awan Movie: 'ರಾಮನ ತಮ್ಮ ಮತ್ತೆ ಬಂದಿದ್ದಾನೆ', ಜವಾನ್ ಸಿನಿಮಾದ ವಿಮರ್ಶೆ!

Arun Kumar
0

 

ಬಾಲಿವುಡ್​ಗೆ ಹೊಡಿ ಬಡಿ ದೃಶ್ಯ ಹೊಸದೇನಲ್ಲ. ಆದರೆ ಅದನ್ನು ತಮ್ಮ ಕಥೆಗೆ ತಕ್ಕಂತೆ ಒಗ್ಗಿಸಿಕೊಳ್ಳುವಲ್ಲಿ ಬಾಲಿವುಡ್ ಎಡವುತ್ತಿದೆ. ಹಾಗೆ ಒಗ್ಗಿಸಿಕೊಂಡ ಕೆಲವು ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ.

 "ನಾನು ರಾಮನ ತಮ್ಮ. ಆದರೆ ನನ್ನೆಸರು ಅಮ್ಜದ್ ಅಲಿ ಖಾನ್". ಇಂಥದ್ದೊಂದು ಮಾತು ಜನ ಕೇಳಿಸಿಕೊಂಡಿದ್ದು ಸರಿಸುಮಾರು 23 ವರ್ಷಗಳ‌‌ ಕೆಳಗೆ. ಅದು 2000. ಉಲಗನಾಯಕನ್ ಕಮಲ್ ಹಾಸನ್ ಕೇಂದ್ರ ಪಾತ್ರ ನಿಭಾಯಿಸಿದ ತಮಿಳು ಸಿನೆಮಾ ಹೇರಾಮ್. ಮಹಾತ್ಮ ಗಾಂಧಿಯ ಸುತ್ತ ಮೈಬಳ್ಳಿಯಂತೆ ನಡೆಯುವ ಕಥನ. ಬಹಳ ಟೀಕೆ ಟಿಪ್ಪಣಿಗಳಿಗೆ ಹೇರಾಮ್ ಗುರಿಯಾಗಿತ್ತು. ಆ ಚಿತ್ರದಲ್ಲಿ ಕಮಲ್ (Kamal Haasan) ಹಾಸನ್ ಗೆಳಯನ ವೇಷದಲ್ಲಿ ಪರದೆಯ ಮೇಲೆ ದಾಪುಗಾಲು ಇಟ್ಟಿದ್ದು ಶಾರುಖ್ ಖಾನ್ (Shah Rukh Khan). ಮುಸ್ಲಿಂ ವೇಷ ಭೂಷಣದಲ್ಲಿ ಅಂದು, "ನಾನು ರಾಮನ ತಮ್ಮ. ಆದರೆ ನನ್ನೆಸರು ಅಮ್ಜದ್ ಅಲಿ ಖಾನ್" ಎನ್ನುವ ಉದ್ಘಾರ ಶಾರುಖ್ ನದ್ದು. ಅಂಥದ್ದೊಂದು ನಂಟು ತಮಿಳು ಸಿನಿಮಾದ‌ ಜೊತೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಗಿದೆ.

