ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಕಾನೂನು ಕುಣಿಕೆ ಬಿಗಿಯಾಗಿದೆ. ಚಾರ್ಜ್ಶೀಟ್ನಲ್ಲಿ ಸ್ಫೋಟಕ ಸಂಗತಿಗಳು ಬಯಲಾಗಿದೆ. ಈ ಟೆನ್ಷನ್ನಲ್ಲಿ ದರ್ಶನ್ ಇದ್ದರೆ, ಬಳ್ಳಾರಿ ಜೈಲಿನ ಹೊರಗಡೆ ಮಹಿಳಾ ಅಭಿಮಾನಿಯೊಬ್ಬರು ಹುಚ್ಚಾಟ ಆಡಿದ್ದಾರೆ. ದರ್ಶನ್ರನ್ನು ನೋಡಲು ಬಳ್ಳಾರಿ ಜೈಲಿನ ಬಳಿ ಬಂದಿರುವ ಲಕ್ಷ್ಮಿ ಎನ್ನುವ ಅಭಿಮಾನಿಯೊಬ್ಬರು ನಾನು ದರ್ಶನ್ರನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದ್ದಾರೆ.
ದರ್ಶನ್ ಬಂಧನವಾದ ಬಳಿಕ ಕೆಲವು ಅಭಿಮಾನಿಗಳ ಹುಚ್ಚಾಟ ಮಿತಿ ಮೀರಿದೆ, ಆ ಪಟ್ಟಿಗೆ ಈಗ ಮಹಿಳಾ ಅಭಿಮಾನಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಲಕ್ಷ್ಮಿ ಎನ್ನುವ ದರ್ಶನ್ ಅಭಿಮಾನಿ ಬಳ್ಳಾರಿ ಸೆಂಟ್ರಲ್ ಜೈಲಿನ ಬಳಿ ಬಂದಿದ್ದು, ತಾನು ದರ್ಶನ್ರನ್ನು ನೋಡಬೇಕು ಎಂದು ಹಠ ಹಿಡಿದಿದ್ದಾರೆ.
ದರ್ಶನ್ಗೆ ಹಣ್ಣು ತಂದಿದ್ದ ಅವರು, ತಮ್ಮ ಐಡೆಂಟಿಟಿಗಾಗಿ ಆಧಾರ್ ಕಾರ್ಡ್ ಕೂಡ ತಂದಿದ್ದಾರೆ. ಆದರೆ ಜೈಲಿನ ಅಧಿಕಾರಿಗಳು ಅವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಲಕ್ಷ್ಮಿ ಅವರು ನಿರಾಸೆಗೊಂಡಿದ್ದು, ಒಳಗೆ ಬಿಡುವುದಾದರೆ ದರ್ಶನ್ರನ್ನು ಮದುವೆ ಆಗಲು ಸಿದ್ಧ ಎಂದಿದ್ದಾರೆ.
ಚಿಕನ್ ಮಾಡಿ ತರುತ್ತೇನೆ!
ಮಾಧ್ಯಮಗಳ ಜೊತೆ ಮಾತನಾಡಿರುವ ದರ್ಶನ್ ಅಭಿಮಾನಿ ಲಕ್ಷ್ಮಿ, ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಇದ್ದಾಗಲೂ ನಾನು ಹೋಗಿದ್ದೆ ಅಲ್ಲೂ ನನ್ನನ್ನು ಒಳಗೆ ಬಿಡಲಿಲ್ಲ. ಈಗ ಇಲ್ಲಿಗೆ ನೋಡಲು ಬಂದಿದ್ದೇನೆ, ಒಳಗಡೆ ಬಿಡುತ್ತಿಲ್ಲ. ದರ್ಶನ್ಗಾಗಿ ಹಣ್ಣು ತಂದಿದ್ದೇನೆ ಒಳಗೆ ಬಿಟ್ಟರೆ ಇದನ್ನು ಕೊಟ್ಟು, ಅವರನ್ನು ನೋಡಿಕೊಂಡು ಹೋಗುತ್ತೇನೆ. ಅವರಿಗೆ ಚಿಕನ್ ಊಟ ಬೇಕು ಎಂದರೆ ಮಾಡಿಕೊಂಡು ತರುತ್ತೇನೆ ಎಂದು ಹೇಳಿದ್ದಾರೆ.
ದರ್ಶನ್ ಏನು ಮಾಡಬಾರದ ತಪ್ಪು ಮಾಡಿದ್ದಾರೆ ಎಂದು ಬಳ್ಳಾರಿ ಜೈಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಜೈಲು ಸಿಬ್ಬಂದಿ ಜೊತೆಯೇ ಲಕ್ಷ್ಮಿ ಜಗಳ ಕೂಡ ಆಡಿದ್ದಾರೆ. ದರ್ಶನ್ರನ್ನು ನೋಡಲು ಸಂಬಂಧಿಕರಿಗೆ ಮಾತ್ರ ಅವಕಾಶ ಇದೆ ಎಂದಿದ್ದಕ್ಕೆ ನಾನು ಅವರನ್ನು ಮದುವೆ ಆಗಲೂ ಸಿದ್ಧವಾಗಿದ್ದೇನೆ ಎನ್ನುವ ಮೂಲಕ ಜೈಲಿನ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಫೋಟೊ ವೈರಲ್
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಸ್ಫೋಟಕ ಸಂಗತಿಗಳು ಚಾರ್ಜ್ಶೀಟ್ನಲ್ಲಿವೆ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಬಟ್ಟ ಬಿಚ್ಚಿಸಿ ಹಲ್ಲೆ ಮಾಡಿರುವ ಫೋಟೊ ಇದೀಗ ವೈರಲ್ ಆಗಿದೆ. ರೇಣುಕಾಸ್ವಾಮಿಗೆ ಕ್ರೂರವಾಗಿ ಹಿಂಸೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಮಾಹಿತಿ ನೀಡಲಾಗಿದೆ.
ಪವಿತ್ರಾ ಗೌಡ ಅವರನ್ನೇ ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿ ಮಾಡಿದ್ದು, ದರ್ಶನ್ ಎ2 ಆರೋಪಿಯಾಗಿದ್ದಾರೆ. ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಸದ್ಯ ರೇಣುಕಾಸ್ವಾಮಿ ಫೋಟೊ ಇದೀಗ ಹತ್ಯೆಯ ಭೀಕರತೆ ಎಷ್ಟಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕೊಲೆಯಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ ನೇರವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.