KSRTC: ಬಸ್ ಅಪಘಾತ: ತಪ್ಪಿದ ಭಾರೀ ದುರಂತ, 2 ಫ್ಲೈಓವರ್‌ಗಳ ಮಧ್ಯೆ ನಿಂತ ಬಸ್..!

Arun Kumar
0

ಬೆಂಗಳೂರು, ಮೇ 18: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ವೇಳೆ ಬಸ್ ಎರಡು ಫ್ಲೈಓವರ್ಗಳ ಮಧ್ಯೆ ನಿಂತಿದೆ. ಬ್ಯಾರಿಕೇಡ್ ಹಾರಿ ಬಸ್ ನುಗ್ಗಿದೆ.

ಈ ಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ನೆಲಮಂಗಲ ತಾಲೂಕು ಅಡಕಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ ಬೆಳಗ್ಗೆ ಜರುಗಿದೆ. ಈ ಭೀಕರ ಅಪಘಾತದಲ್ಲಿ ಕೆಲವರಿಗೆ ಗಾಯಗಳಾಗಿವೆ. ಸದ್ಯ ಪ್ರಕರಣ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಎಂದಿನಂತೆ ಬೆಂಗಳೂರಿನಿಂದ- ಸೋಮವಾರಪೇಟೆಯತ್ತ ಬಸ್ ತೆರಳುತ್ತಿತ್ತು. ಈ ವೇಳೆ ನೆಲಮಂಗಲದ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮೇಲೆ ಬಸ್ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಸುಮಾರು ನಾಲ್ಕು ಅಡಿಯ ರಸ್ತೆ ವಿಭಜಕ ದಾಟಿ ಜಿಗಿದಿದೆ. ಇದರಿಂದಾಗಿ ಬಸ್ನಲ್ಲಿ ಮುಂದೆ ಕೂತಿದ್ದ ಚಾಲಕ, ನಿರ್ವಾಹಕ ಸೇರಿ 06 ಮಂದಿಗೆ ಗಾಯಗಳಾಗಿವೆ.

ಅದೃಷ್ಟವಶಾತ್ ತಪ್ಪಿದ ಮಹಾ ದುರಂತ
ವೇಗವಾಗಿ ಚಲಿಸುತ್ತಿದ್ದ ಬಸ್ ಏಕಾಎಕಿ ನಿಯಂತ್ರಣ ತಪ್ಪಿದ್ದರಿಂದ ಹೆದ್ದಾರಿ ರಸ್ತೆ ವಿಭಜಕ ದಾಟಿದ್ದಲ್ಲದೇ ಮುಂದಿನ ವಿಭಜಕ ಮೇಲೆ ನಿಂತಿದೆ. ಎರಡು ವಿಭಜಗಳು ಮೇಲ್ಸೇತುವೆ ವಿಭಜಕಗಳಾಗಿವೆ. ಎರಡು ಮೇಲ್ಸೇತುವೆಗಳ ಮಧ್ಯೆ ಅಗಲ ಕಡಿಮೆ ಇರುವ ಕಾರಣ ಬಸ್ ಕೆಳಗೆ ಬೀಳದೇ ವಿಭಜಕದ ಮೇಲೆ ನಿಂತಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಘಟನೆ ಬಳಿಕ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ
ಒಂದು ಸೇತುವೆಯಿಂದ ಮತ್ತೊಂದು ಸೇತುವೆಗೆ ಬಸ್ ಜಂಪ್ ಮಾಡಿದ ಫೋಟೋಗಳು ವೈರಲ್ ಆಗುತ್ತಿವೆ. ಮೇಲ್ಸೇತುವೆ ಕೆಳಗಿನಿಂದ ಜನರು ನಿಂತು ವೀಕ್ಷಿಸಿದ್ದಾರೆ. ಡಿವೈಡರ್ಗೆ ಬಸ್ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ನಿಂತ ಪರಿಣಾಮ ಇಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ನೋಡ ನೋಡುತ್ತಿದ್ದಂತೆ ಸರತಿಸಾಲಿನಲ್ಲಿ ವಾಹನಗಳು ನಿಂತು ಬಿಟ್ಟಿದ್ದವು.

ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ನೆಲಮಂಗಲ ಠಾಣೆ ಪೊಲೀಸರು ವಾಹನ ದಟ್ಟಣೆ ನಿರ್ಮೂಲನೆಗೆ ಕ್ರಮ ವಹಿಸಿದರು. ಕ್ರೇನ್ ಸಹಾಯದಿಂದ ಡಿವೈಡರ್ ಮೇಲೆ ನಿಂತಿದ್ದ ಬಸ್ ಅನ್ನು ರಸ್ತೆಗೆ ಇಳಿಸಿದರು. ಗಾಯಗೊಂಡವರನ್ನು ಆಸ್ಪತ್ರೆ ಸಾಗಿಸಿ, ದಟ್ಟಣೆ ತೆರವುಗೊಳಿಸಿದರು.

ಅಪಘಾತ ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಕೆಎಸ್ಆರ್ಟಿಸಿ ಅಧಿಕಾರಿಗಳ ಸಹಕಾರದಲ್ಲಿ ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)