5 ದಿನ ಬಾರ್ ಬಂದ್, ಕುಡುಕರಿಗೆ ಶುರುವಾಯ್ತು ಹೊಸ ಸಂಕಷ್ಟ!

Arun Kumar
0

ಎಣ್ಣೆ ಬೇಕು ಅಣ್ಣಾ.. ಅಂತಾ ಬಹುತೇಕರು ಸಂಜೆ ಟೈಂ ಹಾಡು ಹೇಳೋದು ಜಾಸ್ತಿ ಬಿಡಿ. ಕೆಲವರು ಹಗಲು ಹೊತ್ತಲ್ಲೇ ಕುಡಿದು ಜೀವ & ಜೀವನ ಎರಡೂ ಹಾಳು ಮಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಸಂಜೆ ಆಗುವವರೆಗೆ ಎಣ್ಣೆ ಮುಟ್ಟದೆ ಶಿಸ್ತಿನ ಜೀವನ ನಡೆಸುತ್ತಾರೆ. ಸಂಜೆ ನಂತರ ಸಿಕ್ಕಾಪಟ್ಟೆ ಕುಡಿದು ಖುಷಿಪಡುತ್ತಾರೆ. ಹೀಗೆ ನಮ್ಮ & ನಿಮ್ಮ ಸುತ್ತಮುತ್ತಲು ಇರುವ ಬಹುಮುಖ ಪ್ರತಿಭೆಗಳಾದ ಕುಡುಕರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ, 5 ದಿನಗಳ ಕಾಲ ಬಾರ್ & ರೆಸ್ಟೋರೆಂಟ್ ಬಂದ್ ಆಗಲಿವೆ.

ಇದು ಮಳೆಗಾಲ ಕಣ್ರಿ, ಕುಡುಕರಿಗೆ ಎಣ್ಣೆ ಇಲ್ಲದೆ ನಿದ್ದೆಯೇ ಬರೋದಿಲ್ಲ. ಯಾಕೆ ಅಂದರೆ ಚಳಿಗೆ ಎಣ್ಣೆ ಬೇಕೆ ಬೇಕು ಅಂತಾರೆ ಮದ್ಯ ಪ್ರಿಯರು. ಹೀಗಿದ್ದಾಗಲೇ ಲೋಕಸಭೆ ಎಲೆಕ್ಷನ್ ಬೇರೆ ಬಂದಿದೆ, ಕಳೆದ ಒಂದೂವರೆ ತಿಂಗಳಿಂದ ಕೂಡ ಚುನಾವಣೆ ನಡೆಯುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಕೂಡ ಮತದಾನ ನಡೆಯುವುದಕ್ಕೆ 2 ದಿನ ಬಾರ್ ಬಂದ್ ಮಾಡಲಾಗಿತ್ತು. ಇದೀಗ 2024ರ ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯಲಿದ್ದು ಈ ಸಮಯದಲ್ಲಿ ಒಟ್ಟು 5 ದಿನ ಬಾರ್ ಬಂದ್ ಮಾಡುವ ಘೋಷಣೆ ಹೊರಡಿಸಲಾಗಿದೆ. ಅದು ಹೇಗೆ ಅಂತಾ ಮುಂದೆ ಓದಿ.

5 ದಿನ ಬಾರ್ ಬಂದ್ ಏಕೆ?
ಚುನಾವಣೆ ರಿಸಲ್ಟ್ ಬರುವುದು ಒಂದೇ ದಿನ ಆದರೂ 5 ದಿನ ಬಾರ್ ಬಂದ್ ಮಾಡುವುದು ಏಕೆ? ಅಂತಾ ಕೇಳುತ್ತಾ ಇರುವವರು ಮುಂದೆ ಓದಿ. ಅಂದಹಾಗೆ ಜೂನ್ 1 ರಿಂದ 6 ರವರೆಗೆ ಬಾರ್ & ಎಂಆರ್ಪಿ (MRP) ಬಂದ್ ಮಾಡಲು ಯೋಜಿಸಲಾಗಿದೆ. ಯಾಕಂದ್ರೆ ಜೂನ್ 3ಕ್ಕೆ ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜೂನ್ 1ರ ಸಂಜೆ 4 ರಿಂದ ಜೂನ್ 3ರವರೆಗೆ ಮದ್ಯ ಮಾರಾಟ ನಿಷೇಧ ಆಗಲಿದೆ. ಹೀಗಾಗಿ ಬೆಂಗಳೂರಿನ ಎಣ್ಣೆ ಅಂಗಡಿಗಳು ಸಂಪೂರ್ಣ ಬಾಗಿಲು ಮುಚ್ಚಲಿವೆ.

ಇನ್ನೂ 2 ದಿನ ಬಾರ್ ಬಂದ್!
ಮತ್ತೊಂದು ಕಡೆ ಜೂನ್ 4 ರಂದು 2024ರ ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯವು ನಡೆಯಲಿದೆ. ಹೀಗಾಗಿಯೇ ಇಡೀ ದೇಶದಲ್ಲಿ ಎಣ್ಣೆ ಅಂಗಡಿ ಬಂದ್ ಆಗಲಿವೆ. ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಬಂದ್ ಆಗಲಿವೆ. ಜೂನ್ 5ಕ್ಕೆ ಬಾರ್ಗಳು ಬಾಗಿಲು ತೆರೆಯಲಿವೆ. ಆದರೆ ಆ ನಂತರದ ದಿನ ಅಂದ್ರೆ ಜೂನ್ 6 ರಂದು ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಇರುವುದರಿಂದ ಅಂದು ಕೂಡ ಎಲ್ಲ ಎಣ್ಣೆ ಅಂಗಡಿ ಬಂದ್ ಆಗುತ್ತವೆ ಎಂದು, ಇದೀಗ ಮಾಹಿತಿ ನಿಡಲಾಗಿದೆ. ಈ ಮೂಲಕ, ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ ಒಟ್ಟಾರೆ 5 ದಿನಗಳ ಕಾಲ ಎಣ್ಣೆ ಅಂಗಡಿಗಳು ಬಂದ್ ಆಗಲಿವೆ. ಇತರ ಜಿಲ್ಲೆಗಳಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆ ದಿನ ಮಾತ್ರ ಬಾರ್ ಬಂದ್ ಆಗಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)