ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಫೋಟಕ ಹೇಳಿಕೆ

Arun Kumar
0

ದಾವಣಗೆರೆ, ಮೇ, 01: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಬರೀ ರಾಜ್ಯ ಅಲ್ಲದೆ, ದೇಶಾದ್ಯಂತ ಚೆಲ್ಲಾಡುತ್ತಿದೆ. ಇನ್ನು ರಾಜಕೀಯ ವಲಯದಲ್ಲಿ ವಾಗ್ಯುದ್ಧಗಳೇ ಶುರುವಾಗಿವೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಫೈಯರ್ ಬ್ರಾಂಡ್ ಅಂತಲೇ ಹೆಸರುವಾಸಿಯಾಗಿರುವ ಯತ್ನಾಳ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯೋಣ ಬನ್ನಿ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತವಾಗಿ ಯತ್ನ ನಡೆದಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇದ್ದಾಗ ಪ್ರಜ್ವಲ್ ಸಂಸದನಾಗಿದ್ದು, ಬಿಜೆಪಿಗೂ ಇದಕ್ಕೂ ಏನು ಸಂಬಂಧ? ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಯಾರು? ತನಿಖೆ ಮಾಡೋರು ಯಾರು? ಪರಾರಿ ಆಗುವವರೆಗೆ ಸರ್ಕಾರ ಮಲಗಿಕೊಂಡಿತ್ತಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುಚ್ಚಿ ಹಾಕಲು ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳ ಉದ್ದೇಶವಾಗಿದೆ. ಅಲ್ಲದೆ, ರಾಜ್ಯದಲ್ಲಿನ ಪಿಎಸ್ಐ ಹಗರಣ ಏನಾಯ್ತು? ಈ ಬಗ್ಗೆ ಏನಾದರೂ ಹೊರಗೆ ಬಂತಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಗಾಂಜಾ ಅಫೀಮ್ ಕೇಸ್ ಏನಾಯ್ತು, ಪೋಕ್ಸೋ ಎರಡು ಪ್ರಕರಣ ದಾಖಲಾದರೂ ಏನು ಆಗುತ್ತಿಲ್ಲ. ಸಿನಿಮಾ ನಟಿಯರ ಬಂಧನವಾಗಿತ್ತು. ಅವರ ಮೊಬೈಲ್ ಸಿಕ್ತು. ಅದರಲ್ಲಿ ಯಾವ ರಾಜಕಾರಣಿ ಮಗ ಇದ್ದ ಎಂದು ಬಹಿರಂಗವಾಯಿತಾ? ಅದನ್ನು ಮುಚ್ಚಿ ಹಾಕಿದರು. ಇದೇ ಪೋಕ್ಸೋದಲ್ಲಿ ಎರಡು ಪ್ರಕರಣ ದಾಖಲಾಯಿತು, ಸುಪ್ರೀಂಕೋರ್ಟ್ ಆ ಸ್ವಾಮಿನಾ ಒಳಗೆ ಹಾಕಲು ಹೇಳಿತು. ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಹೊಂದಾಣಿಕೆ ರಾಜಕಾರಣ ಬಿಟ್ಟು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದರು.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಸಂಬಂಧ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ನಾವು ಒತ್ತಾಯಿಸಿದ್ದೇವೆ. ಆದರೂ ರಾಜ್ಯ ಸರ್ಕಾರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಈ ಷಡ್ಯಂತ್ರ ಮಾಡಲಾಗಿದೆ. ರಾಜ್ಯದಲ್ಲಿ ಎರಡು ಫ್ಯಾಕ್ಟರಿ ಇವೆ, ಅದರಲ್ಲೊಬ್ಬರ ಹೆಸರು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಫ್ಯಾಕ್ಟರಿ ಹೆಸರು ಮೇನಲ್ಲಿ ನಾನು ಹೇಳುತ್ತೇನೆ. ಆ ಎರಡು ಫ್ಯಾಕ್ಟರಿಗಳ ಕೆಲಸನೇ ಅದು. ಇಬ್ಬರು ಬೇರೆ ಬೇರೆ ಪಕ್ಷದಲ್ಲಿದ್ದಾರೆ. ಇಬ್ಬರದ್ದೂ ಸಿಡಿ ಬಿಸಿನೆಸ್ ಒಂದೇ ಎಂದು ಕಿಡಿಕಾರಿದರು.

ಇಬ್ಬರೂ ರಾಜಕಾರಣಿಗಳು ಹಲ್ಕಾ ರಾಜಕಾರಣ ಮಾಡುತ್ತಿದ್ದಾರೆ. ಎರಡು ಕುಟುಂಬಗಳು ರಾಜ್ಯದ ರಾಜಕಾರಣವನ್ನು ಹಾಳು ಮಾಡ್ತಿವೆ. ಎಸ್ಐಟಿ ತನಿಖೆಗೆ ಪ್ರಜ್ವಲ್ ರೇವಣ್ಣ ಕೇಸ್ ವಹಿಸಲಾಗಿದೆ. ತನಿಖೆಯಿಂದ ಪೆನ್ಡ್ರೈವ್ ಯಾರು ಬಿಡುಗಡೆ ಮಾಡಿದ್ದು ಅಂತಾ ಗೊತ್ತಾಗಲಿದೆ ಎಂದರು.

ಮಹಿಳೆಯರ ಗೌರವ ದೃಷ್ಟಿಯಿಂದ ಗೌಪ್ಯವಾಗಿಡಬೇಕಿತ್ತು. ಉದ್ದೇಶಪೂರ್ವಕವಾಗಿ ಚುನಾವಣೆ ವೇಳೆ ಬ್ಲಾಕ್ ಮೇಲ್ ಮಾಡಲು ಬಳಕೆ ಮಾಡಿದ್ದಾರೆ. ಭಯ ಬೀಳಿಸಿ ಆ ಕುಟುಂಬದ ಮರ್ಯಾದೆ ಕಳೆಯಲು ವಿಡಿಯೋಗಳನ್ನು ಹರಿಬಿಡಲಾಗಿದೆ. ಚುನಾವಣೆ ಮುಂಚಿತವಾಗಿಯೇ ಬಿಡುಗಡೆ ಮಾಡಬೇಕಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಾಗ ಬಿಡುಗಡೆ ಮಾಡಬೆಕಿತ್ತು. ಈಗ ಯಾಕೆ ಪೆವ್ಡ್ರೈವ್ನಲ್ಲಿ ಹಾಕಿ ಹಂಚಬೇಕಿತ್ತು ಎಂದು ಪ್ರಶ್ನಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಒಂದು ವರ್ಷ ಆಯಿತು, ಬಾಯಿ ತೆಗೆದಿಲ್ಲ. ಅವನು ತನ್ನ ಹೆಂಡತಿಗೆ ಟಿಕೆಟ್ ಕೊಡಿಸಲು ಆಗ್ಲಿಲ್ಲ, ಮೀಸಲಾತಿ ಎಲ್ಲಿ ಕೊಡಿಸುತ್ತಾನೆ ಎಂದು ವ್ಯಂಗ್ಯವಾಡಿದರು.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)