ಸಂಬಳವಿರುವ ಹಾಗೂ ಸಂಬಳರಹಿತ ವ್ಯಕ್ತಿಗಳ ಮೇಲೆ ವೃತ್ತಿಪರ ತೆರಿಗೆ ವಿಧಿಸುವ ಮೂಲಕ ಕೆಲವೊಂದು ರಾಜ್ಯಗಳು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತವೆ. ನಿಮ್ಮ ಆದಾಯ ಎಷ್ಟೇ ಇರಲಿ ಬಹುತೇಕ ಎಲ್ಲಾ ಆದಾಯ ಗಳಿಸುವವರು ಈ ತೆರಿಗೆಗೆ ಒಳಪಡುತ್ತಾರೆ.
ಸಂಬಳವಿರುವ ಹಾಗೂ ಸಂಬಳರಹಿತ ವ್ಯಕ್ತಿಗಳ ಮೇಲೆ ವೃತ್ತಿಪರ ತೆರಿಗೆ ವಿಧಿಸುವ (Professional Tax) ಮೂಲಕ ಕೆಲವೊಂದು ರಾಜ್ಯಗಳು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತವೆ. ನಿಮ್ಮ ಆದಾಯ (Income) ಎಷ್ಟೇ ಇರಲಿ ಬಹುತೇಕ ಎಲ್ಲಾ ಆದಾಯ ಗಳಿಸುವವರು ಈ ತೆರಿಗೆಗೆ ಒಳಪಡುತ್ತಾರೆ.
ವ್ಯಾಪಾರ, ಅಥವಾ ಯಾವುದೇ ಇತರ ವಿಧಾನಗಳ ಮೂಲಕ ಆದಾಯ ಗಳಿಸುವ ಪ್ರತಿಯೊಬ್ಬ ಸಂಬಳದಾರ ಮತ್ತು ಸ್ವಯಂ ಉದ್ಯೋಗಿಗಳು ವೃತ್ತಿಪರ ತೆರಿಗೆಯನ್ನು ಪಾವತಿಸಲೇ ಬೇಕು.
ವೃತ್ತಿಪರ ತೆರಿಗೆಯನ್ನು ಆಯಾ ರಾಜ್ಯಗಳೇ ವಿಧಿಸುತ್ತವೆ
ಇನ್ನು ವೃತ್ತಿಪರ ತೆರಿಗೆ ಎಂಬುದು ಆಯಾಯ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಕೆಲವು ರಾಜ್ಯಗಳು ಈ ತೆರಿಗೆಯನ್ನು ಕಡ್ಡಾಯಗೊಳಿಸಿದರೆ ಇನ್ನು ಕೆಲವು ರಾಜ್ಯಗಳು ಇಂತಹ ತೆರಿಗೆಗಳನ್ನು ವಿಧಿಸಿಲ್ಲ ಎಂದು RSM ಇಂಡಿಯಾ, ವ್ಯಾಪಾರ ಮತ್ತು ತೆರಿಗೆ ಸಲಹಾ ಗುಂಪು ಇದರ ಸಂಸ್ಥಾಪಕರಾಗಿರುವ ಸುರೇಶ್ ಸುರಾನಾ ಹೇಳುತ್ತಾರೆ.
ಈ ಕುರಿತು ಇನ್ನಷ್ಟು ಮಾಹಿತಿ ನೀಡಿರುವ ಸುರಾನಾ ವೃತ್ತಿಪರ ತೆರಿಗೆಯನ್ನು ಹೇಗೆ ಕ್ಲೈಮ್ ಮಾಡಬಹುದು ಹಾಗೂ ಇದನ್ನು ಯಾಕೆ ವಿಧಿಸಲಾಗುತ್ತದೆ ಮೊದಲಾದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ವೃತ್ತಿಪರ ತೆರಿಗೆ ವಿಧಿಸುವ ಮುಖ್ಯ ಉದ್ದೇಶವೇನು? ಕ್ಲೈಮ್ ಮಾಡಬಹುದೇ?
ರಾಜ್ಯ ಸರಕಾರಗಳು ಆದಾಯದ ಮೂಲವಾಗಿ ವೃತ್ತಿಪರ ತೆರಿಗೆಯನ್ನು ವಿಧಿಸುತ್ತದೆ. ವೃತ್ತಿಪರ ತೆರಿಗೆ ಸಂಗ್ರಹದಿಂದ ಬರುವ ಆದಾಯವು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ.
ಆದರೆ ತೆರಿಗೆ ಕಾಯಿದೆ 1961 ರ ಪ್ರಕಾರ ಯಾವುದೇ ವ್ಯಕ್ತಿ ತನ್ನ ತೆರಿಗೆಗೆ ಒಳಪಡುವ ಆದಾಯದಿಂದ ವೃತ್ತಿಪರ ತೆರಿಗೆಯನ್ನು ಪಾವತಿಸಿದ್ದರೆ ಅದರಲ್ಲಿ ವಿನಾಯಿತಿಯನ್ನು ಪಡೆಯಬಹುದು ಎಂದು ಸುರಾನಾ ಹೇಳುತ್ತಾರೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.