Business Ideas: ಬರೀ 20,000 ರೂಪಾಯಿ ಹೂಡಿಕೆ ಮಾಡಿ ಶುರು ಮಾಡಬಹುದಾದಂತಹ ವ್ಯವಹಾರಗಳಿವು!

Arun Kumar
0

 

ಈ ಹಣ ಹೂಡಿಕೆ ಅನ್ನೋ ವಿಚಾರ ಬಂದಾಗಲೇ ನೋಡಿ ಅರ್ಧಕ್ಕಿಂತ ಹೆಚ್ಚು ವ್ಯವಹಾರ ಯೋಜನೆಗಳು ಶುರುವಾಗುವ ಮುಂಚೆಯೇ ಅಂತ್ಯ ಕಾಣುವುದು.

ತಿಂಗಳಿಗೆ ಸಂಬಳ ಬರುವ ಕೆಲಸವನ್ನು ಬಿಟ್ಟು ತಮ್ಮದೇ ಆದ ಸ್ವಂತ ವ್ಯವಹಾರವನ್ನು (Business) ಶುರು ಮಾಡಬೇಕೆಂದು ಬಹುತೇಕರಿಗೆ ಅನ್ನಿಸುತ್ತಿರುತ್ತದೆ, ಆದರೆ ತುಂಬಾ ಕಡಿಮೆ ಜನ ಜೀವನದಲ್ಲಿ ರಿಸ್ಕ್ (Risk) ತೆಗೆದುಕೊಂಡು ಮಾಡುತ್ತಿರುವ ಕೆಲಸವನ್ನು ಬಿಟ್ಟು ಹಣ ಹೂಡಿಕೆ ಮಾಡಿ ತಮ್ಮದೇ ಆದ ಸ್ವಂತ ವ್ಯವಹಾರವನ್ನು ಶುರು ಮಾಡುತ್ತಾರೆ. ಅನೇಕ ಜನರು ಒಳ್ಳೆಯ ವ್ಯವಹಾರದ ಯೋಜನೆಯೊಂದನ್ನು ಕಲ್ಪಿಸಿಕೊಳ್ಳಬಹುದು ಅಥವಾ ಯೋಚಿಸಬಹುದು (Think), ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಮುಖ್ಯವಾಗಿ ಬೇಕಾಗಿರುವುದು ಹಣ (Money) ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಈ ಹಣ ಹೂಡಿಕೆ ಅನ್ನೋ ವಿಚಾರ ಬಂದಾಗಲೇ ನೋಡಿ ಅರ್ಧಕ್ಕಿಂತ ಹೆಚ್ಚು ವ್ಯವಹಾರ ಯೋಜನೆಗಳು ಶುರುವಾಗುವ ಮುಂಚೆಯೇ ಅಂತ್ಯ ಕಾಣುವುದು.


ಅದಕ್ಕೆ ಅನೇಕ ವ್ಯವಹಾರಸ್ಥರು ಮೊದಲು ಹೂಡಿಕೆ ಮಾಡಲು ತಮ್ಮ ಬಳಿ ಎಷ್ಟು ಹಣ ಇದೆ ಎಂಬುದನ್ನು ತಿಳಿದುಕೊಂಡು, ನಂತರ ಅದಕ್ಕೆ ತಕ್ಕುದಾದ ವ್ಯವಹಾರ ಯೋಜನೆಯನ್ನು ರೂಪಿಸಿಕೊಳ್ಳುತ್ತಾರೆ.


ಹಾಗೆ ಯೋಚನೆ ಮಾಡಿದರೆ ನಮ್ಮಲ್ಲಿ ಹೂಡಿಕೆ ಮಾಡುವ ಹಣದ ಆಧಾರದ ಮೇಲೆ ಮತ್ತು ಅದಕ್ಕೆ ಸರಿಹೊಂದುವ ಅನೇಕ ರೀತಿಯ ಬಿಸಿನೆಸ್ ಐಡಿಯಾಗಳು ನಮ್ಮಲ್ಲಿವೆ.


ಒಟ್ಟಿನಲ್ಲಿ ಹೇಳುವುದಾದರೆ ಒಂದು ಯಶಸ್ವಿ ವ್ಯಾಪಾರಕ್ಕೆ ಸರಿಯಾದ ಯೋಜನೆ, ಹೂಡಿಕೆ ಮತ್ತು ಅದನ್ನು ಯಶಸ್ವಿ ವ್ಯವಹಾರವನ್ನಾಗಿ ಮಾಡಲು ಹೆಚ್ಚಿನ ನಿರ್ಣಯದಂತಹ ಹಲವಾರು ವಿಷಯಗಳ ಅಗತ್ಯವಿದೆ.


