Bengaluru Suburban Rail Phase-2: ರಾಜ್ಯ ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಲಿದೆ. ಅಲ್ಲದೆ, ದೊಡ್ಡ ದೊಡ್ಡ ಕಂಪನಿಗಳು ಕೂಡ ತಲೆ ಎತ್ತುತ್ತಲಿದ್ದು, ಇದಕ್ಕೆ ಪ್ರಮುಖವಾಗಿ ಬೇಕಾಗಿರುವ ಸಾರಿಗೆ ವಿಭಾಗದಲ್ಲಿ ಕೂಡ ಅಭಿವೃದ್ಧಿಯಾಗುತ್ತಲೇ ಇದೆ. ಹಾಗಾದರೆ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ ಎಲ್ಲಿಗೆ ಬಂದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ 2ನೇ ಹಂತ 142 ಕಿಲೋ ಮೀಟರ್ ಮಾತ್ರ ಕ್ರಮಿಸುವ ಸಾಧ್ಯತೆ ಇದೆ. ಈ ಕುರಿತು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲು ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ಕೆ-ರೈಡ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವಾರ ವಿಧಾನಸೌಧದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಅವರು, ರೈಲ್ವೆ ಮತ್ತು ಕೆ-ರೈಡ್ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೆ-ರೈಡ್ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ
ಕೆ-ರೈಡ್ನ ಉನ್ನತ ಅಧಿಕಾರಿಯೊಬ್ಬರು ಟಿಎನ್ಐಇಗೆ ತಿಳಿಸಿದರು, "ಭವಿಷ್ಯದಲ್ಲಿ ಬೆಂಗಳೂರು ವಿಭಾಗದ ವೃತ್ತಾಕಾರದ ರೈಲು ಯೋಜನೆ ಮತ್ತು ರೈಲ್ವೆಯ ಚಾಲ್ತಿಯಲ್ಲಿರುವ ನಾಲ್ಕು ಪಟ್ಟು ಮತ್ತು ದ್ವಿಗುಣಗೊಳಿಸುವ ಯೋಜನೆಗಳೊಂದಿಗೆ, ನಾವು ವಿಸ್ತರಿಸುವ ಮಾರ್ಗಗಳಲ್ಲಿ ಉಪನಗರ ರೈಲಿನ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ. ಆರಂಭದಲ್ಲಿ 452 ಕಿ.ಮೀ.ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಕಾಣೆಯಾದ ಭಾಗಗಳಲ್ಲಿ (ರೈಲು ಸಂಪರ್ಕವಿಲ್ಲದಿರುವಲ್ಲಿ) ಮಾತ್ರ ಉಪನಗರ ನೆಟ್ವರ್ಕ್ ಒದಗಿಸಲು ನಮ್ಮನ್ನು ಕೇಳಲಾಗಿದೆ
ಭವಿಷ್ಯದಲ್ಲಿ ಬೆಂಗಳೂರು ವಿಭಾಗೀಯ ವರ್ತುಲ ರೈಲು ಮಾರ್ಗ ಮತ್ತು ಜೋಡಿ ಮಾರ್ಗದ ಯೋಜನೆ ಕಾಮಗಾರು ನಡೆಯುತ್ತಿದೆ. ಆದ್ದರಿಂದ ಈ ಹಿಂದೆ ಪ್ರಸ್ತಾಪಿಸಿದಂತೆ 452 ಕಿಲೋ ಮೀಟರ್ ವ್ಯಾಪ್ತಿಯ ಉಪನಗರ ರೈಲಿನ ಅಗತ್ಯವಿಲ್ಲ ಎಂದು ತೀರ್ಮಾನ ಮಾಡಲಾಗಿದೆ. ರೈಲ್ವೆ ಸಂಪರ್ಕ ಇಲ್ಲದ ಕಡೆಗಳಲ್ಲಿ ಉಪ ನಗರ ರೈಲು ಯೋಜನೆ ವಿಸ್ತರಿಸಲು ಸೂಚಿಸಲಾಗಿದೆ ಎಂದು ಕೆ-ರೈಡ್ ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಅಂತಾ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕಳೆದ ವರ್ಷ ಅಂದರೆ 2023ರ ಆರಂಭದಲ್ಲಿ ಕೆ-ರೈಡ್ ಹಂತದಲ್ಲಿ 452 ಕಿ.ಮೀ. ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದು 148.17 ಕಿಲೋ ಮೀಟರ್ನ ಮೊದಲನೇ ಹಂತದ ಯೋಜನೆಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ವಿಸ್ತರಿಸಿದೆ. ಇದು ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರದಿಂದ ಕೋಲಾರ, ಚಿಕ್ಕಬಾಣಾವರದಿಂದ ತುಮಕೂರು, ಚಿಕ್ಕಬಾಣಾವರದಿಂದ ಮಾಗಡಿ, ಕೆಂಗೇರಿಯಿಂದ ಮೈಸೂರು, ವೈಟ್ ಫೀಲ್ಸ್ನಿಂದ ಬಂಗಾರಪೇಟೆ, ಹೀಲಲಿಗೆಯಿಂದ ಹೊಸೂರು, ರಾಜಾನುಕುಂಟೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುತಿತ್ತು.
