Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಇತ್ತ ಮೃತ ಚಿತ್ರದುರ್ಗದಲ್ಲಿರುವ ಮೃತ ರೇಣುಕಾಸ್ವಾಮಿ ಮನೆಗೆ ಭಾವನಾ ಬೆಳಗೆರೆ ಭೇಟಿ ನೀಡಿ ಮನೆಯಲ್ಲಿ ಇದ್ದ ಮೃತನ ಪತ್ನಿಗೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ಈ ವೇಳೆ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾವನಾ ಬೆಳಗೆರೆ ಅವರು, ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾರೆ. ಇನ್ನು ಪ್ರಕರಣದಲ್ಲಿ ನಟ ದರ್ಶನ್ ಅವರು ಮೃತ ರೇಣುಕಾ ಸ್ವಾಮಿಗೆ ಹೊಡೆದಿದ್ದಾರೆ, ಹೊಡೆಸಿದ್ದಾರೆ, ಹೋಡೆಯಿರಿ ಎಂದು ಹೇಳಿದ್ದಾರೆ ಎಂದರೇ ಅವರು ಶಿಕ್ಷೆಗೆ ಅರ್ಹರು ಆಗುತ್ತಾರೆ ಎಂದು ಭಾವನಾ ತಿಳಿಸಿದರು. ಇದು ಆಗಬಾರದು. ದರ್ಶನ್ ಆಗಲಿ ಅಥವಾ ಬೇರೆ ಯಾರೇ ಆಗಲಿ ಅವರಿಗೆ ಪ್ರಾಣ ತೆಗೆಯಲು ಯಾವ ಹಕ್ಕು ಇದೆ ಎಂದು ಪ್ರಶ್ನೆ ಮಾಡಿದ್ದಾರೆ.
ರೇಣುಕಾ ಸ್ವಾಮಿ ಮನೆ ಪರಿಸ್ಥಿತಿ ನೋಡಿ ಬೇಜಾರಾಯ್ತು. ಪತ್ನಿಗೆ ಸಾಂತ್ವನ ಹೇಳಿದ್ದೇನೆ, ನನಗೆ ಮಾಧ್ಯಮಗಳಿಂದ ವಿಷಯ ತಿಳಿಯಿತು. ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದು ಗೊತ್ತಾಗಿದೆ. ಹತ್ತೇ ಹತ್ತು ನಿಮಿಷ ಆಯ್ತು ಮಾಹಿತಿ ಗೊತ್ತಾಗಿದೆ. ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗುತ್ತಿದೆ. ರೇಣುಕಾಸ್ವಾಮಿ ಅಜ್ಜಿ ಏನಾದ್ರೂ ಪಂಕ್ಷನ್ ಇದಿಯಾ ಅಂತ ಪ್ರಶ್ನೆ ಮಾಡಿದ್ರು. ಯಾರಿಗೂ ಕೂಡಾ ಮನೆಯಲ್ಲಿ ವಿಷಯ ಗೊತ್ತಿಲ್ಲ. ರೇಣುಕಾಸ್ವಾಮಿ ಮನೆಯ ಪರಿಸ್ಥಿತಿ ನೋಡಿ ಬೇಜಾರ್ ಆಯ್ತು ಎಂದರು.
ರೇಣುಕಾಸ್ವಾಮಿ ಅಮಾಯಕ ಹುಡುಗ ಇದ್ದಾನೆ. ಇವರು ಟಿವಿ ಸಹ ನೋಡಿಲ್ಲ, ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಅವನು ಫೋನ್ ಮಾಡಿದ್ದ ವೇಳೆ ಪತ್ನಿ ಫೋನ್ ಪಿಕ್ ಮಾಡಿಲ್ಲ. ಅಕ್ಕ ಅವರು ಮೃತಪಟ್ಟಿದ್ದಾರೆ ಅಲ್ವ, ಬದುಕಿಸೋದಕ್ಕೆ ಸಾಧ್ಯವಿಲ್ಲ ಅಲ್ವ? ಮನೆಯಲ್ಲಿ ದರ್ಶನ್ ಅವರ ಯಾವುದೇ ಫೋಟೋಗಳಿಲ್ಲ. ಪವಿತ್ರಾ ಗೌಡಗೆ ಕಮೆಂಟ್ ಹಾಕಿದ್ದ ಎಂಬ ವಿಚಾರ ಗೊತ್ತಿಲ್ಲ ಎಂದರು.
ಇನ್ನು ಇಂತಹ ಕಾಮೆಂಟ್ಗೆ ಸೈಬರ್ ಕ್ರೈಮ್ ಇದೆ. ಅಲ್ಲಿ ದೂರು ಕೊಟ್ರೆ ಸಾಕು. ಒಂದು ಪರಿಜ್ಞಾನ ಇರ್ಬೇಕು, ಪ್ರಾಣ ತೆಗೆಯುವ ಮಟ್ಟಕ್ಕೆ ಇಳಿಯಬಾರದು. ಸ್ಟಾರ್ ಗಿರಿಗೆ ಇದೊಂದು ಶೇಮ್ ಆಗಿದೆ. ಇಂತಹ ಕೃತ್ಯಕ್ಕೆ ನಮ್ಮ ಖಂಡನೆ ಇದೆ. ಅಪರಾಧ ಮಾಡಿದ್ದ ಸತ್ಯ ಆದರೆ ಖಂಡಿತ ಶಿಕ್ಷೆ ಆಗಬೇಕು. ದರ್ಶನ್ ಇದರಲ್ಲಿ ಭಾಗಿಯಾಗಿದ್ರೆ ಶಿಕ್ಷೆಯಾಗಬೇಕು ಎಂದು ಭಾವನಾ ಆಗ್ರಹಿಸಿದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.