ಐಪಿಎಲ್ 2024ರ ಪಂದ್ಯಗಳು ನಡೆಯುತ್ತಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ನಡುವೆ ಫೈಟ್ ನಡೆದಿತ್ತು. ಈ ಪಂದ್ಯದಲ್ಲಿ ಮತ್ತೆ ಮುಂಬೈ ಗೆಲುವಿನ ಟ್ರ್ಯಾಕ್ಗೆ ಮರಳಿತು. ಎಂಐ ಏಳು ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮತ್ತೊಮ್ಮೆ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಮಾಡಿದರು.
ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ತಮ್ಮ ಬಿಗುವಿನ ದಾಳಿಯಿಂದ ಗಮನ ಸೆಳೆದಿದ್ದಾರೆ. ಎಸ್ಆರ್ಎಚ್ ಹಾಗೂ ಎಂಐ ಪಂದ್ಯವನ್ನು ವೀಕ್ಷಿಸಲು, ಬುಮ್ರಾ ಪತ್ನಿ ಸಂಜನಾ ಗಣೇಶನ್ ಕೂಡ ವಾಂಖೆಡೆ ಸ್ಟೇಡಿಯಂಗೆ ಆಗಮಿಸಿದ್ದರು. ಈ ಸಮಯದಲ್ಲಿ, ಬುಮ್ರಾ ಅವರ ಮಗನ ಒಂದು ನೋಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು.
ಸಾಮಾಜಿಕ ತಾಣದಲ್ಲಿ ಫೋಟೋ ವೈರಲ್
ಜಸ್ಪ್ರಿತ್ ಬುಮ್ರಾ ಅವರ ಮಗ ಅಂಗದ್ ತನ್ನ ತಾಯಿ ಸಂಜನಾಳ ಮಡಿಲಲ್ಲಿ ಕುಳಿತಿದ್ದ. ಮೊದಲ ಬಾರಿಗೆ, ಅಭಿಮಾನಿಗಳು ಬುಮ್ರಾ ಅವರ ಮಗನ ಮುಖವನ್ನು ನೋಡಿದರು. ಈ ಪಂದ್ಯದ ದಿನ ಬುಮ್ರಾ ಪತ್ನಿ ಸಂಜನಾ ಅವರ ಹುಟ್ಟುಹಬ್ಬವೂ ಆಗಿತ್ತು. ಅಂಗದ್ ಅವರು 4 ಸೆಪ್ಟೆಂಬರ್ 2023 ರಂದು ಜನಿಸಿದ್ದರು.
ಮುಂಬೈ ಇಂಡಿಯನ್ಸ್ ಈ ಋತುವಿನ ತನ್ನ 12 ನೇ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿತು. ಮುಂಬೈ ತಂಡವು ಹೈದರಾಬಾದ್ ಅನ್ನು ಸೋಲಿಸುವ ಮೂಲಕ ಋತುವಿನ ನಾಲ್ಕನೇ ಗೆಲುವು ದಾಖಲಿಸಿತು. ಈ ಪಂದ್ಯದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪುತ್ರ ಅಂಗದ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಮುಂಬೈಗೆ ಭರ್ಜರಿ ಜಯ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು. ಈ ಪಂದ್ಯದಲ್ಲಿ ಬಲಿಷ್ಠ ಎನಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ವಿಫಲವಾಯಿತು. ಅಭಿಷೇಕ್ ಶರ್ಮಾರಿಂದ ಹಿಡಿದು ಹೆನ್ರಿಚ್ ಕ್ಲಾಸೆನ್ ವರೆಗೆ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಮುಂಬೈ ಪರ ಪಿಯೂಷ್ ಚಾವ್ಲಾ ಮತ್ತು ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.