ಆಗಸ್ಟ್‌ 1 ರಿಂದ ಬೆಂಗಳೂರು–ಮೈಸೂರು ಎಕ್ಸ್‌ ಪ್ರೆಸ್‌ ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಷೇಧ

Arun Kumar
0

ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ತಡೆಯಲು ಪೊಲೀಸ್ ಇಲಾಖೆ ಮುಂದಾಗಿದೆ.

ಆಗಸ್ಟ್‌ 1 ರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಷೇಧ ಹೇರಿದೆ ಈ ಬಗ್ಗೆ ಕಳೆದ ಜು.12ರಂದೇ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಆ.1 ರಿಂದ ನೂತನ ನಿಯಮ ಅನ್ವಯ ಆಗಲಿದೆ ಎಡಿಜಿಪಿ ಅಲೋಕ್ ಕುಮಾರ್ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ತಿಂಗಳ ಜುಲೈ 12ರಂದೇ ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿತ್ತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ತಡೆಯಲು ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳಿಗೆ ನಿಷೇಧ ಹೇರುವ ತೀರ್ಮಾನ ಮಾಡಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಿತ್ತು. ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ವೇಗಮಿತಿ ನಿಗದಿ ಮಾಡಲಾಗಿದ್ದು ಗಂಟೆಗೆ 80 ರಿಂದ 100 ಕಿ.ಮೀಗೆ ಮಿತಿ ಹೇರಿರುವ ಕುರಿತು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ತಿಂಗಳು ಹೆದ್ದಾರಿ ಪರಿಶೀಲನೆ ಮಾಡಿ ಹಲವು ನ್ಯೂನತೆಗಳನ್ನ ಸರಿಪಡಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಒಂದು ತಿಂಗಳ ಗಡುವು ನೀಡಿದ್ದರು‌. ಈ ಹಿನ್ನೆಲೆಯಲ್ಲಿ‌ ಇಂದು ಟಲೋಕ್‌ಕುಮಾರ್ ತಮ್ಮ ಕೆಲ‌ ಸಿಬ್ಬಂದಿಗಳ ಜೊತೆ ಮತ್ತೊಮ್ಮೆ ಹೆದ್ದಾರಿ ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ‌.

ಬಳಿಕ ಮಾತನಾಡಿದ ಅವರು, ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಇನ್ನೂ ಸಾಕಷ್ಟು ನ್ಯೂನತೆಗಳು ಹಾಗೆ ಇವೆ. ಅಪಘಾತ ತಡೆಗೆ ಪೊಲೀಸ್ ಇಲಾಖೆ ಸಾಕಷ್ಟು ಕೆಲಸ ಮಾಡಿದೆ. ಹಾಗಾಗಿ ಸಾವಿ‌ನ ಸಂಖ್ಯೆ ಕಡಿಮೆ ಆಗಿದೆ. ಆದ್ರೆ ಹೆದ್ದಾರಿ ಪ್ರಾಧಿಕಾರ ಎಂಟ್ರಿ, ಎಕ್ಸಿಟ್‌ ಸರಿಪಡಿಸುವುದು, ಸ್ಕೈವಾಕ್‌ ನಿರ್ಮಾಣ ಮಾಡಬೇಕಿದೆ. ನಾವು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಇರುವ ಸೌಲಭ್ಯ ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ಟೆಂಡರ್‌ ಆಗಿರೋದ್ರಿಂದ ಹೊಸ ಉಪಕರಣಗಳು ಬರೋದು ತಡವಾಗುತ್ತದೆ. ಹೆದ್ದಾರಿ ಪ್ರಾಧಿಕಾರಕ್ಕೂ ಕಠಿಣ ಸೂಚನೆ ನೀಡಲಾಗಿದೆ. ಪ್ರಾಧಿಕಾರ ಸುಮ್ಮನೆ ಆಟ ಆಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)