ಟೀಮ್ ಇಂಡಿಯಾ ಕೋಚ್‌ ಸ್ಥಾನಕ್ಕೆ ಮೋದಿ, ಸಚಿನ್‌, ಧೋನಿ ಹೆಸರಿನಲ್ಲಿ ಅರ್ಜಿ ಸಲ್ಲಿಕೆ!

Arun Kumar
0

ರಾಹುಲ್ ದ್ರಾವಿಡ್ ಅವರಿಂದ ತೆರವಾಗುವ ಕೋಚ್ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಅರ್ಜಿಯನ್ನು ಕರೆದಿದ್ದು, ಅರ್ಜಿ ಸಲ್ಲಿಸುವ ಡೆಡ್ ಲೈನ್ ಮುಗಿದಿದೆ. ಈ ಸ್ಥಾನಕ್ಕಾಗಿ 3000ಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದಾಗಿ ತಿಳಿದು ಬಂದಿದೆ. ಈ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಲು ಬಿಸಿಸಿಐ ಇತ್ತೀಚಿಗೆ ಗೂಗಲ್ ಫಾರ್ಮ್ನ್ನು ಸಹ ತನ್ನ ವೆಬ್ಸೈಟ್ನಲ್ಲಿ ಇಟ್ಟಿತ್ತು. ಅಚ್ಚರಿಯ ಸಂಗತಿ ಎಂದರೆ ಈ ಸ್ಥಾನಕ್ಕಾಗಿ ಹಲವು ನಕಲಿ ಹೆಸರುಗಳು ಕೇಳಿ ಬಂದಿವೆ.

ಅರ್ಜಿಯನ್ನು ಸಲ್ಲಿಸಿರುವ ಹಲವು ಬಳಕೆದಾರರು ತಮ್ಮ ಅಪ್ಲೀಕೇಶನ್ಗಳ ಸ್ಕ್ರೀನ್ ಶಾಟ್ಗಳನ್ನು ಹೊಡೆದು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಅಪ್ಲಿಕೇಷನ್ನಲ್ಲಿ ಹಲವಾರು ನಕಲಿ ಖ್ಯಾತನಾಮರ ಹೆಸರುಗಳು ಇದ್ದು, ಯಾವದು ಅಸಲಿ ಹಾಗೂ ಯಾವದು ನಕಲಿ ಎಂಬುದನ್ನು ಪತ್ತೆ ಮಾಡುವುದೇ ಬಿಸಿಸಿಐಗೆ ಸವಾಲಾಗಿದೆ.

ಯಾರ ಯಾರ ಹೆಸರಿನಲ್ಲಿ ಅರ್ಜಿ
ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕಾಗಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಹಲವು ಖ್ಯಾತನಾಮರ ನಕಲಿ ಅರ್ಜಿಯನ್ನು ಸಹ ಸಲ್ಲಿಸಲಾಗಿದೆ. ಇದರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ದಿಗ್ಗಜ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರುಗಳು ಸಹ ಸೇರಿವೆ.

ಕಳೆದ ಬಾರಿಯೂ ಬಿಸಿಸಿಐ ಇದೇ ರೀತಿ ಅರ್ಜಿಯನ್ನು ಅಹ್ವಾನಿಸಿತ್ತು. ಹೀಗೆ ಗೂಗಲ್ ಶೀಟ್ನಲ್ಲಿ ಅರ್ಜಿಯನ್ನು ಕರೆಯಲು ಕಾರಣವೆನೆಂದರೆ, ಅರ್ಜಿದಾರರ ಹೆಸರನ್ನು ಒಂದೇ ಹಾಳೆಯಲ್ಲಿ ಪರಿಶೀಲಿಸಲು ಸುಲಭವಾಗುತ್ತದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ಅರ್ಜಿಗಳನ್ನು ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು. ಇನ್ನು ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿಯು ಇದೇ ಟಿ20 ವಿಶ್ವಕಪ್ ಬಳಿಕ ಪೂರ್ಣಗೊಳ್ಳಲಿದೆ. ಇವರಿಂದ ತೆರವಾಗುವ ಸ್ಥಾನಕ್ಕೆ ಬಿಸಿಸಿಐ ಅರ್ಜಿಯನ್ನು ಆಹ್ವಾನಿಸಿದೆ. ಒಂದು ವೇಳೆ ರಾಹುಲ್ ದ್ರಾವಿಡ್ ಅವರು ತಮ್ಮ ಒಪ್ಪಂದವನ್ನು ಮುಂದುವರೆಸಲು ಬಯಸಿದ್ದಲ್ಲಿ, ಮರು ಅರ್ಜಿ ಹಾಕಲು ಅವಕಾಶ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)