ಟಾಯ್ಲೆಟ್ ನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದೂ ಯುವತಿಯ ಚಿತ್ರೀಕರಣ ವಿಚಾರ: ಉಡುಪಿ ಎಸ್.ಪಿ.ಅಕ್ಷಯ್ ಮಚ್ಚೀಂದ್ರ ಸ್ಪಷ್ಟನೆ

Arun Kumar
0

ಉಡುಪಿ: ಉಡುಪಿಯ ನೇತ್ರ ಕಾಲೇಜು ಟಾಯ್ಲೆಟ್ ನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದೂ ಯುವತಿಯ ಚಿತ್ರೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್.ಪಿ.ಅಕ್ಷಯ್ ಮಚ್ಚೀಂದ್ರ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದರು.

ಕಳೆದ ವಾರ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಚಾರ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ವಿಚಾರದ ಜೊತೆ ಬೇರೆ ಬೇರೆ ಉದ್ದೇಶದಿಂದ ಮಾಹಿತಿಗಳು ಶೇರ್ ಆಗುತ್ತಿದೆ. ಹಿಡನ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ, ಬ್ಲ್ಯಾಕ್ ಮೇಲ್ ಬಗ್ಗೆ, ವೀಡಿಯೋ ಹರಿದಾಡಿದ ಬಗ್ಗೆ ನಾವು ಗಮನ ಇಟ್ಟಿದ್ದೇವೆ. ಬೇರೆ ಕಡೆಯ ವಿಡಿಯೋ ಶೇರ್ ಆಗುತ್ತಿದೆ, ವಾಯ್ಸ್ ಎಡಿಟ್ ಮಾಡಲಾಗಿದೆ. ಸತ್ಯಾಸತ್ಯತೆ ಗೊತ್ತಿಲ್ಲದೆ ಶೇರ್ ಮಾಡಿದರೆ ತಪ್ಪಾಗುತ್ತದೆ ಎಂದು ಅವರು ಹೇಳಿದರು.

ವಿಡಿಯೋ ವೈರಲ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ , ವಾಟ್ಸಾಪ್ ಮೇಲೆ ನಿಗಾ ಇರಿಸಲಾಗಿದೆ.  ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅಕೌಂಟ್ ಚೆಕ್ ಮಾಡಿದ್ದೇವೆ , ಇದೇ ವಿಚಾರದಲ್ಲಿ ಮನೆಯವರ ಬಳಿ ಮಾತನಾಡಿದ್ದೇವೆ. ಯಾವುದೇ ದುರುದ್ದೇಶದಿಂದ ಮಾಹಿತಿ ಪಡೆದುಕೊಂಡದ್ದಲ್ಲ ಎಂದು ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ರು.

ಸಾಮಾಜಿಕ ಹಿತಾಸಕ್ತಿಯಿಂದ ಸುಮೋಟೋ ತೆಗೆದುಕೊಳ್ಳಲು ಕ್ಲೂ ಸಿಗುತ್ತಿಲ್ಲ, ಯುವತಿಯರ ಮೊಬೈಲ್ ನಲ್ಲಿ ಯಾವುದೇ ಫೋಟೋ ವೀಡಿಯೋ, ಮಾಹಿತಿ ಸಿಗುತ್ತಿಲ್ಲ, ಕಾಲೇಜ್ ಹಂತದಲ್ಲಿ ವಿಚಾರಣೆ ಮಾಡಿದ್ದಾರೆ ಅವರ ನಿಯಮ ಪ್ರಕಾರ ವಿಚಾರಿಸಿದ್ದಾರೆ. ನಾವು ಗೆಳತಿಯರು ಫನ್ ಗೋಸ್ಕರ ಇದೆಲ್ಲಾ ನಡೆದಿದೆ  ಎಂದು ಕೈಬರಹದಲ್ಲಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ರು.

ಬೇಡದ ವಿಚಾರ ಹರಿಯಬಿಟ್ಟು ಜನರ ಮನಸ್ಸಲ್ಲಿ ಗೊಂದಲ ಸೃಷ್ಟಿಸುವ ಪೋಸ್ಟ್ ಹಾಕಬೇಡಿ. ದಾಖಲೆ ಇದ್ದರೆ ಹಂಚಿಕೊಳ್ಳಿ ಪೊಲೀಸ್ ತನಿಖೆಗೆ ಸಹಕರಿಸಿ. ತಪ್ಪಾದ, ಸುಳ್ಳು ಮಾಹಿತಿ ಫೋಟೋ ವೀಡಿಯೋ ಹಂಚಿಕೊಳ್ಳಬೇಡಿ ಎಂದು ಅವರು ಹೇಳಿದ್ರು…


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)