Shivamogga: ಡೆಂಘಿ ಜ್ವರಕ್ಕೆ ನವವಿವಾಹಿತೆ ಬಲಿ? ಶಿವಮೊಗ್ಗದಲ್ಲಿ 263 ಡೆಂಘಿ ಕೇಸ್​​!

Arun Kumar
0

 

ಶಿವಮೊಗ್ಗ: ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ರಿಪ್ಪನ್ ಪೇಟೆಯ ನವವಿವಾಹಿತೆಯೊಬ್ಬರು (Newlyweds) ಡೆಂಘಿ ಜ್ವರಕ್ಕೆ (Dengue Fever) ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕೇವಲ 6 ತಿಂಗಳ ಹಿಂದಷ್ಟೇ ಮಧುರಾ ಎಂಬ ಯುವತಿಗೆ ಮಂಜುನಾಥ್ ಎಂಬವರ ಜೊತೆ ವಿವಾಹ (Marriage) ಆಗಿತ್ತು. ಒಂದು ವಾರದಿಂದ ಮಧುರಾಗೆ ಡೆಂಘಿ ಜ್ವರ ಕಾಣಿಸಿಕೊಂಡಿತ್ತು. ಸಾಗರದ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆಗೆಂದು ದಾಖಲಾಗಿದ್ದ ಮಧುರಾ, ನಿನ್ನೆ ಬೆಳಗ್ಗೆ ಡಿಸ್ಚಾರ್ಜ್ ಆಗಿ ತಾಯಿ ಮನೆಗೆ ತೆರಳಿದ್ದರು.


ಕಳೆದ ರಾತ್ರಿ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಗರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಮಧುರ ಸಾವನ್ನಪ್ಪಿದ್ದಾರೆ. ಶಿವಮೊಗ್ಗದಲ್ಲಿ ಇದುವರೆಗೂ 263 ಡೆಂಘಿ ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗದಲ್ಲಿ ಇದುವರೆಗೂ 263 ಡೆಂಘಿ ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ ಜಿಲ್ಲಾಡಳಿತ ಒಟ್ಟು 6000 ಟೆಸ್ಟ್ ಮಾಡಿದ್ದಾರೆ. ಮಧುರ ಸಾವಿನ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ರಾಜೇಶ್ ಸುರಗಿಹಳ್ಳಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮಧುರ ಕುಟುಂಬ ಆಸ್ಪತ್ರೆಯಿಂದ ಸ್ವಯಂಪ್ರೇರಿತವಾಗಿ ಡಿಸ್ಚಾರ್ಜ್ ಮಾಡಿದ್ದಾಗಿ ನ್ಯೂಸ್ 18ಗೆ ಸುರಗಿಹಳ್ಳಿ ಮಾಹಿತಿ ನೀಡಿದ್ದಾರೆ.


ಡೆಂಘಿನಿಂದ ಬಳಲುತ್ತಿದ್ದ ಮಧುರಗೆ ಹೃದಯಾಘಾತ ಅಥವಾ ಇಂಟ್ರನಲ್ ಬೀಡಿಂಗ್ ನಿಂದ ಸಾವನ್ನಪ್ಪಿರುವ ಬಗ್ಗೆ ಡಿಎಚ್​​ಓ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿರುವದಾಗಿ ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)