Narendra Modi: ಭಾರತದ ಅಭಿವೃದ್ಧಿ ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೇ ಒಳ್ಳೆಯದು -ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮೋದಿ ಮಾತು

Arun Kumar
0

 

moneycontrol.com ಗೆ ನೀಡಿದ ವಿಶೇಷ ಸಂದರ್ಶನದಲ್ಲಿ (exclusive interview) ಮಾತನಾಡಿದ ಪ್ರಧಾನಿ ಮೋದಿ, ಭಾರತದ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.


ಭಾರತದ ಅಭಿವೃದ್ಧಿ ಬರೀ ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಒಳ್ಳೆಯದು ಅಂತ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅಭಿಪ್ರಾಯಪಟ್ಟಿದ್ದಾರೆ. moneycontrol.com ಗೆ ನೀಡಿದ ವಿಶೇಷ ಸಂದರ್ಶನದಲ್ಲಿ (exclusive interview) ಮಾತನಾಡಿದ ಪ್ರಧಾನಿ ಮೋದಿ, ಭಾರತದ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಭಾರತದ ಬೆಳವಣಿಗೆ ಸ್ವಚ್ಛ, ಹಸಿರು ಬೆಳವಣಿಗೆ ಮತ್ತು ಆಶಾದಾಯಕ ಅಭಿವೃದ್ಧಿಯಾಗಿದೆ ಅಂತ ಅವರು ಅಭಿಪ್ರಾಯಪಟ್ಟರು.


ಭಾರತದ ಅಭಿವೃದ್ಧಿಯಿಂದ ವಿಶ್ವಕ್ಕೆ ಒಳ್ಳೆಯದು


ಭಾರತದ ಬೆಳವಣಿಗೆ ಕೇವಲ ಭಾರತೀಯರಿಗೆ ಮಾತ್ರವಲ್ಲ, ವಿಶ್ವಕ್ಕೂ ಒಳ್ಳೆಯದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. moneycontrol.com ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು,  “ಭಾರತದ ಬೆಳವಣಿಗೆ ಸ್ವಚ್ಛ ಮತ್ತು ಹಸಿರು ಬೆಳವಣಿಗೆಯಾಗಿದೆ. ಇತರ ದೇಶಗಳಲ್ಲಿಯೂ ಪುನರಾವರ್ತಿಸಬಹುದಾದ ಮಾನವ-ಕೇಂದ್ರಿತ ವಿಧಾನದೊಂದಿಗೆ ಇದನ್ನು ಸಾಧಿಸುತ್ತಿದ್ದೇವೆ. ಭಾರತದ ಬೆಳವಣಿಗೆಯು ಬರೀ ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಸ್ಪೂರ್ತಿದಾಯಕವಾಗಿದೆ ಅಂತ ಹೇಳಿದ್ರು.

ಗ್ಲೋಬಲ್ ಸೌತ್‌ನ ಹಿತಾಸಕ್ತಿಗಳನ್ನು ಮತ್ತಷ್ಟು ಹೆಚ್ಚಿಸಲು ಭಾರತದ ಅಭಿವೃದ್ಧಿ ಸಹಾಯ ಮಾಡುತ್ತದೆ ಎಂದು ಮನಿ ಕಂಟ್ರೋಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.


ಭಾರತದ ಬಗ್ಗೆ ವಿಶ್ವನಾಯಕರ ಆಶಾವಾದ


ವಿಶ್ವ ನಾಯಕರು ನನ್ನನ್ನು ಭೇಟಿಯಾದಾಗ, ವಿವಿಧ ಕ್ಷೇತ್ರಗಳಲ್ಲಿ 140 ಕೋಟಿ ಭಾರತೀಯರ ಪ್ರಯತ್ನದಿಂದಾಗಿ ಅವರು ಭಾರತದ ಬಗ್ಗೆ ಆಶಾವಾದವನ್ನು ತುಂಬುತ್ತಾರೆ ಎಂಬ ವಿಶ್ವಾಸ ವಿರುವುದಾಗಿ ಮೋದಿ ಹೇಳಿದ್ರು.


ಭಾರತವು ಪ್ರಪಂಚವನ್ನು ರೂಪಿಸುವ ಸಾಮರ್ಥ್ಯ ಹೊಂದಿದೆ


ಭಾರತವು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಮತ್ತು ಪ್ರಪಂಚದ ಭವಿಷ್ಯವನ್ನು ರೂಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. G20 ಪ್ಲಾಟ್‌ಫಾರ್ಮ್ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸುವಲ್ಲಿ ಇದು ಸಾಕ್ಷಿಯಾಗಿದೆ ಅಂತ ಮೋದಿ ಅಭಿಪ್ರಾಯಪಟ್ಟಿದ್ದಾರೆ.


(ಬುಧವಾರಸೆಪ್ಟೆಂಬರ್ 6 ರಂದು ಬೆಳಿಗ್ಗೆ 7:30 ಗಂಟೆಗೆ moneycontrol.com ನಲ್ಲಿ ಪೂರ್ಣ ಸಂದರ್ಶನವನ್ನು ಓದಿ)


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)