ಮೈಸೂರು, ಏಪ್ರಿಲ್ 25: ಇಷ್ಟರಲ್ಲಿಯೇ ಮಳೆ ಸುರಿಯಬೇಕಾಗಿತ್ತು. ಆದರೆ ಬಹುತೇಕ ಕಡೆಗಳಲ್ಲಿ ಅದರಲ್ಲೂ ನಾಗರಹೊಳೆ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಮಳೆ ಸುರಿಯದ ಕಾರಣ ಅರಣ್ಯ ಒಣಗುತ್ತಿದ್ದು, ಕೆರೆಕಟ್ಟೆಗಳಲ್ಲಿ ನೀರು ಬತ್ತಿದೆ. ಪರಿಣಾಮ ಜೀವ ಸಂಕುಲಗಳ ಸ್ಥಿತಿ ಚಿಂತಾಜನಕವಾಗಿದೆ.
ಮುಂಗಾರು ಮಳೆ ಸಮೃದ್ಧವಾಗಿ ಸುರಿಯದ ಕಾರಣ ಮತ್ತು ಬೇಸಿಗೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ಈಗಾಗಲೇ ಕುರುಚಲು ಕಾಡು ಸೇರಿದಂತೆ ಮರಗಿಡಗಳು ಒಣಗಿವೆ ಇದರಿಂದ ಹಚ್ಚ ಹಸಿರಿನಿಂದ ಕೂಡಿ ನಿಸರ್ಗ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದ್ದ ಅರಣ್ಯ ಪ್ರದೇಶ ಬಿರು ಬಿಸಿಲಿಗೆ ಒಣಗಿ ಬೋರಲಾಗುತ್ತಿದೆ. ಜತೆಗೆ ಕುರುಚಲು ಕಾಡುಗಳು ಒಣಗಿ ನಿಂತಿದ್ದು, ಕೆರೆಗಳಲ್ಲಿ ನೀರು ಬತ್ತುತ್ತಿರುವುದರಿಂದ ಬೇಸಿಗೆಯ ದಿನಗಳು ಕಳೆಯುವ ವೇಳೆಗೆ ಮಳೆ ಬಾರದೆ ಹೋರದೆ ಅರಣ್ಯ ನಾಶವಾಗಿ ಬಿಡುತ್ತಾ ಎಂಬ ಭಯ ಕಾಡುತ್ತಿದೆ.
ಇದೀಗ ಬಂಡಿಪುರ, ನಾಗರಹೊಳೆ ಸೇರಿದಂತೆ ಅರಣ್ಯ ಪ್ರದೇಶಗಳಿಗೊಂದು ಸುತ್ತು ಹೊಡೆದು ಬಂದರೆ ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ಅಭಯಾರಣ್ಯದ ಮರಗಿಡಗಳು ಸಂಪೂರ್ಣ ಒಣಗಿ ನಿಂತಿರುವುದು, ಹಸಿರು ಮೇವು, ನೀರಿಗಾಗಿ ಜಿಂಕೆಗಳು ಸೇರಿದಂತೆ ಹಲವು ಪ್ರಾಣಿಗಳು ಅಲೆಯುತ್ತಿರುವುದು ಕಂಡು ಬರುತ್ತಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.