Bengaluru Rain: ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್

Arun Kumar
0

ಬೆಂಗಳೂರಿನ ಹಲವು ಕಡೆಗಳಲ್ಲಿ ಸೋಮವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಹಲವು ಅವಾಂತರ ಉಂಟಾಗಿದೆ. ನಗರದಲ್ಲಿ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

ಟ್ರಾಫಿಕ್ ಪೋಲೀಸರು ಸಂಚಾರ ದಟ್ಟಣೆ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ. ಹಲವು ಕಡೆ ಅಂಡರ್ ಪಾಸ್ ತುಂಬಿದ್ದು ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಿದ್ದಾರೆ. ಹಲವು ಕಡೆ ರಸ್ತೆ ಮೇಲೆ ಮರ ಬಿದ್ದ ಕಾರಣ ಸಂಚಾರ ಸಮಸ್ಯೆ ಉಂಟಾಗಿದೆ.

ಕೆಎಚ್ಬಿ ಮುಖ್ಯ ರಸ್ತೆಯ ಪುಷ್ಪಾಂಜಲಿ ಥಿಯೇಟರ್ ಬಳಿ ಮರದ ಕೊಂಬೆ ಮುರಿದು ರಸ್ತೆಯಲ್ಲಿ ಬಿದ್ದ ಕಾರಣ ಸಂಚಾರ ನಿಧಾನಗತಿಯಲ್ಲಿತ್ತು. ಮರದ ಕೊಂಬೆಯನ್ನು ಶೀಘ್ರವಾಗಿ ತೆರವುಗೊಳಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

ಮುಳುಗಿದ ರಸ್ತೆಗಳು, ಟ್ರಾಫಿಕ್ ಜಾಮ್
ಮಹಾರಾಣಿ ಕೆಳಸೇತುವೆ, ವಡ್ಡರಪಾಳ್ಯ ಸಿಗ್ನಲ್, ಸುಮ್ಮನನಹಳ್ಳಿ, ಹೆಬ್ಬಾಳ ರೈಲು ನಿಲ್ದಾಣದಲ್ಲಿ ರಸ್ತೆಗಳಲ್ಲಿ ನೀರು ನಿಂತ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಲಿಂಗರಾಜಪುರ ಮುಖ್ಯರಸ್ತೆಯಲ್ಲಿ ಮರ ಬಿದ್ದ ಕಾರಣ ಸಂಚಾರ ನಿಧಾನಗತಿಯಲ್ಲಿತ್ತು.ರಸ್ತೆಗಳಲ್ಲಿ ನೀರು ನಿಂತ ಕಾರಣ ಹೆಬ್ಬಾಳ ಫ್ಲೈಓವರ್ ವಿಮಾನ ನಿಲ್ದಾಣದ ಕಡೆಗೆ ಸಾಗುವ ರಸ್ತೆ, ಹೆಬ್ಬಾಳ ಸರ್ಕಲ್ ಬಸ್ ನಿಲ್ದಾಣ, ವೀರಣ್ಣಪಾಳ್ಯದ ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.

ಹೆಣ್ಣೂರು ಮುಖ್ಯರಸ್ತೆ, ಪಿ.ಜಿ.ಹಳ್ಳಿ, ಎಚ್ಕ್ಯೂಟಿಸಿ ಬಸ್ ನಿಲ್ದಾಣ, ರಾಮಮೂರ್ತಿ ನಗರ ಕೆಳಸೇತುವೆ, ಹೆಬ್ಬಾಳ ಸರ್ಕಲ್ ಬಸ್ ನಿಲ್ದಾಣದಲ್ಲಿ ನೀರು ನಿಂತ ಪರಿಣಾಮ ನಿಧಾನಗತಿಯ ಸಂಚಾರ ಉಂಟಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)