ಏಕೆಂದರೆ ವ್ಯಕ್ತಿ ಒಂದು ವ್ಯವಹಾರಕ್ಕೆ ಕಾಲಿಡುವಾಗ, ಆ ವ್ಯವಹಾರದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿರಬೇಕು. ನೀವು ಸರಿಯಾಗಿ ನಿರ್ಣಯ ಮಾಡಿದರೆ 20,000 ರೂಪಾಯಿಯಲ್ಲೂ ಸಹ ಒಳ್ಳೆಯ ವ್ಯವಹಾರವನ್ನು ಶುರು ಮಾಡಬಹುದು.


20,000 ಹೂಡಿಕೆಯಲ್ಲಿ ಶುರು ಮಾಡಬಹುದಾದ ವ್ಯವಹಾರ ಕಲ್ಪನೆಗಳಿವು..


ಕೈಯಿಂದ ಮಾಡಿದ ಮೇಣದಬತ್ತಿ ವ್ಯವಹಾರ


ಮೇಣದಬತ್ತಿಗಳು ಎಂದಿಗೂ ಬೇಡಿಕೆ ಇರುವಂತವು ಮತ್ತು ಇದನ್ನು 20,000 ರೂಪಾಯಿ ಹೂಡಿಕೆಯಲ್ಲಿಯೇ ಶುರು ಮಾಡಬಹುದು. ಮೇಣದಬತ್ತಿಗಳನ್ನು ವಿವಿಧ ಧಾರ್ಮಿಕ ಸಂದರ್ಭಗಳಿಗೆ ಅಥವಾ ಅಲಂಕಾರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.


ಹಬ್ಬದ ಋತುವಿನಲ್ಲಿಯಂತೂ ಮೇಣದಬತ್ತಿಯ ಬೇಡಿಕೆ ಆಕಾಶವನ್ನು ಮುಟ್ಟುತ್ತದೆ, ಸಾಮಾನ್ಯ ದಿನಗಳಲ್ಲಿಯೂ ಸಹ ಚಿಕಿತ್ಸಕ ಮತ್ತು ಪರಿಮಳಯುಕ್ತ ಮೇಣದಬತ್ತಿಗಳ ಬೇಡಿಕೆಯು ರೆಸ್ಟೋರೆಂಟ್‌ಗಳು, ಮನೆಗಳು ಮತ್ತು ಹೋಟೆಲ್‌ಗಳಲ್ಲಿ ಸಾಕಷ್ಟು ಹೆಚ್ಚಾಗಿರುತ್ತದೆ. ಆದ್ದರಿಂದ, ಕಡಿಮೆ ಹೂಡಿಕೆಯೊಂದಿಗೆ ಪ್ರಾರಂಭಿಸಲು ಇದು ಪರಿಪೂರ್ಣ ವ್ಯವಹಾರ ಕಲ್ಪನೆಯಾಗಿದೆ.


ಉಪ್ಪಿನಕಾಯಿ ತಯಾರಿಸುವುದು


ಕಡಿಮೆ ಹೂಡಿಕೆಯೊಂದಿಗೆ ಮತ್ತೊಂದು ಉತ್ತಮ ಮತ್ತು ಕಾರ್ಯಸಾಧ್ಯವಾದ ವ್ಯವಹಾರ ಕಲ್ಪನೆ ಎಂದರೆ ಅದು ಉಪ್ಪಿನಕಾಯಿ ವ್ಯಾಪಾರವಾಗಿದೆ. ನಮ್ಮಲ್ಲಿ ಬಹುತೇಕರಿಗೆ ಊಟದ ಸಮಯದಲ್ಲಿ ಉಪ್ಪಿನಕಾಯಿ ತಟ್ಟೆಯಲ್ಲಿ ಬೇಕೆ ಬೇಕು. ಊಟದ ಜೊತೆ ಮತ್ತು ತಿಂಡಿಯ ಜೊತೆ ಉಪ್ಪಿನಕಾಯಿ ತಿನ್ನುವುದು ನಮ್ಮಲ್ಲಿ ಅಭ್ಯಾಸವಾಗಿದೆ.


ಪ್ರತಿಯೊಂದು ಮನೆಯಲ್ಲೂ ಯಾವುದಾದರೂ ಒಂದು ಉಪ್ಪಿನಕಾಯಿ ಇದ್ದೇ ಇರುತ್ತದೆ. ಹೀಗಾಗಿ, ನೀವು ಸಣ್ಣ ವ್ಯಾಪಾರದೊಂದಿಗೆ ಪ್ರಾರಂಭಿಸಲು ಬಯಸಿದರೆ, ಉಪ್ಪಿನಕಾಯಿ ವ್ಯಾಪಾರವು ಸುರಕ್ಷಿತ ಮತ್ತು ಸುಲಭವಾದ ಆಯ್ಕೆಯಾಗಿದೆ.


ಭಾರತೀಯ ಮಾರುಕಟ್ಟೆಯಲ್ಲಿ ಉಪ್ಪಿನಕಾಯಿಗೆ ಬೇಡಿಕೆಯು ವರ್ಷವಿಡೀ ಹೆಚ್ಚಾಗಿರುತ್ತದೆ ಮತ್ತು ಈ ವ್ಯವಹಾರವನ್ನು 20,000 ದಿಂದ 25,000 ರೂಪಾಯಿ ಒಳಗೆ ಹೂಡಿಕೆ ಮಾಡಿ ಪ್ರಾರಂಭಿಸಬಹುದು.


