ದರ್ಶನ್ ತೂಗುದೀಪ 3 ತಿಂಗಳು ಹೊರಗೆ ಬರೋದು ಡೌಟ್?

Arun Kumar
0

ದರ್ಶನ್ ತೂಗುದೀಪ ಅವರ ವಿರುದ್ಧ ಇದೀಗ ಕೊಲೆ ಆರೋಪ ಕೇಳಿಬಂದಿರುವ ಕಾರಣಕ್ಕೆ ದೊಡ್ಡ ಬಿರುಗಾಳಿ ಸೃಷ್ಟಿಯಾಗಿದೆ. ಅಲ್ಲದೆ ನಟ ದರ್ಶನ್ ಅವರು ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲಿದ್ದಾರಾ? ಎಂಬ ಅನುಮಾನ ಕೂಡ ಕಾಡುತ್ತಿದೆ. ಹೀಗಿದ್ದಾಗಲೇ ದರ್ಶನ್ A-2 ಆರೋಪಿ ಆಗಿದ್ದರೆ, ಪವಿತ್ರ ಗೌಡ A-1 ಆರೋಪಿ ಆಗಿದ್ದಾರೆ. ಹಾಗಾದ್ರೆ ಈಗ ದರ್ಶನ್ಗೆ ಜಾಮೀನು ಸಿಗದೇ ಇದ್ದರೆ ಜೈಲಿಗೆ ಹೋಗುತ್ತಾರಾ? ಹೊರಗೆ ಬರಲು ಎಷ್ಟು ವರ್ಷ ಬೇಕಾಗಬಹುದು? ಮಾಹಿತಿ ತಿಳಿಯಲು ಮುಂದೆ ಓದಿ.

ಅಂದಹಾಗೆ ಈ ಹಿಂದೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ & ಪವಿತ್ರ ಗೌಡ ಜಗಳ ದೊಡ್ಡ ಕಂಟಕ ತಂದಿತ್ತು. ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಆತ್ಮೀಯತೆ ಇದ್ದ ಕಾರಣ ಈ ರೀತಿ ಜಗಳ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಜಗಳ ಶುರುವಾದಾಗ ಈಗ ಕೊಲೆ ಆಗಿರುವ ರೇಣುಕಾಸ್ವಾಮಿ, ಪವಿತ್ರ ಗೌಡ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈಗ ಅದೇ ರೇಣುಕಾಸ್ವಾಮಿ ಕೊಲೆ ಆಗಿದ್ದು, ಈ ವಿಚಾರದಲ್ಲಿ ದರ್ಶನ್ ಅವರ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದ್ದು. ಹೀಗಿದ್ದಾಗ ನಟ ದರ್ಶನ್ಗೆ ಜಾಮೀನು ಸಿಗದೇ ಇದ್ದರೆ, ಹೊರಗಡೆ ಬರಲು ಎಷ್ಟು ವರ್ಷ ಬೇಕಾಗಬಹುದು?

3 ತಿಂಗಳ ಕಾಲ ಜೈಲು ಗ್ಯಾರಂಟಿ?
ನಟ ದರ್ಶನ್ ವಿರುದ್ಧ ಇದೀಗ ಕೇಳಿಬಂದಿರುವುದು ಕೊಲೆ ಆರೋಪ ಆಗಿದೆ. ಈ ಕಾರಣಕ್ಕೆ ದರ್ಶನ್ ಅವರು ಸುಲಭವಾಗಿ ಜಾಮೀನು ಪಡೆಯುವುದು ಅಸಾಧ್ಯ. ಮತ್ತೊಂದ್ಕಡೆ, ಈಗ ಜಾಮೀನಿಗೆ ಪ್ರಯತ್ನ ಶುರು ಮಾಡಿದರೂ, ಮುಂದಿನ 3 ತಿಂಗಳ ಕಾಲ ಜಾಮೀನು ಸಿಗುವುದೇ ಅನುಮಾನ ಅಂತಿದ್ದಾರೆ ಕಾನೂನು ತಜ್ಞರು. ಹೀಗಾಗಿ ಭಾರಿ ದೊಡ್ಡ ಸಂಚಲನ ಸೃಷ್ಟಿ ಆಗಿದೆ. ಮತ್ತೊಂದು ಕಡೆ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವುದು ಕೂಡ ಬಹುತೇಕ ಪಕ್ಕಾ ಅಂತಿದ್ದಾರೆ ಅವರ ವಿರೋಧಿಗಳು!

ಅಭಿಮಾನಿಗಳ ಉಗ್ರ ಹೋರಾಟ?
ದರ್ಶನ್ ಅಭಿಮಾನಿಗಳು ಉಗ್ರ ಹೋರಾಟಕ್ಕೂ ಸಜ್ಜಾಗಿದ್ದಾರೆ, ಹೀಗಾಗಿ ಪೊಲೀಸರು ಕೂಡ ಪರಿಸ್ಥಿತಿ ನಿಭಾಸಲು ಸಜ್ಜಾಗಿದ್ದಾರೆ. ಅದರಲ್ಲೂ, ದರ್ಶನ್ರ ಮನೆ ಇರುವ ರಾಜರಾಜೇಶ್ವರಿ ನಗರದಲ್ಲಿ ಪರಿಸ್ಥಿತಿಯು ಕೈಮೀರುತ್ತಿದೆ. ಆರ್ಆರ್ ನಗರದಲ್ಲಿ ದರ್ಶನ್ ಅವರ ಫೋಟೋ ಇರುವ ಬಾವುಟ ಹಿಡಿದು ದರ್ಶನ್ ಅವರ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿ ಒಂದೇ ಕಡೆ ಸೇರಿದ್ದಾರೆ. ಪೊಲೀಸ್ ಸಿಬ್ಬಂದಿ ಕೂಡ ಕ್ರಮ ಕೈಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)