ಕೊಳ್ಳೇಗಾಲ: 5 ಅಪರೂಪಾದ ಪ್ರಾಣಿಗಳು ಸಂಶಯಾಸ್ಪದ ಸಾವು

Arun Kumar
0

ಚಾಮರಾಜನಗರ, ಮೇ, 28: ಸಂಶಯಾಸ್ಪದವಾಗಿ ಅಪರೂಪಾದ ಪ್ರಾಣಿಗಾಳಾಗಿರುವ 5 ಸೀಳುನಾಯಿಗಳು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕರಡಿಗುಡ್ಡದ ಸಮೀಪ ಮಂಗಳವಾರ (ಮೇ 28) ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಹಿತ್ತಲ ದೊಡ್ಡಿ ಗ್ರಾಮದ ಕರಡಿಗುಡ್ಡದ ಸಮೀಪ ಕೂಸಣ್ಣ ಎಂಬವರ ಜಮೀನಿನ ಬಳಿ ಸೀಳುನಾಯಿಗಳು ಅಸುನೀಗಿದ್ದು, ವಿಷಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

ಸಾಕುಪ್ರಾಣಿಗಳ ರಕ್ಷಣೆಗಾಗಿ ಕೆಲವರು ಹಾಕಿದ ವಿಷಹಾರ ಸೇವಿಸಿ ಸೀಳುಬಾಯಿ ಸಾವನ್ನಪ್ಪಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇನ್ನು ಅರಣ್ಯ ಅಧಿಕಾರಿಗಳು, ಪಶು ವೈದ್ಯರು ಸ್ಥಳಕ್ಕೆ ಭೇಟಿ ಕೊಟ್ಟು ಮೃತಪಟ್ಟ ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರಹವನ್ನು ಅಲ್ಲಿಯೇ ಮಣ್ಣು ಮಾಡಲಾಗಿದೆ.

10 ಕುರಿಗಳ ಬಲಿ: ನಾಯಿಗಳ ಹಿಂಡು ದಾಳಿ ನಡೆಸಿದ 10 ಕುರಿಗಳನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿಯಲ್ಲಿ ಭಾನುವಾರ ಸಂಜೆ (ಮೇ 19) ನಡೆದಿದೆ.

ಮಾಡ್ರಹಳ್ಳಿ ಗ್ರಾಮದ ನಾಗಮ್ಮ ಎಂಬುವರು ತಮ್ಮ ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದ ವೇಳೆ ನಾಯಿಗಳ ಹಿಂಡು ದಾಳಿ ಮಾಡಿ 10 ಕುರಿಗಳನ್ನು ಕೊಂದು ಹಾಕಿ, ಎರಡು ಕುರಿಗಳನ್ನು ತೀವ್ರವಾಗಿ ಗಾಯಗೊಳಿಸಿವೆ.

ಕುರಿಗಳ ಮೇಲೆ ದಾಳಿ ಮಾಡಿದ್ದು, ನಾಯಿಗಳು ಸಾಕು ನಾಯಿಗಳಾ ಅಥವಾ ಬೀದಿ ನಾಯಿಗಳಾ ಎಂಬ ಮಾಹಿತಿ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಇನ್ನು "ತನ್ನ ಬಳಿ ಇದ್ದ 12 ಕುರಿಗಳಲ್ಲಿ 10 ಕುರಿಗಳು ಇಲ್ಲವಾಗಿವೆ. ತನಗೆ ಸೂಕ್ತ ಪರಿಹಾರ ಕೊಡಬೇಕು," ಎಂದು ನಾಗಮ್ಮ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸದ್ಯ ನಾಗಮ್ಮ ಅವರು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜೋಡಿ ಜಿಂಕೆಗಳ ಕಾದಾಟ: ಚಾಮರಾಜನಗರ ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿ ಪ್ರಾಣಿಗಳ ಕಾದಾಟದ ದೃಶ್ಯಗಳು ಸದ್ದು ಮಾಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಅಂತಹದ್ದೇ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಾಹನಗಳ ಸಂಚಾರವಿದ್ದರೂ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಪ್ರಸಂಗ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ ರಸ್ತೆಯಲ್ಲಿ ನಡೆದಿದೆ.

ಹತ್ತಾರು ಜಿಂಕೆಗಳು ಮೇಯುತ್ತಿದ್ದರೆ, ಎರಡು ಜಿಂಕೆಗಳು ಮಾತ್ರ ನಾನಾ-ನೀನಾ ಎಂದು ಕಾಳಗಕ್ಕೆ ಇಳಿದಿದ್ದವು. ಈ ದೃಶ್ಯವನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಸೆರೆಹಿಡಿದಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಾಹನಗಳ ಹಾರ್ನ್ ಕೇಳುತ್ತಿದ್ದಂತೆ ಜಿಂಕೆ ಹಿಂಡು ಚದುರಿದಾಗ, ಕಾಳಗಕ್ಕೆ ಇಳಿದಿದ್ದ ಜಿಂಕೆಗಳು ಕೂಡ ಕಾಡಿಗೆ ಕಾಲ್ಕಿತ್ತ ಘಟನೆಯೂ ನಡೆದಿದೆ. ಇನ್ನು ಈ ವಿಡಿಯೋ ಅಂತೂ ಸಖತ್ ವೈರಲ್ ಆಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)