ಒಂದೇ ಕುಟುಂಬದ ಮೂವರು ನಾಪತ್ತೆ ಪ್ರಕರಣ ಮತ್ತಷ್ಟು ನಿಗೂಢ; ಮೂಡಿದೆ ಸಾಕಷ್ಟು ಅನುಮಾನ

Arun Kumar
0

ಅದು ಪುಟ್ಟ ಸಂಸಾರ. ಗಂಡ, ಹೆಂಡತಿ, ಮಗು ಇದ್ದ ಮನೆ. ಆದ್ರೆ, ಈ ಮನೆಯ ಮೂವರು ಇದೀಗ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರಿಗೂ ಈ ಪ್ರಕರಣ ತಲೆಬಿಸಿ ತಂದಿದ್ದು, ಹುಡುಕಿಕೊಡಿ ಎಂದು ಅವರ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ತಂದೆ, ತಾಯಿ ಹಾಗೂ ಎರಡು ವರ್ಷದ ಮಗು ನಿಗೂಢವಾಗಿ ಕಣ್ಮರೆಯಾಗಿರುವುದು ಬೆಣ್ಣೆನಗರಿ ದಾವಣಗೆರೆಯಲ್ಲಿ ಈಗ ಸಾಕಷ್ಟು ಅನುಮಾನು ಮೂಡುವಂತೆ ಮಾಡಿದೆ. 34 ವರ್ಷದ ಅಂಜನ್ ಬಾಬು, 24 ವರ್ಷದ ನಾಗವೇಣಿ, ಎರಡು ವರ್ಷದ ನಕ್ಷತ್ರ ಕಾಣೆಯಾಗಿದ್ದಾರೆ.

ನಗರದ ವಿನೋಬ ನಗರದಲ್ಲಿ ಬಾಡಿಗೆಗೆ ವಾಸವಾಗಿದ್ದ ಈ ಕುಟುಂಬ ಕೊನೆಯದಾಗಿ ಕಾಣಿಸಿಕೊಂಡಿದ್ಧು ಕಳೆದ ತಿಂಗಳು ಏಪ್ರಿಲ್ 12ರಂದು. ಅದಾದ ನಂತರ ಈ ಮೂವರು ಎಲ್ಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗದೆ ಕುಟುಂಬದವರು ಪರಿತಪಿಸುವಂತಾಗಿದೆ. ನಾಗವೇಣಿ ನಾಗವೇಣಿ ತಾಯಿ ರುದ್ರವ್ವ ಬಡಾವಣೆ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು, ಅಳಿಯ ಮತ್ತು ಮೊಮ್ಮಗಳನ್ನು ಹುಡುಕಿ ಕೊಡಿ ಎಂದು ದೂರು ನೀಡಿದ್ದಾರೆ.

ಐದು ವರ್ಷದ ಹಿಂದೆ ಮದುವೆ

ಅಂಜನ್ ಬಾಬು ಮತ್ತು ನಾಗವೇಣಿ 5 ವರ್ಷದ ಹಿಂದೆ ಮದುವೆ ಆಗಿದ್ದರು. ಈ ದಂಪತಿಗೆ ಎರಡು ವರ್ಷದ ಹೆಣ್ಣು ಮಗು ಇದೆ. ವಿನೋಬನಗರದಲ್ಲಿ ವಾಸವಾಗಿದ್ದರು, ಅಂಜನ್ ಬಾಬು ಪಿಜಿ ಬಡಾವಣೆ ಬ್ಯಾಡಗಿ ಶೆಟ್ಟರ್ ಶಾಲೆ ಹತ್ತಿರ ಇರುವ ಷೇರು ಮಾರ್ಕೇಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರ ಮನೆಗೆ ನಾಗವೇಣಿ ಅವರ ತಾಯಿ ರುದ್ರವ್ವ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರು. ಕಳೆದ ತಿಂಗಳು ಅಂದರೆ ಏಪ್ರಿಲ್ 12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರುದ್ರವ್ವ ಮಗಳ ಮನೆಗೆ ಬಂದಿದ್ದಾರೆ. ಸಂಜೆಯವರೆಗೆ ಮಗಳು, ಮೊಮ್ಮಗಳ ಜೊತೆ ಸಂಜೆವರೆಗೂ ರುದ್ರವ್ವ ಕಾಲ ಕಳೆದಿದ್ದಾರೆ.

ಸಂಜೆ ಆರು ಗಂಟೆಗೆ ನಾಗವೇಣಿ ಗಂಡ ಅಂಜನ್ ಬಾಬು ಪತ್ನಿಗೆ ಪೋನ್ ಮಾಡಿದ್ದಾರೆ. ಆಗ ತನ್ನ ಪುತ್ರಿ ಜೊತೆ ನಾಗವೇಣಿ ತೆರಳಿದ್ದಾರೆ. ಆ ಬಳಿಕ ತಾಯಿಗೆ ನೀನು ಮನೆಯಲ್ಲಿ ಇರು ಎಂದು ಹೇಳಿದ್ದಾರೆ. ಅದಕ್ಕೆ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾನೆಂದು ತಾಯಿ ಕೇಳಿದಕ್ಕೆ, ಕರೆದುಕೊಂಡು ಬಂದ ಮೇಲೆ ಹೇಳುತ್ತೇನೆಂದು ತನ್ನ ಮಗಳು ನಕ್ಷತ್ರಾಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)