Mother Theresa: ವೆಬ್ ಸಿರೀಸ್ ಆಗಿ ಬರಲಿದೆ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೇಸಾ ಜೀವನ

Arun Kumar
0

ಬಡವರ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ, ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪಡೆದ ಮದರ್ ತೆರೇಸಾ (Mother Teresa) ಅವರ ಜೀವನ ಚರಿತ್ರೆ ವೆಬ್ ಸರಣಿ ರೂಪದಲ್ಲಿ ಮೂಡಿಬರಲಿದೆ. ಮಲಯಾಳಂ ನಿರ್ದೇಶಕ ಪಿ ಚಂದ್ರಕುಮಾರ್ ಅವರು ಮದರ್ ತೆರೇಸಾ ಅವರ ಜೀವನವನ್ನು 3 ಸೀಸನ್ಗಳಲ್ಲಿ ವೆಬ್ ಸರಣಿಯನ್ನು ಮಾಡಲು ಸಿದ್ಧರಾಗಿದ್ದಾರೆ

ಇದೊಂದು ಪ್ಯಾನ್ ಇಂಡಿಯಾ ವೆಬ್ಸೀರೀಸ್ ಆಗಿದ್ದು, ಚೆನ್ನೈ ಮೂನ್ ಮೂವೀಸ್ ಅಡಿಯಲ್ಲಿ ಮಲಯಾಳಂನ ಹಿರಿಯ ಚಲನಚಿತ್ರ ನಿರ್ದೇಶಕ ಪಿ ಚಂದ್ರಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. ಕ್ಯಾಥೋಲಿಕ್ ಚರ್ಚ್ ಕಲ್ಕತ್ತಾದ ಮಿಷನರೀಸ್ ಆಫ್ ಚಾರಿಟಿಯ ಸಂಸ್ಥಾಪಕರಾದ ಮದರ್ ಥೆರೆಸಾ ಅವರ ಜೀವನಗಾಥೆಯನ್ನು ಈ ವೆಬ್ ಸರಣಿಯಲ್ಲಿ ಹೇಳಲಾಗುತ್ತದೆ.

ಮದರ್ ತೆರೇಸಾ ಬೆಂಗಳೂರಿಗೂ ಇದೆ ನಂಟು
ಭಾರತದಲ್ಲಿ, ಬೆಂಗಳೂರಿನಲ್ಲಿ ತನ್ನ ಜೀವನದ ಬಹುಪಾಲು ಬದುಕಿದ ಅಲ್ಬೇನಿಯನ್ ಸನ್ಯಾಸಿನಿ ಮದರ್ ತೆರೇಸಾ ಪಾತ್ರವನ್ನು ನಿರ್ವಹಿಸುವ ನಾಯಕ ನಟಿಯನ್ನು ಹುಡುಕಾಡುತ್ತಿದ್ದಾರೆ. ವೆಬ್ ಸರಣಿಗೆ ಹೊಸ ಮುಖವನ್ನು ತಂಡ ಹುಡುಕುತ್ತಿದೆ. ಮದರ್ ತೆರೇಸಾ ಜೊತೆ ಕಾಲ ಕಳೆದ ಕೋಲ್ಕತ್ತಾ ಮೂಲದ ಪತ್ರಕರ್ತರೊಬ್ಬರು ಹೇಳಿದಂತೆ ಘಟನೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇನೆ ಎಂದು ನಿರ್ದೇಶಕ ಪಿ ಚಂದ್ರಕುಮಾರ್ ಹೇಳಿದ್ದಾರೆ.

ಮದರ್ ತೆರೇಸಾ ಅವರ ಜೀವಿತಾವಧಿಯಲ್ಲಿ ಅವರ ವಿರುದ್ಧ ಹೊರಿಸಲಾದ ಪ್ರಮುಖ ಆರೋಪವೆಂದರೆ ಅವರು ಧಾರ್ಮಿಕ ಮತಾಂತರ ಮತ್ತು ಪ್ರಚಾರಕ್ಕಾಗಿ ಭಾರತಕ್ಕೆ ಬಂದರು ಎಂಬುದು. ಈ ವೆಬ್ ಸರಣಿಯಲ್ಲಿ ಅದನ್ನು ಕೂಡ ಶೋಧಿಸಲಾಗುತ್ತದೆ. ಈ ಆರೋಪಗಳಲ್ಲಿ ಯಾವುದೇ ಸತ್ಯವಿದ್ದರೆ ಸರಣಿಯಲ್ಲಿ ಅದನ್ನೂ ಕೂಡ ತೋರಿಸಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)