ICC Ranking: ಟೀಮ್ ಇಂಡಿಯಾದಿಂದ ಅಗ್ರ ಸ್ಥಾನ ಕಸಿದುಕೊಂಡ ಈ ತಂಡ

Arun Kumar
0

ಟೀಮ್ ಇಂಡಿಯಾ ಸದ್ಯ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಆದ ಛಾಪು ಹೊಂದಿದೆ. ಮೊದಲೆಲ್ಲಾ ಬರೀ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದ ತಂಡ, ಈಗ ಬೌಲಿಂಗ್ನಿಂದಲೂ ಸದ್ದು ಮಾಡುತ್ತಿದೆ. ಹೀಗಾಗಿ ಕ್ರಿಕೆಟ್ನ ಎಲ್ಲ ಸ್ವರೂಪದಲ್ಲೂ ಅಧಿಪತ್ಯ ಸಾಧಿಸುವ ಕನಸು ಕಾಣುತ್ತಿದೆ. ಆದರೆ ಟೀಮ್ ಇಂಡಿಯಾ ನೂತನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಹಿನ್ನಡೆಯನ್ನು ಅನುಭವಿಸಿದೆ.

ಜೂನ್ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಅತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಹಿನ್ನಡೆ ಆಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಬಹು ದಿನಗಳಿಂದ ಕಾಯ್ದುಕೊಂಡು ಬಂದಿದ್ದ ನಂಬರ್ ಒನ್ ಸ್ಥಾನಕ್ಕೆ ಕುತ್ತು ಬಂದಿದೆ. ಐಸಿಸಿ ಬಿಡುಗಡೆ ಮಾಡಿರುವ ವಾರ್ಷಿಕ ರ್ಯಾಂಕಿಂಗ್ನಲ್ಲಿ ಭಾರತ ಅಗ್ರ ಸ್ಥಾನವನ್ನು ಬಿಟ್ಟು ಕೊಟ್ಟಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವಿಜೇತ ಆಸ್ಟ್ರೇಲಿಯಾ ತಂಡ ಇದೀಗ ಮೊದಲ ಸ್ಥಾನಕ್ಕೆ ತಲುಪಿದೆ. ಇದು ರೋಹಿತ್ ಶರ್ಮಾ ಬಳಗಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಸೀಮಿತ ಓವರ್ಗಳಲ್ಲಿ ನಂಬರ್ 1
ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನ ಕಳೆದುಕೊಂಡ ಬಳಿಕ ಈಗ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆಯಲಿದೆ. ಟೆಸ್ಟ್ ಶ್ರೇಯಾಂಕದಲ್ಲಿ ಭಾರತಕ್ಕಿಂತ ನಾಲ್ಕು ಅಂಕ ಹೆಚ್ಚು ಕಲೆ ಹಾಕಿರುವ ಆಸ್ಟ್ರೇಲಿಯಾ ಅಗ್ರ ಸ್ಥಾನ ಪಡೆದುಕೊಂಡಿದೆ. ಇನ್ನು ಟೀಮ್ ಇಂಡಿಯಾ 120 ಅಂಕಗಳನ್ನು ಕಲೆ ಹಾಕಿದ್ದು ಎರಡನೇ ಸ್ಥಾನದಲ್ಲಿದೆ.

ಐಸಿಸಿ ತನ್ನ ವಾರ್ಷಿಕ ಶ್ರೇಯಾಂಕಗಳನ್ನು ಶುಕ್ರವಾರ ಅಪ್ಡೇಟ್ ಮಾಡಿದೆ. ಕಳೆದ ವರ್ಷ ಓವಲ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 209 ರನ್ಗಳ ಅದ್ಭುತ ಗೆಲುವು ಸಾಧಿಸಿದ ನಂತರ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ತಂಡವು ಅಗ್ರಸ್ಥಾನವನ್ನು ತಲುಪಿತ್ತು. ಇಡೀ ಟೆಸ್ಟ್ ಶ್ರೇಯಾಂಕದಲ್ಲಿ ಇದೊಂದೇ ದೊಡ್ಡ ಬದಲಾವಣೆಯಾಗಿದ್ದು, ಉಳಿದ ತಂಡಗಳು ಮೊದಲು ಇದ್ದ ಸ್ಥಾನವನ್ನೇ ಕಾಯ್ದುಕೊಂಡಿವೆ.

ಯಾವ ತಂಡಕ್ಕೆ ಎಷ್ಟನೇ ಸ್ಥಾನ?
ಇಂಗ್ಲೆಂಡ್ 105 ಅಂಕಗಳೊಂದಿಗೆ, ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 103 ರೇಟಿಂಗ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ಮತ್ತು ನ್ಯೂಜಿಲೆಂಡ್ 96 ರೇಟಿಂಗ್ನೊಂದಿಗೆ 5 ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಸ್ಥಿತಿ ತುಂಬಾ ಕೆಟ್ಟದಾಗಿದ್ದು, 89 ಅಂಕಗಳೊಂದಿಗೆ, ಆರನೇ ಸ್ಥಾನದಲ್ಲಿದೆ. ಶ್ರೀಲಂಕಾ 83 ಅಂಕಗಳೊಂದಿಗೆ 7 ನೇ ಸ್ಥಾನದಲ್ಲಿದೆ ಮತ್ತು ವೆಸ್ಟ್ ಇಂಡೀಸ್ 82 ರೇಟಿಂಗ್ನೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಇನ್ನೇರಡು ತಿಂಗಳು ಬದಲಾವಣೆ ಇಲ್ಲ
ಐಸಿಸಿ ನೂತನ ಶ್ರೇಯಾಂಕದಲ್ಲಿ ಇನ್ನು ಎರಡು ತಿಂಗಳು ಯಾವುದೇ ಬದಲಾವಣೆ ಸಾಧ್ಯವಿಲ್ಲ. ಟೀಮ್ ಇಂಡಿಯಾ ಮತ್ತು ವಿಶ್ವದ ಇತರ ಯಾವುದೇ ತಂಡಗಳು ಮುಂದಿನ ಎರಡು ತಿಂಗಳವರೆಗೆ ಯಾವುದೇ ಟೆಸ್ಟ್ ಆಡುವುದಿಲ್ಲ. ಏಕೆಂದರೆ ಜೂನ್ನಲ್ಲಿ T20 ವಿಶ್ವಕಪ್ ಆಡಲಿದೆ. ಜುಲೈನಲ್ಲಿ ಮತ್ತೆ ಟೆಸ್ಟ್ ಪಂದ್ಯಗಳು ಆರಂಭವಾಗಲಿವೆ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)