Bengaluru Rain: ಮೊದಲ ಮಳೆಗೆ ನಗರದಲ್ಲಿ ಹಲವು ಅವಾಂತರ; ಬಿಬಿಎಂಪಿ ವಿರುದ್ಧ ಆಕ್ರೋಶ

Arun Kumar
0

ಆರು ತಿಂಗಳ ಸುದೀರ್ಘ ಕಾಯುವಿಕೆ ನಂತರ ಅಂತೂ ಇಂತು ಬೆಂಗಳೂರಿನಲ್ಲಿ ಉತ್ತಮವಾಗಿ ಮಳೆಯಾಗಿದೆ. ತೀರಾ ಹೆಚ್ಚು ಮಳೆಯಾಗದಿದ್ದರೂ, ವಾತಾವರಣ ತಂಪಾಗುವಂತೆ ಮಳೆಯಾಗಿದ್ದು, ಜನರಲ್ಲಿ ನೆಮ್ಮದಿ ತರಿಸಿದೆ.

ಆದರೆ ಆರು ತಿಂಗಳು ಮಳೆ ಬಿಡುವು ಕೊಟ್ಟಿದ್ದರೂ ಬಿಬಿಎಂಪಿ ಮಾತ್ರ ನಗರದಲ್ಲಿ ಮಳೆಯಾದರೆ ಆಗುವ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗಿಲ್ಲ. ಸಾಧಾರಣ ಮಳೆಗೆ ನಗರದ ಹಲವು ಕಡೆ ರಸ್ತೆಗಳು ಜಲಾವೃತವಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

ಹಲವು ಕಡೆಗಳಲ್ಲಿ ಅಂಡರ್ ಪಾಸ್ಗಳಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇಷ್ಟು ಸಮಯ ಸಿಕ್ಕರೂ ಸಮಸ್ಯೆ ಸರಿಪಡಿಸಲು ಮುಂದಾಗದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಕ್ಸ್ನಲ್ಲಿ ಬೆಂಗಳೂರು ವೆದರ್ ಮ್ಯಾನ್ ಎನ್ನುವ ಬಳಕೆದಾರರು ನೀರು ತುಂಬಿಕೊಂಡಿರುವ ಚಿತ್ರವನ್ನು ಹಂಚಿಕೊಂಡು ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ನಾವು ಅನುಭವಿಸುತ್ತೇವೆ ನೀವು ಮಲಗಿ

ಪ್ರೀತಿಯ ಬಿಬಿಎಂಪಿ, ಬೆಂಗಳೂರಿನಲ್ಲಿ ಮಳೆ ಇಲ್ಲದೆ ನೀವು 6 ತಿಂಗಳು ಕಳೆದಿದ್ದೀರಿ ಆದರೆ ನೀವು ಎಂದಿನಂತೆ ಕೆಲಸ ಮಾಡುವ ಬದಲು ಮಲಗಿ ಕಾಲ ಕಳೆದಿದ್ದಾರೆ. ಚರಂಡಿಗಳನ್ನು ತೆರವುಗೊಳಿಸಲಿಲ್ಲ, ರಸ್ತೆಗಳನ್ನು ದುರಸ್ತಿ ಮಾಡಲಿಲ್ಲ, ಇದರಿಂದಾಗಿ ಸಾಮಾನ್ಯ ಮಳೆಗೂ ಟ್ರಾಫಿಕ್ ಜಾಮ್ ಮತ್ತು ರಸ್ತೆಗಳು ಜಲಾವೃತಗೊಂಡಿವೆ, ನಾವು ಪ್ರಯಾಣಿಸಲು ನರಕವನ್ನು ಅನುಭವಿಸುತ್ತಿದ್ದೇವೆ, ಇದು ಮಳೆಯ ಸಮಯದಲ್ಲಿ ಸುಂದರವಾದ ಅನುಭವವಾಗಬೇಕಿತ್ತು. ನಿಮಗೆ ಧನ್ಯವಾದಗಳು, ನಾವು ನಾಗರಿಕರು ತೊಂದರೆ ಅನುಭವಿಸುವಾಗ ನಿದ್ದೆ ಮಾಡಿ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)