Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ

Arun Kumar
0

ಬೆಂಗಳೂರು, ಏಪ್ರಿಲ್ 25: ಕರ್ನಾಟಕದ ರಾಜ್ಯದಲ್ಲಿ ಬೇಸಿಗೆ ಮಧ್ಯೆ ಅಲ್ಲಲ್ಲಿ ಪೂರ್ವ ಮುಂಗಾರು ಮಳೆ (Pre Monsoon rain) ಸುರಿಯಲಾರಂಭಿಸಿದೆ. ಹೆಚ್ಚು ಒಣಹವೆ, ಕಡಿಮೆ ಮಳೆ ಕಾಣುವ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೇ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಳೆ ಬಿದ್ದಿದೆ. ಹಾಗಾದರೆ ಏಪ್ರಿಲ್ 1ರಿಂದ 25ರವರೆಗೆ ದಾಖಲಾದ ಮಳೆ ಎಷ್ಟು? ಉಂಟಾದ ಮಳೆ ಕೊರತೆ?, ಎಲ್ಲೆಲ್ಲಿ ಹೆಚ್ಚು ಮಳೆ ಆಗಿದೆ? ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಪೂರ್ವ ಮುಂಗಾರು ಮಳೆ ಕೈ ಕೊಟ್ಟಿದೆ. ಉಳಿದಂತೆ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಸದ್ಯ ರಾಜ್ಯದಲ್ಲಿ ಏಪ್ರಿಲ್ 1-25ರವರೆಗೆ ಒಟ್ಟಾರೆ ಶೇಕಡಾ 20ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಐಎಂಡಿ ತಿಳಿಸಿದೆ.

ಏಪ್ರಿಲ್ 1ರಿಂದ 25ರ ವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಗೆ ವಾಡಿಕೆ (32ಮಿ.ಮೀ.) ಮಳೆ ಆಗದೇ ಕೇವಲ 6ಮಿ.ಮೀ. ಮಳೆ ದಾಖಲಾಗುವ ಮೂಲಕ ದಕ್ಷಿಣ ಒಳನಾಡಿನ ಭಾಗಕ್ಕೆ ಬರೋಬ್ಬರಿ ಶೇ. -83 ರಷ್ಟು ಮಳೆ ಕೊರತೆ ಉಂಟಾಗಿದೆ.

ಇದೇ 25 ದಿನಗಳ ಅವಧಿಯಲ್ಲಿ ಹೆಚ್ಚು ಮಳೆ ಕಾಣುತ್ತಿದ್ದ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವಾಡಿಕೆ (42ಮಿ.ಮೀ.) ಮಳೆ ಆಗದೇ ಕೇವಲ 35 ಮಿ.ಮೀ. ಮಳೆ ದಾಖಲಾಗಿದ್ದು, ಇದರಿಂದ ಈ ಭಾಗದಲ್ಲಿ ಒಟ್ಟು ಶೇ. -17 ಮಳೆ ಕೊರತೆ ಕಂಡು ಬಂದಿದೆ.

ರಾಜ್ಯದಲ್ಲಿ ಹೆಚ್ಚು ಮಳೆ ಆಗಿದ್ದೆಲ್ಲಿ?
ಏಪ್ರಿಲ್ ತಿಂಗಳ ಇದೇ ಅವಧಿಯಲ್ಲಿ ಬರೀ ಒಣಹವೆ ಕಂಡು ಬರುತ್ತಿದ್ದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು (+30ಮಿ.ಮೀ.) ಮಳೆ ಆಗಿದೆ.

ಅಂದರೆ ಈ ಭಾಗದಲ್ಲಿ ವಾಡಿಕೆ (18ಮಿ.ಮೀ.) ಮಳೆಗಿಂತ 24 ಮಿ.ಮೀ. ಹೆಚ್ಚು ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು (IMD) ಮಾಹಿತಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)