪುರಂ ವರೆಗೆ ಆಯೋಗದ ಅಧ್ಯಕ್ಷರ ಪ್ರಯಾಣ
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹಾಗೂ ರೈಲಿನೊಳಗಿದ್ದ ಮಹಿಳಾ ಪ್ರಯಾಣಿಕರೊಂದಿಗೆ ಸುರಕ್ಷತೆ ಮತ್ತು ಸೌಕರ್ಯಗಳ ಬಗ್ಗೆ ಸಂವಾದ ನಡೆಸಿ ಕೃಷ್ಣರಾಜಪುರ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ಮೆಟ್ರೋ ಸೇವೆಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

ಸಾರ್ವಜನಿಕರೊಂದಿಗೆ ಸಂವಹನದ ನಡೆಸಿದ ನಂತರ, ಮೆಟ್ರೊದ ವಿಶ್ವಾಸಾರ್ಹತೆ, ಅನುಕೂಲತೆ ಮತ್ತು ಸಮಯಕ್ಕೆ ಸರಿಯಾಗಿ ಸೇವೆ ನೀಡುತ್ತಿರುವ ನಿಗಮದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ ಅಧ್ಯಕ್ಷರು, ರೈಲು ಆವರ್ತನವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಪೀಕ್ ಸಮಯದಲ್ಲಿ ಮಹಿಳೆಯರಿಗೆ ಹೆಚ್ಚುವರಿ ಬೋಗಿಗಳನ್ನು ಒದಗಿಸುವ ಸಾಧ್ಯತೆಯ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು.

ಹೆಚ್ಚುವರಿ ರೈಲು ಸೇವೆ ನೀಡುವ ಭರವಸೆ
ಈಗಾಗಲೇ ಪೀಕ್ ಸಮಯದಲ್ಲಿ ಹೆಚ್ಚುವರಿಯಾಗಿ ಶಾರ್ಟ್ ಲೂಪ್ ಸೇವೆಯನ್ನು ನಿಗಮವು ಒದಗಿಸುತ್ತಿದ್ದು ಹೆಚ್ಚುವರಿ ರೈಲುಗಳನ್ನು ಪಡೆದನಂತರ ಇನ್ನು ಹೆಚ್ಚು ಆವರ್ತನದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುವುದು. ಈ ಕುರಿತು BMRCL ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಎ.ಎಸ್ ಶಂಕರ್ ತಿಳಿಸಿದರು.

ಮೆಟ್ರೋ ಪ್ರಯಾಣಿಕರು, ಅಧಿಕಾರಿಗಳ ಜತೆ ಸಂವಾದ
KSCW ಅಧ್ಯಕ್ಷೆ ನಾಡಾ. ನಾಗಲಕ್ಷ್ಮಿ ಚೌಧರಿ ಅವರು ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ನಂತರ ಮೆಟ್ರೋ ಕಾರ್ಯಾಚರಣೆ, ಸೇವೆ, ಯೋಜನೆಗಳ ಕುರಿತು ಮೆಟ್ರೋ ಅಧಿಕಾರಿಗಳೊಂದಿಗೆ ಡಾ. ನಾಗಲಕ್ಷ್ಮಿ ಚೌಧರಿ ಚರ್ಚಿಸಿದರು. ಇದೇ ವೇಳೆ ಅವರು ವಿಜಯನಗರದಿಂದ KR ಪುರ ವರೆಗೆ ಪ್ರಯಾಣಿಸಿದರು. ಈ ವೇಳೆ ಆಯೋಗದ ಸಿಬ್ಬಂದಿ, ಕೆಲವು ಅಧಿಕಾರಿಗಳು, ಮೆಟ್ರೋ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)