ಮಳೆ ಬಂದಿದೆ, ಮಂಜು ಕವಿದಿದೆ, ಬೇಸಿಗೆಯ ಬಿಸಿ ನಡುವೆ ಇದೀಗ ಬೆಂಗಳೂರು ಕೂಲ್.. ಕೂಲ್ ಆಗಿದೆ. ಹೀಗಿದ್ದಾಗಲೇ ಇಂಟರ್ನೆಟ್ ಪೂರ್ತಿ ಬೆಂಗಳೂರು ಮಳೆಯ ಬಗ್ಗೆಯೇ ಭಾರಿ ಸದ್ದು ಮೊಳಗಿದೆ. ಅದರಲ್ಲೂ ಬೆಂಗಳೂರಿನ ಬಹುತೇಕ ಕಡೆ ಇಂದು ಆಲಿಕಲ್ಲು ಮಳೆಯ ಆಗಮನ ಆಗಿದ್ದು, ಜನರು ತಮ್ಮ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಆಲಿಕಲ್ಲು ಮಳೆಯ ವಿಡಿಯೋ ರೆಕಾರ್ಡ್ ಮಾಡಿ, ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋಗಳನ್ನು ಈ ಸ್ಟೋರಿಯಲ್ಲಿ ನೋಡೋಣ ಬನ್ನಿ.
ಮಳೆ ಬೀಳುತ್ತಿಲ್ಲ ಅಂತಾ ಕನ್ನಡಿಗರು ಪರದಾಡುತ್ತಿರುವ ಸಮಯದಲ್ಲಿ ಭರ್ಜರಿ ಮಳೆ ಬರ್ತಿದೆ. 5 ತಿಂಗಳಿಂದಲೂ ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ ಮತ್ತು ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆ ಕೊರತೆ ಕಾರಣಕ್ಕೆ ಜನರು ನಲುಗಿದ್ದಾರೆ. ಅದರಲ್ಲೂ, ನಮ್ಮ ಬೆಂಗಳೂರು ಮಳೆಯೇ ಇಲ್ಲದೆ ನಲುಗಿ ಹೋಗಿತ್ತು. ಹೀಗಿದ್ದಾಗಲೇ ಭರ್ಜರಿ ಮಳೆ ಆಗಮನ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಮಳೆಯ ಮ್ಯಾಟರ್ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಬೆಂಗಳೂರು ಆಲಿಕಲ್ಲು ಮಳೆ ವಿಡಿಯೋ!
ಬೆಂಗಳೂರಿನ ನಾಯಂಡ ಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದ್ದು, ಈ ವಿಡಿಯೋನ ಪ್ರದೀಪ್ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 'ಆಲಿಕಲ್ಲು' ಮಳೆ ಭರ್ಜರಿಯಾಗಿ ಸುರಿದಿದ್ದು, ಆ ವಿಡಿಯೋ ನೋಡುವುದೇ ಒಂದು ಚಂದ ಅಂತಿದ್ದಾರೆ ನೆಟ್ಟಿಗರು.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.