ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತನಾಗಿರುವ ನಟ ದರ್ಶನ್ ಚಟಕ್ಕೂ ಕೂಡ ದಾಸನಾಗಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಮಂಗಳವಾರ ಬೆಳಗ್ಗೆಯೇ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಂಜೆ ಕೋರ್ಟ್ಗೆ ಹಾಜರುಪಡಿಸಿದ್ದರು, ಕೋರ್ಟ್ ದರ್ಶನ್, ಪವಿತ್ರಾಗೌಡ ಸೇರಿ 13 ಮಂದಿಯನ್ನು 6 ದಿನ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಒಂದು ದಿನ ಪೊಲಿಸ್ ಠಾಣೆಯಲ್ಲಿ ಕಳೆಯುತ್ತಿದ್ದಂತೆ ದರ್ಶನ್ಗೆ ಸಿಗರೇಟ್ ಸೇದುವ ಬಯಕೆ ಹೆಚ್ಚಾಗಿದ್ದು ಸಿಗರೇಟ್ ಕೊಡುವಂತೆ ಪೊಲೀಸರಿಗೆ ಪರಿಪರಿಯಾಗಿ ಮನವಿ ಮಾಡಿದ್ದಾರೆ.
ನನ್ನ ಕೈ ನಡುಗುತ್ತಿದೆ ದಯವಿಟ್ಟು ಒಂದು ಸಿಗರೇಟ್ ಸೇದಲು ಅವಕಾಶ ಕೊಡಿ ಎಂದು ಪೊಲೀಸರ ಬಳಿ ಕೇಳಿಕೊಂಡಿರುವುದಾಗಿ ವರದಿಯಾಗಿದೆ. ಅನೇಕ ಸಂದರ್ಶನಗಳಲ್ಲಿ ದರ್ಶನ್ ನಾನು ಬೆಳಗ್ಗೆ ಎದ್ದ ತಕ್ಷಣವೇ ಸಿಗರೇಟ್ ಸೇದುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೆ ಅವರಿಗೆ ಈ ಮಟ್ಟದಲ್ಲಿ ಸಿಗರೇಟ್ ಸೇದುವ ಚಟ ಎನ್ನುವುದು ಜಗಜ್ಜಾಹೀರಾಗಿದೆ.
ಸ್ಥಳ ಮಹಜರು ಮಾಡಿದ ಪೊಲೀಸರು
ರೇಣುಕಾಸ್ವಾಮಿ ಕೊಲೆಯಾದ ಪಟ್ಟಣಗೆರೆ ಶೆಡ್ನಲ್ಲಿ ಪೊಲೀಸರು ಇಂದು ಸ್ಥಳ ಮಹಜರು ಮಾಡಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಸ್ಥಳಕ್ಕೆ ಕರೆತಂದ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.
ಬೆಳಗ್ಗೆ ದರ್ಶನ್, ಪವಿತ್ರಾ ಗೌಡರನ್ನು ಹೊರತುಪಡಿಸಿ ಇತರೆ ಆರೋಪಿಗಳನ್ನು ಕರೆ ತಂದು ರೇಣುಕಾಸ್ವಾಮಿ ಶವ ಎಸೆದಿದ್ದ ಸುಮನಹಳ್ಳಿ ಸಮೀಪದ ಅನುಗ್ರಹ ಅಪಾರ್ಟ್ಮೆಂಟ್ ಬಳಿ ಇರುವ ಮೋರಿ ಬಳಿ ಸ್ಥಳ ಮಹಜರು ನಡೆಸಲಾಗಿತ್ತು.
ಮಧ್ಯಾಹ್ನದ ಬಳಿಕ ಪಟ್ಟಣಗೆರೆಯಲ್ಲಿರುವ ಶೆಡ್ಗೆ ದರ್ಶನ್, ಪವಿತ್ರಾ ಗೌಡರನ್ನು ಕರೆತಂದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಸ್ಥಳ ಮಹಜರು ಮಾಡಿದರು.
ರಾತ್ರಿ ಬಿರಿಯಾನಿ ಊಟ
ಮಂಗಳವಾರ ಬೆಳಗ್ಗೆ ದರ್ಶನ್ ಸೇರಿ 13 ಆರೋಪಿಗಳನ್ನು ಬಂಧಿಸಿದ್ದು, ರಾತ್ರಿ ಎಲ್ಲಾ ಆರೋಪಿಗಳಿಗೆ ಬಿರಿಯಾನಿ ತರಿಸಿಕೊಡಲಾಗಿದೆ. ಕೊಲೆ ಆರೋಪಿಗಳಿಗೆ ಬಿರಿಯಾನಿ ತಂದುಕೊಟ್ಟಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ತಪ್ಪು ಮಾಡಿದವರು ಯಾರೇ ಆಗಲಿ ನೀರು ಕುಡಿಯಲೇಬೇಕು.
ಪ್ರತ್ಯುತ್ತರಅಳಿಸಿಹೌದು ನಿಜ
ಅಳಿಸಿSuper 👍😍
ಅಳಿಸಿ