ಮೈಸೂರು, ಮೇ, 07: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಬರೀ ರಾಜ್ಯ ಅಲ್ಲದೆ, ಇಡೀ ರಾಷ್ಟ್ರದಲ್ಲೇ ಸದ್ದು ಮಾಡುತ್ತಿದೆ. ಇನ್ನು ಪೆನ್ಡ್ರೈವ್ ಹಂಚಿದ್ದಾರೆ ಎನ್ನಲಾದ ಡ್ರೈವರ್ ಕಾರ್ತಿಕ್ನನ್ನು ಹೊರ ದೇಶಕ್ಕೆ ಕಳುಹಿಸಿದ್ದು ಕಾಂಗ್ರೆಸಿಗರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಪ್ಪಣೆ ಪಡೆದು ಕಾರ್ತಿಕ್ ಪೆನ್ಡ್ರೈವ್ ಹಂಚಿದ್ದಾನೆ ಎಂದು ಶಾಸಕ ಜಿ.ಟಿ.ದೇವೇಗೌಡ ಗಂಭಿರ ಆರೋಪ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರನ್ನೂ ಬಂಧಿಸಬೇಕು, ಯಾರನ್ನು ಎ 1 ಮಾಡಬೇಕು, ಯಾರನ್ನು ಎ 2 ಮಾಡಬೇಕು ಎಂಬ ನಿರ್ದೇಶನ ಸಿಎಂ ಹಾಗೂ ಡಿಸಿಎಂ ಮಾಡುತ್ತಿದ್ದಾರೆ. ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ಆಗಬೇಕು. ಡಿಸಿಎಂ ಈ ವಿಚಾರದಲ್ಲಿ ಸಂಪೂರ್ಣ ನೇತೃತ್ವ ವಹಿಸಿದ್ದಾರೆ. ಅವರು ಇದರಲ್ಲಿ ತಪ್ಪಿಸ್ಥರ ರೀತಿ ಕಾಣುತ್ತಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ಸಾರಾ ಮಹೇಶ್ ಮಾತನಾಡಿ, ಡಿಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೆ ಸರ್ಕಾರ ಅವರನ್ನು ವಜಾ ಮಾಡಲಿ ಎಂದು ಆಗ್ರಹಿಸಿದರು. ಇನ್ನು ಎಚ್.ಡಿ.ರೇವಣ್ಣ ವಿರುದ್ಧ ಕೆ.ಆರ್.ನಗರದಲ್ಲಿ ಕೇಸ್ ದಾಖಲು ಆಗವುದಕ್ಕೆ ಮುಂಚೆಯೇ ಮಾಧ್ಯಮಗಳಿಗೆ ಹೇಗೆ ಗೊತ್ತಾಯ್ತು?. ತೋಟದಲ್ಲಿ ಆ ಮಹಿಳೆ ಇದ್ದರು ಎಂಬುದರ ಒಂದು ವೀಡಿಯೋ ಯಾಕೆ ಬಂದಿಲ್ಲ? ಸಂತ್ರಸ್ತ ಮಹಿಳೆ ತೋಟದಲ್ಲಿ ಸಿಕ್ಕಿಲ್ಲ ಎಂದು ಹೇಳಿದರು.
ಹುಣಸೂರಿನ ಕರಿಗೌಡ ರಸ್ತೆಯಲ್ಲಿ ಪವಿತ್ರ ಹರೀಶ್ ಅವರ ಮನೆಯಿಂದ ಸಂತ್ರಸ್ತ ಮಹಿಳೆಯನ್ನು ಪೊಲೀಸರು ಕರೆದು ಕೊಂಡು ಹೋಗಿದ್ದಾರೆ. ಪವಿತ್ರ ಹರೀಶ್ ಸಂತ್ರಸ್ತೆ ಮಹಿಳೆ ಸಂಬಂಧಿ. ಎಸ್ಐಟಿಯಲ್ಲಿ ಇರುವ ಕೆಲ ಅಧಿಕಾರಿಗಳು ಕಾಂಗ್ರೆಸನ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡರನ್ನು ಹತ್ತಿಕುವ ಕೆಲಸ ಈ ಪ್ರಕರಣದ ಮೂಲಕ ಆಗುತ್ತಿದೆ. ಸಂತ್ರಸ್ತ ಮಹಿಳೆಯನ್ನು ಇನ್ನೂ ಯಾಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ? ಆ ಸಂತ್ರಸ್ತ ಮಹಿಳೆಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದೀರಾ?
ಎಸ್ಐಟಿ ಅಧಿಕಾರಿಗಳನ್ನು ಇಟ್ಟುಕೊಂಡು ನಮ್ಮ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಪೆನ್ಡ್ರೈವ್ ಹಂಚಿದವರನ್ನು ಯಾಕೆ ಇನ್ನೂ ಬಂಧಿಸಿಲ್ಲ? ರಾಜಗೋಪಾಲ್ ತೋಟದಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಲ್ಲ ಎಂದು ದೂರಿದರು.
ಇನ್ನು ಈ ವೇಳೆ ಶಾಸಕ ಜಿ.ಡಿ.ಹರೀಶ್ ಗೌಡ ಸೇರಿದಂತೆ ಇತರ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.