ಆದರೆ ನವೆಂಬರ್ನಲ್ಲಿ ಕೆ-ರೈಡ್ನಿಂದ ಪೂರ್ವ ಕಾರ್ಯಸಾಧ್ಯತೆ ಅಧ್ಯಯನ ನಡೆಸುವ ಮನವಿಯನ್ನು ನೈರುತ್ಯ ರೈಲ್ವೆ ತಿರಸ್ಕರಿಸಿತ್ತು. 142 ಕಿಲೋ ಮೀಟರ್ ಮಾತ್ರ ರೈಲು ಚಲಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ 18 ಕಿ.ಮೀ, ಚಿಕ್ಕಬಾಣಾವರದಿಂದ ದಬ್ಬಾಸ್ ಪೇಟೆ 36 ಕಿ.ಮೀ., ಚಿಕ್ಕಬಾಣಾವರದಿಂದ ಮಾಗಡಿ ರಸ್ತೆ 45 ಕಿಲೋ ಮೀಟರ್.
ಹೀಲಲಿಗೆಯಿಂದ ಆನೇಕಲ್ ರಸ್ತೆ 24 ಕಿಲೋ ಮೀಟರ್ ರಾಜಾನುಕುಂಟೆಯಿಂದ ಓಡೇರಹಳ್ಳಿ 8 ಕಿಲೋ ಮೀಟರ್, ಕೆಂಗೇರಿಯಿಂದ ಹೆಜ್ಜಾಲ 11 ಕಿಲೋ ಮೀಟರ್ ಇರಲಿದೆ. ಇವುಗಳು ಸದ್ಯ ಅಸ್ತಿತ್ವದಲ್ಲಿರುವ ಉಪನಗರ ರೈಲಿನ ಸಣ್ಣ ವಿಸ್ತರಿತ ಮಾರ್ಗಗಳಾಗಿವೆ. ಆದ್ದರಿಂದ ಮುಂಬರುವ ಹೊರ ವರ್ತುಲ ರೈಲು ಯೋಜನೆಗೆ ಸೇರಲಿದೆ. ಕೆ-ರೈಡ್ ಶೀಘ್ರದಲ್ಲೇ ರೈಲ್ವೆಗೆ ಈ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿ ಅವರ ಒಪ್ಪಿಗೆ ಪಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಯೋಜನೆಗೆ ವರದಿ ಸಿದ್ಧತೆ: ಇನ್ನು ಇತರ ರೈಲ್ವೆ ಯೋಜನೆಗಳಿಂದಾಗಿ ಮೂಲ ಹಂತ-2 ಯೋಜನೆ ಅನಗತ್ಯ ಆಗಿದೆ ಎಂದು ನಾವು ನೈರುತ್ಯ ರೈಲ್ವೆ ಮೂಲಕ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದೇವೆ. ಹೊಸ ಪ್ರಸ್ತಾವನೆಯನ್ನು ಸಲ್ಲಿಸಲು ಕೆ-ರೈಡ್ಗೆ ಸೂಚಿಸಿದ್ದೇವೆ. 23,000 ಕೋಟಿ ರೂಪಾಯಿಗಳ ವರ್ತುಲ ರೈಲು ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಇದು ವಡ್ಡರಹಳ್ಳಿ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಹೆಜ್ಜಾಲ ಮತ್ತು ಸೋಲೂರನ್ನು ಸಂಪರ್ಕಿಸುತ್ತದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಯೋಗೇಶ್ ಮೋಹನ್ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.