ಬೆಳ್ಳಿ ಪರದೆ ಮೇಲೆ ಜವಾನ್ ಹವಾ


ಜವಾನ್ ಅದ್ದೂರಿ ಪ್ರದರ್ಶನದ ಜೊತೆಗೆ ಶಾರುಖ್ ಖಾನ್ ಮತ್ತೆ ಬೆಳ್ಳಿ ಪರದೆಯ ಮೇಲೆ ಬಂಗಾರದ ಗೆರೆಗಳು ಎಳೆದಿದ್ದಾರೆ. ಜವಾನ್ ಸಂಪೂರ್ಣ ತಮಿಳರ ಬತ್ತಳಿಕೆಯಿಂದ ಹುಟ್ಟಿಕೊಡಿರುವ ಸಿನಿಮಾ. ನಿರ್ದೇಶಕ ಅಟ್ಲಿಯಿಂದ ಹಿಡಿದು ಖಳನಾಯಕ ವಿಜಯ್ ಸೇತುಪತಿ ವರೆಗೆ ಜವಾನ್ ತಾರಾಂಗಣದಲ್ಲಿ 'ತಮಿಳ್ ಮಕ್ಕಳ'ದ್ದೇ ತಾಳಮೇಳ. ಓರ್ವ ಸೈನಿಕನಿಗೆ ವ್ಯವಸ್ಥೆಯೇ ಎಸಗುವ ಮೋಸದ ಒಂದು ತಿರುಳಿನಿಂದ ಶುರುವಾಗುವ ಕತೆ ಜವಾನ್. ಆದರೆ ಈ ಚಿತ್ರದ ಮೊತ್ತ ಪ್ರಯಾಣ ದೇಶದ ಹಲವು ಜ್ವಲಂತ ಸಮಸ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅದೇ ಕಾರಣಕ್ಕೆ ಪ್ರೇಕ್ಷಕರು 'ಹೀಗೊಂದು ಅನುಭವ ನನಗೂ ಆಗಿದೆ' ಎನ್ನುವ ಸಿಟ್ಟಿನಿಂದಲೇ ಸಿನಿಮಾನವನ್ನು ಪರದೆಯಿಂದ ಮೈಮೇಲೆ ಎಳೆದುಕೊಳ್ಳುತ್ತಾನೆ.


ಗೆದ್ದವ ಸೋತ, ಸೋತವ ಸತ್ತ. ಹೀಗೊಂದು ಮಾತನ್ನು ನಿರ್ದೇಶಕ ಅಟ್ಲಿ ಬಲವಾಗಿ ನಂಬಿಕೊಂಡಂತಿದೆ. ದಿಗ್ಗಜ ನಿರ್ದೇಶಕ ಶಂಕರ್ ಗರಡಿಯಲ್ಲಿ ಪಳಗಿರುವ ಪ್ರತಿಭೆ ಅಟ್ಲಿ. ಅದೇ ಕಾರಣಕ್ಕೆ ಶಂಕರ್ ಸಿನಿಮಾಗಳಲ್ಲಿ ಕಾಣಲು ಸಿಗುವ Sub Stories ಜವಾನ್ ನಲ್ಲಿ‌ ಕಾಣಸಿಗುತ್ತವೆ. ಪ್ರಧಾನ ಕತೆಯ ಜತೆಜೊತೆಗೆ ಉಪಕತೆಗಳನ್ನೂ ನರೇಟ್ ಮಾಡುವ ರೀತಿ ವಿರಳವಾಗಿಯಷ್ಟೇ ಜನರನ್ನು ಆಕರ್ಷಿಸಬಲ್ಲದು. ಹೀಗೆ ಮಾಡಲೊರಡುವ ನಿರ್ದೇಶಕರು. ಸಾಹಸಕ್ಕೆ ದಾಂಗುಡಿ ಇಡುವ ಮೊದಲೇ ನೂರು ಬಾರಿ ಯೋಚಿಸುತ್ತಾರೆ. ಇಷ್ಟಾದರೂ ಸೋಲುಂಡವರೇ ಜಾಸ್ತಿ. ಆದರೆ ಅಟ್ಲಿ, ಮನೆಯಂಚಿಗೆ ಬಿದ್ದ ಮಳೆ ನೀರು ಧರೆ ಮುಟ್ಟಿದಷ್ಟೇ ಸಲೀಸಲಾಗಿ ಆ ಸಾಹಸವನ್ನು ನಿಭಾಯಿಸಿ ಗೆದ್ದಿದ್ದಾರೆ.


ಜವಾನ್ ಸಿನಿಮಾದಲ್ಲಿ ಹೊಸತೇನಿದೆ?


