ದಾವಣಗೆರೆ: ಬಿರುಗಾಳಿ ಮಳೆಗೆ ಹಾರಿಹೋದ ಶೆಡ್‌ಗಳು, ಜನರ ಪರದಾಟ

Arun Kumar
0

ದಾವಣಗೆರೆ, ಮೇ, 18: ಜಿಎಂಐಟಿ ಕಾಲೇಜ್ ಹಿಂಭಾಗದಲ್ಲಿ ದೊಡ್ಡಬಾತಿ ಸರ್ವೆ ನಂಬರ್ 53/1ಬಿ /1ಸಿ 11 ಹೆಕ್ಟೇರ್ 33 ಗುಂಟೆ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಜನರ ಸ್ಥಳಾಂತರ ಮಾಡಿದ್ದು, ಅವರ ಬದುಕು ಈಗ ಬೀದಿಗೆ ಬಿದ್ದಿದೆ. ಯಾಕೆ ಅಂತೀರಾ ಇಲ್ಲದೆ ನೋಡಿ ಮಾಹಿತಿ.

ಭಾರೀ ಗಾಳಿ, ಮಳೆಯಿಂದಾಗಿ ಶೆಡ್ಗಳು ಹಾರಿ ಹೋಗಿವೆ. ಕೆಲ ಶೆಡ್ಗಳಂತೂ ವಿದ್ಯುತ್ ಕಂಬಗಳ ಮೇಲೆ ಹಾರಿ ಹೋಗಿವೆ. ಇದರಿಂದಾಗಿ ಜನರು ಮತ್ತೆ ಭಯದಲ್ಲಿಯೇ ಬದುಕುವ ದುಃಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಬಾಷಾ ನಗರ ಬಳಿ ರಿಂಗ್ ರಸ್ತೆ ಬಳಿ ಕಳೆದ 15 ವರ್ಷಗಳಿಂದ ವಾಸವಾಗಿದ್ದ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಜಿಲ್ಲಾಡಳಿತ ಮತ್ತು
ಮಹಾನಗರ ಪಾಲಿಕೆಯು ಅವರಿಗೆ ಮನವೊಲಿಸಿ ಸ್ಥಳಾಂತರಿಸಲಾಗಿತ್ತು.

ನಿವೇಶನ ನೀಡಿ ಸ್ಥಳಾಂತರ ಮಾಡಿದ್ದರೂ, ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಗಾಳಿ, ಮಳೆಯಿಂದಾಗಿ ಜನರ ಬದುಕು ಮತ್ತೆ ಬೀದಿಗೆ ಬರುವಂತಾಗಿದೆ. ಅಧಿಕಾರಿಗಳು ಕೇವಲ ಭರವಸೆ ಮಾತ್ರ ಕೊಡುತ್ತಿದ್ದಾರೆಯೇ ವಿನಃ, ಸಮಸ್ಯೆ ಪರಿಹರಿಸುವ ಕೆಲಸ ಮಾಡದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರದಿಂದಲೇ ಆಶ್ರಯ ಮನೆ ಕಟ್ಟಿ ಕೊಡುವುದಾಗಿ ಭರವಸೆ ನೀಡಿದ್ದರೂ, ಪ್ರಯೋಜನ ಮಾತ್ರ ಶೂನ್ಯ. ಬಸ್ ಸೌಲಭ್ಯ, ಕುಡಿಯುವ ನೀರಿನ ಪೂರೈಕೆ ಇಲ್ಲ. ಶಾಲೆಗಳಿಲ್ಲಿ, ರಸ್ತೆಗಳಿಲ್ಲ ಎಂಬುದೂ ಸೇರಿದಂತೆ
ಹಲವು ಸಮಸ್ಯೆಗಳ ಕುರಿತಂತೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿರಲಿಲ್ಲ.

ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಾಮೇಗೌಡ ಅವರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಸೂಕ್ತ ಸೌಲಭ್ಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದರು. ಈ ವೇಳೆ ಮನೆಯನ್ನ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೇ ಒಂದು ಮಳೆಗೆ ಸಂಪೂರ್ಣ ಅಲ್ಲಿರುವ ತಾತ್ಕಾಲಿಕ ಶೆಡ್ಗಳು ಬಿದ್ದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)