T20 World cup: ಐಪಿಎಲ್‌ನಲ್ಲಿ ಮಿಂಚಿದರು ಈ ಐದು ಆಟಗಾರರಿಗೆ ಟೀಮ್ ಇಂಡಿಯಾದಲ್ಲಿ ಸಿಗದ ಅವಕಾಶ

Arun Kumar
0

ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಸಿಗುವ ಆಸೆಯನ್ನು ಕಾಣುತ್ತಿದ್ದ ಐಪಿಎಲ್ನಲ್ಲಿ ಮಿಂಚುತ್ತಿರುವ ಸ್ಟಾರ್ ಆಟಗಾರರಿಗೆ ನಿರಾಸೆ ಆಗಿದೆ. ಟೀಮ್ ಇಂಡಿಯಾ ಜೆರ್ಸಿ ತೊಟ್ಟ, ರಾಷ್ಟ್ರೀಯ ತಂಡದ ಜಯದಲ್ಲಿ ಮಿಂಚುವ ಹಂಬಲ ಹೊಂದಿದ್ದ ಆಟಗಾರರ ಪಟ್ಟಿ ಇಲ್ಲಿದೆ.

ಈ ಪಟ್ಟಿಯನ್ನು ಮಾಡುತ್ತಾ ಹೋದರೆ ದೊಡ್ಡದೆ ಆಗುತ್ತದೆ. ಆದರೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ಐಪಿಎಲ್ನಲ್ಲಿ ತಮ್ಮ ತಮ್ಮ ತಂಡಕ್ಕೆ ನೆರವಾಗುತ್ತಿರುವ ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಪಂಜಾಬ್ ಕಿಂಗ್ಸ್ ಆಟಗಾರರು ಇರುವುದು ವಿಶೇಷ. ಅದರಲ್ಲಿ ಒಬ್ಬರು ಶಶಾಂಕ್ ಸಿಂಗ್..

ಪಂಜಾಬ್ ಕಿಂಗ್ಸ್ಗೆ ಅಗತ್ಯ ಇದ್ದಾಗಲೇಲ್ಲಾ ರನ್ ಬಾರಿಸಿದ ಆಟಗಾರರ ಪಟ್ಟಿಯನ್ನು ಈ ಬಾರಿ ತೆಗೆದರೆ ಆ ಪಟ್ಟಿಯಲ್ಲಿ ಶಶಾಂಕ್ ಸಿಂಗ್ ಹೆಸರು ಮುಂಚೂಣಿಯಲ್ಲಿರುತ್ತದೆ. ಇವರು ಮಿಡ್ಲ್ ಆರ್ಡರ್ ಬ್ಯಾಟರ್ ಆಗಿ ತಂಡದ ಬಲು ತುಂಬಿದ್ದಾರೆ. ಯಾವುದೇ ಬೌಲರ್ ಇದ್ದರೂ ಹೆದರದೆ ಬ್ಯಾಟ್ ಮಾಡುವ ಇವರ ಧಾಟಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದೆ. ಇವರು ಪ್ರಸಕ್ತ ಐಪಿಎಲ್ನಲ್ಲಿ ಆಡಿದ 9 ಪಂದ್ಯಗಳಲ್ಲಿ ಇವರು 182.63ರ ಸರಾಸರಿಯಲ್ಲಿ 263 ರನ್ ಕಲೆ ಹಾಕಿದ್ದಾರೆ. ಇವರ ಆಟ ನೋಡಿ ಇವರಿಗೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಲಭಿಸುತ್ತದೆ ಎಂದೇ ಅಂದಾಜಿಸಲಾಗಿತ್ತು.

ಆಶುತೋಷ್ ಶರ್ಮಾ
ಈ ರೇಸ್ನಲ್ಲಿದ್ದ ಮತ್ತೊಬ್ಬ ಪ್ಲೇಯರ್ ಎಂದರೆ ಅದು ಸಹ ಪಂಜಾಬ್ ಕಿಂಗ್ಸ್ ಮಿಡ್ಲ್ ಆರ್ಡರ್ ಬ್ಯಾಟರ್ ಆಶುತೋಷ್ ಶರ್ಮಾ. ಶಶಾಂಕ್ ಸಿಂಗ್ ಹಾಗೂ ಆಶುತೋಷ್ ತಮ್ಮ ಪ್ರಭಾವಿ ಬ್ಯಾಟಿಂಗ್ನಿಂದಲೇ ಎಲ್ಲರ ಮನ ಕದ್ದ ಆಟಗಾರರು. ಆಶುತೋಷ್ ಪಂಜಾಬ್ ಪರ 6 ಪಂದ್ಯಗಳಲ್ಲಿ ಬ್ಯಾಟ್ ಮಾಡಿ 190.28ರ ಸರಾಸರಿಯಲ್ಲಿ 159 ರನ್ ಸಿಡಿದ್ದಾರೆ. ಈ ವೇಳೆ ಅವರ ಗರಿಷ್ಠ ಸ್ಕೋರ್ 61. ಇವರನ್ನು ಆಯ್ಕೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)