ಬಾಲಿವುಡ್ ಗೆ ಹೊಡಿ ಬಡಿ ಹೊಸದೇನಲ್ಲ. ಆದರೆ ಅದನ್ನು ತಮ್ಮ ಕಥೆಗೆ ತಕ್ಕಂತೆ ಒಗ್ಗಿಸಿಕೊಳ್ಳುವಲ್ಲಿ ಬಾಲಿವುಡ್ ಎಡವುತ್ತಿದೆ. ಹಾಗೆ ಒಗ್ಗಿಸಿಕೊಂಡ ಕೆಲವು ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಅದಕ್ಕೆ ಹೊಸ ಸೇರ್ಪಡೆ ಜವಾನ್. ಶಾರುಖ್ ಖಾನ್ ಅಭಿನಯದಲ್ಲಿ ಹೊಸತೇನು ಇಲ್ಲ. ಆದರೆ ಮ್ಯಾನರಸಿಂ ಈ ಸಿನಿಮಾದಲ್ಲಿ ಬದಲಾಗಿದೆ. ಮ್ಯಾನರಿಸಂನಲ್ಲಿ ನಿರ್ದೇಶಕ ಅಟ್ಲಿಯ ಕೈ ಚಳಕದ ಗುರುತುಗಳು ಶಾರುಖ್ ಸಿನಿಮಾ ಪ್ರಿಯರಿಗೆ ಗೊತ್ತಾಗಲಿದೆ. ಆದರೆ ಶಾರುಖ್ ಜೊತೆಗೆ ಜಿದ್ದಿಗೆ ಬಿದ್ದು ನಟಿಸಿರುವ ಪ್ರಿಯಾ ಮಣಿ, ನಯನತಾರ ಸೇರಿದ ಹೆಣ್ಣು ಪಾತ್ರಗಳು ಒಂದು ಕೈ ಮೇಲೆಯೇ ನಿಂತಿದೆ.




ತೆರೆ ಮೇಲೆ ಅಬ್ಬರಿಸಿದ ವಿಜಯ್ ಸೇತುಪತಿ 


ಅಟ್ಲಿ ಪದೇ ಪದೇ ತಾನೊಬ್ಬ ಫೆಮಿನೈನ್ ಥಿಂಕರ್ ಎನ್ನುವುದನ್ನು ಜವಾನ್ ನಲ್ಲೂ ಸಾಬೀತು ಪಡಿಸಿದ್ದಾರೆ. ತನ್ನ ಕಡೆಯ ಸಿನಿಮಾ 'ಬಿಗಿಲ್' ನಲ್ಲೂ ಹೆಣ್ಣು‌ಮಕ್ಕಳ ಮೆಲೇಯೇ ಕಥೆಗೆ ದೊಂಪ ಹೂತಿದ್ದರು‌ ಜವಾನ್ ನಲ್ಲೂ ಅದು ಮುಂದುವರೆದಿದೆ. ಖಳನಾಯಕನಾಗಿ ಅಬ್ಬರಿಸಿ ಬೆಳ್ಳಿ ಪರದೆ ಕೆಡವಿ ಹಾಕಿರುವ 'ಮಕ್ಕಳ್ ಸೆಲ್ವನ್' ವಿಜಯ್ ಸೇತುಪತಿ ಅಭಿನಯ ಇಡೀ ಸಿನಿಮಾದ ಎಲ್ಲರ ತೂಕಕ್ಕೆ ಸವಾಲೆಸದಂತಿದೆ. ನೆಗಟಿವ್ ಶೇಡ್ ನಲ್ಲೂ ಜನರ ಶಿಳ್ಳೆ ಕೇಕೆ ಸಂಪಾದಿಸಿಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ಅಮರೀಶ್ ಪುರಿ ಸಾಬೀತು ಪಡಿಸಿದ ವಾಸ್ತವ. ಅಂಥದ್ದೊಂದು ಕಲೆ ವಿಜಯ್ ಸೇತುಪತಿಯಲ್ಲಿರುವುದು ಮತ್ತೊಮ್ಮೆ ಅನಾವರಣಗೊಂಡಿದೆ. ಅದರಾಚೆಗೆ 'ಓಣಂ ಶುಭಾಶಯ' ಹೇಳಲು ಬರುವ ಸಂಜಯ್ ದತ್ ಕೂಡ‌ ಜವಾನ್ ಸಿನಿಮಾದ ಕ್ಲೈ ಮ್ಯಾಕ್ಸ್ ಅನ್ನು ಮತ್ತಷ್ಟು ರೋಚಕಗೊಳಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)