ಚಿತ್ರದುರ್ಗ, ಸೆಪ್ಟೆಂಬರ್, 05: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಗ್ಯಾಂಗ್ ವಿರುದ್ಧ ಪೊಲೀಸರು ಈಗಾಗಲೇ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮೃತ ರೇಣುಕಾಸ್ವಾಮಿಯ ಫೋಟೋ ವೈರಲ್ ಆಗಿದ್ದು, ಈ ಬಗ್ಗೆ ಇದೀಗ ಭಾರೀ ಚರ್ಚೆಗಳು ಶುರುವಾಗಿವೆ.
ಪಟ್ಟಣಗೆರೆ ಶೆಡ್ನಲ್ಲಿ ಲಾರಿಯ ಮುಂದೆ ಕುಳಿತು ನನ್ನನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ಎಂದು ಡಿ & ಗ್ಯಾಂಗ್ಗೆ ಬೇಡಿಕೊಂಡಿದ್ದಾರೆ ಎನ್ನಲಾದ ಫೋಟೋಗಳು ಇದೀವ ಭಾರೀ ಆಗಿವೆ. ಇನ್ನು ಈ ಬಗ್ಗೆ ಮಾತನಾಡಿದ ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಅವರು, ಡಿ ಗ್ಯಾಂಗ್ ಮಾಡಿದ ಕೃತ್ಯ ಭಾಯನಕ ಕೃತ್ಯ ಇದ್ದಾಗಿದ್ದು, ಈ ಫೋಟೋವನ್ನು ನೋಡಲೂ ಆಗುವುದಿಲ್ಲ. ಆ ದೃಶ್ಯಗಳನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ ಎಂದು ತಿಳಿಸಿದರು. ಅಲ್ಲದೆ ಪವಿತ್ರಾ ಗೌಡ ವಿರುದ್ಧ ಕೆಂಡಕಾರಿದ್ದಾರೆ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ & ಗ್ಯಾಗ್ ಜೊತೆ ಸೇರಿ ಪವಿತ್ರಾ ಗೌಡ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾಗಿದೆ. ಇನ್ನು ಪವಿತ್ರಾ ಗೌಡ ಚಪ್ಪಲಿಯಲ್ಲಿ ರೇಣುಕಾಸ್ವಾಮಿಗೆ ಹೊಡೆದಿರುವ ವಿರುದ್ಧ ವ್ಯಾಪಕ ಆಕ್ರೊಶಗಳು ಭುಗಿಲೆದ್ದಿವೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿ & ಗ್ಯಾಂಗ್ ಭಯಾನಕವಾದ ಕ್ರೌರ್ಯ ಮೆರೆದಿದ್ದಾರೆ. ಬೇಡಿಕೊಂಡರೂ, ಕೇಳಿಕೊಂಡ್ರೂ ಬಿಟ್ಟಿಲ್ಲ. ಅಶ್ಲೀಲ ಸಂದೇಶ ಕಳುಹಿಸಿದ್ದು ತಪ್ಪು, ಆದರೆ ಅದಕ್ಕೆ ಕಾನೂನು ಇದೆ. ಅದಕ್ಕೆ ಕೊಲೆ ಮಾಡುವ ಹಂತಕ್ಕೆ ಇಳಿದಿರುವುದು ಎಷ್ಟರ ಮಟ್ಟಿಗೆ ಸರಿ," ಎಂದು ಪ್ರಶ್ನಿಸಿದರು.
"ಹೀಗೆ ಮೆಸೇಜ್ ಕಳಿಸಿದ್ರೆ ಕೊಲೆ ಅನ್ನೋದಾದ್ರೆ, ಪ್ರತಿ ದಿನ ಎಷ್ಟು ಕೊಲೆ ಆಗಬೇಕು. ಪವಿತ್ರಾ ಗೌಡ ತನ್ನ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಹೆಣ್ಣು ಅಂದ್ರೆ ಕ್ಷಮಯಾಧರಿತ್ರಿ ಅಂತಾರೆ. ಆದ್ರೆ ಇಷ್ಟು ಕ್ರೌರ್ಯ ಯಾಕೆ ಅಂತಾ ಗೊತ್ತಾಗಲಿಲ್ಲ?, ಹೆಣ್ಣು ಎಂಬ ಪದದ ಅರ್ಥವೇ ಪವಿತ್ರಾಗೌಡಗೆ ಗೊತ್ತಿಲ್ಲ. ರೇಣುಕಾಸ್ವಾಮಿ ತಪ್ಪು ಮಾಡಿದ್ರೆ ನಮಗೆ ಹೇಳಬೇಕಿತ್ತು. ನಾವು ಬುದ್ಧಿ ಹೇಳಿ ಸರಿ ಮಾಡುತ್ತಿದ್ದೆವು," ಎಂದು ಹೇಳಿದರು.
ಇಂತಹ ಶಿಕ್ಷೆ ನೋಡಿದ್ದು ಮಾತ್ರ ಕ್ರೌರ್ಯ, ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು," ಎಂದು ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಆಗ್ರಹಿಸಿದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.