ಧಾರವಾಡ, ಮೇ, 31: ಇಂದು (ಮೇ 31) ಶಾಲೆಗಳು ಆರಂಭವಾಗಿದ್ದು, ಈ ಹಿನ್ನೆಲೆ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಹಾಗೆಯೇ ವಿದ್ಯಾಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಧಾರವಾಡ ಶಾಲೆಗಳಲ್ಲಿ ಇಂದು ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾಧಿಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಶಾಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಶಾಲೆಗಳನ್ನು ಸ್ವಚ್ಛಗೊಳಿಸಿ, ಹಸಿರು ತೋರಣಗಳಿಂದ ಸಿಂಗರಿಸಿ ಶಿಕ್ಷ ಕರು ಮಕ್ಕಳನ್ನು ಬರಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ ಸರ್ಕಾರಿ ಟಿಸಿಡಬ್ಲ್ಯೂ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಏಕೆಂದರೆ ಈ ಶಾಲೆಗೆ ಪಾಠ ಮಾಡಲು ಸ್ವತಃ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಆಗಮಿಸಿ ಮಕ್ಕಳಿಗೆ ಇಂಗ್ಲಿಷ್ ಪಾಠ ಮಾಡಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರದ ಸರ್ಕಾರಿ ಪ್ರಾಥಮಿಕ ಟಿಸಿಡಬ್ಲ್ಯೂ ಶಾಲೆಗೆ ಮಕ್ಕಳು ನಗು ನಗುತ್ತಾ ಸಂತೋಷದಿಂದ ಆಗಮನಿಸಿದ್ದಾರೆ. ಶಿಕ್ಷಕರು ಸಹ ಅಷ್ಟೇ ಸಂತಸದಿಂದ ಮಕ್ಕಳಿಗೆ ಹೂಗುಚ್ಛ ನೀಡಿ ಬರಮಾಡಿದ್ದು ವಿಶೇಷವಾಗುದೆ. ಶಾಲೆ ಶುರುವಾಗತಿದ್ದ ಹಾಗೇ 8ನೇ ತರಗತಿ ಕೊಠಡಿಗೆ ಎಂದಿನಂತೆ ಆಗಮನ ಕೊಟ್ಟವರು ಬೇರ್ಯಾರು ಅಲ್ಲ, ಸ್ವತ ಡಿಸಿ ದಿವ್ಯಪ್ರಭು.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ನೋಡಿದ ಮಕ್ಕಳು ಆಶ್ಚರ್ಯಕ್ಕೊಳಗಾಗಿದ್ದರು. ಬಳಿಕ ಹೆದರಬೇಡಿ, ನಾನು ನಿಮ್ಮ ಜಿಲ್ಲಾಧಿಕಾರಿ, ನಿಮಗೆ ಪಾಠ ಮಾಡಲು ಬಂದಿದ್ದೇನೆ ಅಂದಾಗ ಮಕ್ಕಳು ಸ್ವಲ್ಪ ನಿರಾಳರಾದರು. ಆಗ ಒಬ್ಬ ವಿದ್ಯಾರ್ಥಿನಿ ಇಂಗ್ಲಿಷ್ ಸ್ವಲ್ಪ ಕಷ್ಟ ಅಂದಾಗ, ಇಂಗ್ಲಿಷ್ ಪುಸ್ತಕ ತೆಗೆದು ನಿರ್ಗಳವಾಗಿ ಮಕ್ಕಳಿಗೆ ತಿಳಿಯೋ ಹಾಗೆ ಪಾಠ ಮಾಡಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಡಿದ ಪಾಠವನ್ನು ಕೂಡ ಮಕ್ಕಳು ಆಸಕ್ತಿಯಿಂದ ಕೇಳಿದ್ದು ವಿಶೇಷವಾಗಿತ್ತು.
ಪಾಠದ ನಂತರ ಮಕ್ಕಳಿಗೆ ಪ್ರಶ್ನೆಗಳನ್ನೂ ಕೇಳಿದ ಜಿಲ್ಲಾಧಿಕಾರಿಗಳು, ಇಂಗ್ಲೀಷ್ ಭಾಷೆಯನ್ನು ಕೇವಲ ಒಂದು ವಿಷಯವಾಗಿ ನೋಡಬೇಕು. ಯಾವುದೇ ಭಾಷೆಯಾಗಲಿ, ಅದು ತಪ್ಪಾದರೂ ಮಾತನಾಡಲು ಕಲಿಯಬೇಕು ಎಂದು ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿದರು. ಸದ್ಯ ಆರಂಭವಾಗಿರುವ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಮೆದಳು, ಮನಸ್ಸು ಮತ್ತು ದೇಹ ಸಶಕ್ತ, ಸದೃಡವಾಗಿದ್ದರೆ, ಉತ್ತಮ ಶಿಕ್ಷಣದ ಮೂಲಕ ಕಂಡ ಕನಸು ಸಾಧಿಸಬಹುದು. ಕಲಿಕೆಯ ಆಸಕ್ತಿ ವಿದ್ಯಾರ್ಥಿಗಳಲ್ಲಿ ಮತ್ತು ಕಲಿಸುವ ಅಭಿರುಚಿ ಶಿಕ್ಷಕರಲ್ಲಿ ಇದ್ದರೆ ಮಾತ್ರ ಅದು ಒಂದು ಕೌಶಲ್ಯಯುತವಾಗಿ ಕೂಡಿಬರುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಕರೇ ಆದರ್ಶ. ಅವರ ಜೀವನ ನಿರೂಪಣೆ ಪಾಲಕರ ಜೊತೆಗೆ ಶಿಕ್ಷಕರಿಗೂ ಸೇರಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿ ಗಮನ ಸೆಳೆದಿದ್ದಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.