ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮಳೆಯಿಂದಾಗಿ ಸಣ್ಣಪುಟ್ಟ ಫಾಲ್ಸ್ ಗಳು ಮೈದುಂಬಿ ಹರಿಯುತ್ತಿದ್ದು, ಮನಮೋಹಕ ಫಾಲ್ಸ್ ನಲ್ಲಿ ಪ್ರವಾಸಿಗರ ವರ್ತನೆ ಎಲ್ಲೇ ಮೀರಿದೆ.
ದೃಶ್ಯ ಕಾವ್ಯವನ್ನು ಸೃಷ್ಟಿಸಿರುವ ಫಾಲ್ಸ್ ನಲ್ಲಿ ಯುವಕರ ಹುಚ್ಛಾಟ ಕಂಡು ಬರುತ್ತಿದೆ. ಫಾಲ್ಸ್ ನಲ್ಲಿ ಯುವಕರ ಮೋಜು ಮಸ್ತಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವಕನೋರ್ವ ಕೊಚ್ಚಿ ಹೋಗಿರುವ ಪ್ರಕರಣ ಕಣ್ಣ ಮುಂದೆ ಇದ್ದರೂ, ಜಲಪಾತಗಳ ಮುಂದೆ ಪ್ರವಾಸಿಗರು ಮೈಮರೆತು ತಮ್ಮ ಜೀವವನ್ನು ಪಣಕ್ಕಿಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದುರ್ಗದ ಹಳ್ಳಿಯ ಕೊಡುಗೆ ಫಾಲ್ಸ್ ನಲ್ಲಿ ಪ್ರವಾಸಿಗರ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಳೆಗಾಲದಲ್ಲಿ ಫಾಲ್ಸ್ ನ್ನು ದೂರದಿಂದ ನೋಡಿ ಖುಷಿಪಡೋದು ಬಿಟ್ಟು, ಅಪಾಯಕಾರಿ ಎಂದು ತಿಳಿದರೂ ಹುಚ್ಚು ಸಾಹಸಕ್ಕಿಳಿಯುತ್ತಿರುವುದು ವಿಪರ್ಯಾಸವಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.