ಬೆಂಗಳೂರು, ಪುಣೆಯಂತಹ ದೊಡ್ಡ ನಗರಗಳಲ್ಲಿ ಊಟಕ್ಕಾಗಿ ಆನ್ಲೈನ್ನಲ್ಲಿ ಊಟ, ತಿಂಡಿ ಆರ್ಡರ್ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಇಂತಹ ಸಾಮಾನ್ಯ ಸಂಗತಿಗಳಲ್ಲಿ ಕೆಲವೊಮ್ಮೆ ಅಚ್ಚರಿ ವಿಷಯಗಳು, ನಿರ್ಲಕ್ಷ್ಯದ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ವರದಿ ಆಗುತ್ತಿವೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ (X) ಬಳಕೆದಾರರಾದ ಶೋಭಿತ್ ಸಿದ್ಧಾರ್ಥ್ ಎಂಬುವವರು, ಝೊಮಾಟೊ ಆರ್ಡರ್ನಿಂದ ಆದ ತೊಂದರೆ ಕುರಿತು ಪೋಸ್ಟ್ ಮಾಡಿ ವಿವರಿಸಿದ್ದಾರೆ. ಪತ್ನಿ ಗರ್ಭಿಣಿಗೆ ಝೊಮಾಟೊದಲ್ಲಿ 'ಪನೀರ್ ಥಾಲಿ' ಆರ್ಡರ್ ಮಾಡಿದ್ದ ಅವರು, ಸ್ವೀಕರಿಸಿದ್ದೇ ಬೇರೆ. ಸೂಕ್ತ ಸಮಯದಲ್ಲಿ ಊಟ ಮಾಡಲಾರದೆ ಆದ ಸಮಸ್ಯೆಯನ್ನು ಅವರು ತಿಳಿಸಿದ್ದಾರೆ.
ನನ್ನ ಗರ್ಭಿಣಿ ಹೆಂಡತಿಗಾಗಿ ನಾನು ಸಸ್ಯಾಹಾರಿ ಥಾಲಿ (ಪನೀರ್ ಥಾಲಿ) ಊಟವನ್ನು ಆರ್ಡರ್ ಮಾಡಿದ್ದೆ. ಸಸ್ಯಹಾರ ಆರ್ಡರ್ ಮಾಡಿದ ಬಳಿಕ, ಮಾಂಸಹಾರವನ್ನು ಸ್ವೀಕರಿಸುವುದು ಹೇಗೆ. ಈ ರೀತಿ ಅನೇಕರಿಗೆ ಇತ್ತೀಚಿಗೆ ಆಗುತ್ತಿದೆ. ದಯಮಾಡಿ ಇಂತಹ ತಪ್ಪುಗಳನ್ನು ಮಾಡದಂತೆ, ಸಸ್ಯಹಾರಿಗಳಿಗೆ ಮಾಂಸಹಾರ ವಿತರಣೆ ಆಗದಂತೆ ನೋಡಿಕೊಳ್ಳಿ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆ ಝೊಮಾಟೋ ಪ್ರತಿಕ್ರಿಯೆ ನೀಡಿದೆ.
ಪೋಸ್ಟ್ನಲ್ಲಿ ಏನಿದೆ?
ನಾನು ಮತ್ತು ನನ್ನ ಹೆಂಡತಿಗೆಂದು ಝೋಮಾಟೋದಲ್ಲಿ ಎರಡು ಊಟ ಆರ್ಡರ್ ಮಾಡಿದ್ದೆವು. ಒಂದು ಚಿಕನ್ ಮತ್ತು ಒಂದು ಪನೀರ್ ಆರ್ಡರ್ ಮಾಡಿದ್ದೆವು. ಮಗುವಿನ ನಿರೀಕ್ಷೆಯಲ್ಲಿರುವುದರಿಂದ ವೈದ್ಯರ ಸಲಹೆ ಮೇರೆಗೆ ಪತ್ನಿಗೆ ಮಾಂಸಾಹಾರ ಕೊಡುವುದು ನಿಲ್ಲಿಸಿದ್ದೇವೆ. ಹೀಗಾಗಿ ನನಗೆ ಚಿಕನ್ ಆಕೆಗೆ ಪನೀರ್ ಆರ್ಡರ್ ಮಾಡಿದ್ದೇ.
ಆದರೆ ಆರ್ಡರ್ ಮಾಡಿದ್ದನ್ನು ಕಳುಹಿಸುವ ಬದಲಾಗಿ ಎರಡು ಮಾಂಸಾಹಾರ ಥಾಲಿಗಳನ್ನೇ ಕಳಹಿಸಲಾಗಿದೆ. ಇದನ್ನು ತಿಂದರೆ ಮೊದಲ ತ್ರೈಮಾಸಿಕದಲ್ಲಿರುವ ಪತ್ನಿಗೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಶೋಭಿತ್ Zomato ಪ್ರತಿಕ್ರಿಯೆ
ಶೋಭಿತ್ ಅವರು ಮೇ 18 ರಂದು ಘಟನೆ ಬಗ್ಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ Zomato ಎರಡು ಊಟಗಳನ್ನು ಒಂದೆ ತೆರನಾಗಿ ನೀಡಲಾಗಿದೆ. ಇದರಿಂದ ನಿಮಗೆ ಆದ ನೋವಿಗೆ ನಮ್ಮ ವಿಷಾಧಿವಿದೆ. ಈ ಬಗ್ಗೆ ನಾವು ಅರ್ಥಮಾಡಿಕೊಳ್ಳುತ್ತೇವೆ.
ಗ್ರಾಹಕರ ಆಹಾರದ ಆದ್ಯತೆಗಳನ್ನು ನಾವು ಪರಿಗಣಿಸುತ್ತೇವೆ. ನಿಮ್ಮ ಆಹಾರವನ್ನು, ಆಹಾರದ ಆಯ್ಕೆಯನ್ನು ಅಗೌರವಿಸಬೇಕೆಂಬುದು ಎಂದಿಗೂ ನಮ್ಮ ಉದ್ದೇಶವಾಗಿಲ್ಲ. ಇದನ್ನು ಪರಿಶೀಲಿಸಲು ನಮಗೆ ಸ್ವಲ್ಪ ಸಮಯವನ್ನು ನೀಡಿ ಮತ್ತು ನಾವು ಕರೆ ಅಥವಾ ಇಮೇಲ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತೇವೆ ಎಂದು ತಿಳಿಸಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.