ಲೆಬನಾನ್‌ನ ಹಿಜ್ಭುಲ್ಲಾ ಘಟಕಗಳಲ್ಲಿ ವಾಕಿ-ಟಾಕಿಗಳು ಸ್ಫೋಟ; 9 ಮಂದಿ ಸಾವು, 300 ಮಂದಿಗೆ ಗಾಯ

Arun Kumar
0

ಲೆಬನಾನ್ನಾದ್ಯಂತ ಹಿಜ್ಬುಲ್ಲಾ ಹಿಡಿತದ ಪ್ರದೇಶಗಳಲ್ಲಿ ವಾಕಿ-ಟಾಕಿಗಳು ಸ್ಫೋಟಗೊಂಡಿದ್ದರಿಂದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೇಜರ್ಗಳು ಸ್ಫೋಟಗೊಂಡು ಹನ್ನೆರಡು ಜನ ಸಾವನ್ನಪ್ಪಿ 3,000 ಮಂದಿ ಗಾಯಗೊಂಡ ಬಳಿಕ ಈ ಘಟನೆ ನಡೆದಿದೆ.

ಎಷ್ಟು ಸಂಖ್ಯೆಯ ವಾಕಿ-ಟಾಕಿಗಳು ಸ್ಫೋಟಗೊಂಡಿವೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಪೂರ್ವ ಲೆಬನಾನ್ನ ವಿವಿಧ ಜಾಗಗಳಲ್ಲಿ ಲ್ಯಾಂಡ್ಲೈನ್ ಫೋನ್ಗಳು ಕೂಡ ಸ್ಫೋಟಗೊಂಡಿರುವುದಾಗಿ ವರದಿಯಾಗಿದೆ. ಐದು ತಿಂಗಳ ಹಿಂದೆ ವೈರ್ಲೆಸ್ ರೇಡಿಯೊ ಸಾಧನಗಳು ಮತ್ತು ವಾಕಿ-ಟಾಕಿಗಳನ್ನು ಖರೀದಿ ಮಾಡಲಾಗಿದೆ ಎನ್ನಲಾಗಿತ್ತು, ಪೇಜರ್ಗಳನ್ನು ಕೂಡ ಇದೇ ಸಂದರ್ಭದಲ್ಲಿ ಖರೀದಿ ಮಾಡಿರುವುದಾಗಿ ಹೇಳಿದೆ.

ದಕ್ಷಿಣ ಲೆಬನಾನ್ ಮತ್ತು ಬೈರುತ್ನ ವ್ಯಾಪ್ತಿಯಲ್ಲಿ ಇಂದು ಸ್ಫೋಟಗಳು ನಡೆದಿವೆ. ಮಂಗಳವಾರ ನಡೆದ ಪೇಜರ್ ಸ್ಫೋಟಗಳಲ್ಲಿ ಸಾವನ್ನಪ್ಪಿದವರಿಗೆ ಹಿಜ್ಬುಲ್ಲಾ ಆಯೋಜಿಸಿದ್ದ ಅಂತ್ಯಕ್ರಿಯೆಯ ಬಳಿ ಕೂಡ ಸ್ಫೋಟ ಸಂಭವಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇಸ್ರೇಲ್ ಮೇಲೆ ದಾಳಿ
ಪೇಜರ್ ಸ್ಫೋಟಗೊಂಡು ಸಾವಿರಾರು ಸದಸ್ಯರು ಗಾಯಗೊಂಡಿದ್ದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಇಸ್ರೇಲಿ ಫಿರಂಗಿದಳದ ಸ್ಥಾನಗಳ ಮೇಲೆ ರಾಕೆಟ್ಗಳಿಂದ ದಾಳಿ ಮಾಡಿದೆ ಎಂದು ವರದಿಯಾಗಿದೆ.

ಇಸ್ರೇಲ್ ಮೇಲೆ ಆರೋಪ, ಹೆಜ್ಬೊಲ್ಲಾ ಆಮದು ಮಾಡಿಕೊಂಡ ಪೇಜರ್ಗಳಲ್ಲಿ ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆ ಮೊಸಾದ್ ಸ್ಫೋಟಕಗಳನ್ನು ಸೇರಿಸಿದೆ ಎಂದು ಲೆಬನಾನಿನ ಭದ್ರತಾ ಮೂಲಗಳು ರಾಯಿಟರ್ಸ್ಗೆ ತಿಳಿಸಿದೆ ಎಂದು ವರದಿಯಾಗಿದೆ.

ಪೇಜರ್ ಸ್ಫೋಟಗೊಂಡ ಘಟನೆಯಲ್ಲಿ ಹನ್ನೆರಡು ಮಂದಿ ಸಾವನ್ನಪ್ಪಿದ್ದು, 2800 ಜನ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಖಚಿತಪಡಿಸಿದ್ದಾರೆ. ಮೃತಪಟ್ಟವರಲ್ಲಿ ಒಬ್ಬ ಹುಡುಗಿ ಕೂಡ ಇದ್ದಳು ಎಂದು ಹೇಳಿದ್ದಾರೆ. ಗಾಯಗೊಂಡವರಲ್ಲಿ 200 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.

ಪೇಜರ್ ಸ್ಫೋಟಗೊಂಡಿರುವ ಘಟನೆಯಲ್ಲಿ ಲೆಬನಾನ್ನಲ್ಲಿನ ತನ್ನ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ನ ರಾಜ್ಯ ಮಾಧ್ಯಮ ವರದಿಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)