Hevay Rain: ಬಿರುಗಾಳಿ ಮಳೆಗೆ ನೆಲ ಕಚ್ಚಿದ ಬಾಳೆ, ಟೊಮೆಟೊ

Arun Kumar
0

ಚಾಮರಾಜನಗರ: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಗಡಿಜಿಲ್ಲೆಯ ಹಲವು ಗ್ರಾಮಗಳು ಗುರುವಾರ ಸಂಜೆ ಮೊದಲ ಮಳೆಯ ಖುಷಿ ಕಂಡಿದ್ದಾರೆ. ಜೊತೆಗೆ, ಬೀಸಿದ ಬಿರುಗಾಳಿಗೆ ಸಂಕಷ್ಟವೂ ಎದುರಾಗಿದೆ.

ಚಾಮರಾಜನಗರ ತಾಲೂಕಿನ ಮಂಗಲ, ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಹನೂರು ತಾಲೂಕಿನ ಅಜ್ಜಿಪುರ ಗ್ರಾಮಗಳ ಸುತ್ತಮುತ್ತ ಗುಡುಗಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದೆ.

ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಪಚ್ಚೇಗೌಡನದೊಡ್ಡಿ ಗ್ರಾಮದ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಭಾರಿ ಗಾಳಿಗೆ ಅಪಾರ ಬೆಳೆ ಹಾನಿಯಾಗಿದೆ. ದೊಮ್ಮನಗದ್ದೆ ಗ್ರಾಮದ ಶಿವರಾಜ್ ಎಂಬುವವರ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ.
ಪಚ್ಚೆಗೌಡನದೊಡ್ಡಿ ಗ್ರಾಮದ ರೈತ ಸಂಪತ್ ಕುಮಾರ್ ಅವರ ಜಮೀನಿನ 3500 ನೇಂದ್ರ ಬಾಳೆ ಭಾರಿ ಬಿರುಗಾಳಿಗೆ ನೆಲಕಚ್ಚಿದೆ, ರವಿಕುಮಾರ್ ಎಂಬ ರೈತರ ಜಮೀನಿನಲ್ಲಿ 1500 ಬಾಳೆ, ರಾಜೇಂದ್ರ ಎಂಬ ರೈತರ ಜಮೀನಿನಲ್ಲಿ 1800 ಬಾಳೆ, ಮಾದೇಗೌಡ ಎಂಬಾತ ಬೆಳೆದಿದ್ದ 1000 ನೇಂದ್ರ ಬಾಳೆ, ಚಿಗತಾಪುರ ಗ್ರಾಮದ ರಂಗಸ್ವಾಮಿ ಎಂಬಬರು ಬೆಳೆದಿದ್ದ 1500 ನೇಂದ್ರ ಬಾಳೆ ಭಾರಿಗಾಳಿಗೆ ನೆಲಕಚ್ಚಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)