ಕಂಟೆಂಟ್ ರೈಟಿಂಗ್


ಈಗಂತೂ ತುಂಬಾನೇ ಚೆನ್ನಾಗಿ ಬರೆಯುವ ಕೌಶಲ್ಯವನ್ನು ಹೊಂದಿರುವವರು ಇದ್ದರೆ, ಅವರಿಗೆ ತುಂಬಾನೇ ಬೇಡಿಕೆ ಇದೆ. ಜನರು ಈಗ ತಮ್ಮ ಬರವಣಿಗೆಯ ಕೌಶಲ್ಯವನ್ನು ಮಾರಾಟ ಮಾಡುತ್ತಿರುವುದರಿಂದ ಕಂಟೆಂಟ್ ರೈಟಿಂಗ್ ಎಂಬುದು ಅತ್ಯಂತ ಟ್ರೆಂಡಿಂಗ್ ವ್ಯವಹಾರ ಆಯ್ಕೆಗಳಲ್ಲಿ ಒಂದಾಗಿದೆ.

ಸಾಕಷ್ಟು ಕೌಶಲ್ಯವನ್ನು ಹೊಂದಿರುವ ಜನರು ಕಂಟೆಂಟ್ ರೈಟಿಂಗ್ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ಅದಕ್ಕೆ ಯಾವುದೇ ರೀತಿಯ ದೊಡ್ಡ ಬಂಡವಾಳದ ಅಗತ್ಯವಿಲ್ಲ.


ನಿಮಗೆ ಬೇಕಾಗಿರುವುದು ಸರಿಯಾದ ಕೌಶಲ್ಯ ಮತ್ತು ಕಂಟೆಂಟ್ ರೈಟರ್ ಆಗಿ ಪ್ರಾರಂಭಿಸಲು ಸಾಕಷ್ಟು ಹೂಡಿಕೆ ಮತ್ತು ನಿಮ್ಮ ವ್ಯವಹಾರಕ್ಕಾಗಿ ನಿಮ್ಮ ಬರವಣಿಗೆ ಸೇವೆಗಳನ್ನು ಬಯಸುವವರೊಂದಿಗೆ ನಿಮ್ಮ ಪರಿಣತಿಯನ್ನು ನೀವು ಹಂಚಿಕೊಳ್ಳಬಹುದು.


ಡೇ-ಕೇರ್ ಸೆಂಟರ್


ಪೋಷಕರು ಇಬ್ಬರೂ ಕೆಲಸ ಮಾಡುವ ಈ ಬಿಡುವಿಲ್ಲದ ಜಗತ್ತಿನಲ್ಲಿ, ಡೇ-ಕೇರ್ ವ್ಯವಹಾರವು ಗಮನಾರ್ಹವಾಗಿ ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರ ಕಲ್ಪನೆಯಾಗಿದೆ. ನಿಮಗೆ ಬೇಕಾಗಿರುವುದು ಅವರ ಮಗುವನ್ನು ನೀವು ಸುರಕ್ಷಿತವಾಗಿ ನೋಡಿಕೊಳ್ಳಲು ಒಂದು ಸ್ಥಳವಷ್ಟೆ.


ಇದಕ್ಕೆ ಹೂಡಿಕೆಗೆ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ ಮತ್ತು ನಾಮಮಾತ್ರದ ಮೊತ್ತದೊಂದಿಗೆ, ಈ ಡೇ-ಕೇರ್ ಅನ್ನು ಯಾರಾದರೂ ಶುರು ಮಾಡಬಹುದು. ಅಲ್ಲಿ ಜನರು ತುರ್ತು ಸಂದರ್ಭಗಳಲ್ಲಿ ತಮ್ಮ ಮಗುವನ್ನು ಬಿಡಬಹುದು. 20,000 ರೂಪಾಯಿಗಿಂತ ಕಡಿಮೆ ಹಣದಲ್ಲಿ ಡೇ-ಕೇರ್ ಸೇವೆಗಳನ್ನು ಆರಂಭಿಸಬಹುದು.


ಮೊಬೈಲ್ ರಿಪೇರಿ


ಮೊಬೈಲ್ ರಿಪೇರಿ ಮಾಡುವ ಕೌಶಲ್ಯ ನಿಮ್ಮಲ್ಲಿದ್ದರೆ, ನೀವು ಮೊಬೈಲ್ ರಿಪೇರಿ ಅಂಗಡಿಯೊಂದನ್ನು ಶುರು ಮಾಡಬಹುದು. ಇದಕ್ಕೆ ಅಂತಹ ದೊಡ್ಡ ಹೂಡಿಕೆಯ ಅಗತ್ಯವಿಲ್ಲದ ಕಾರಣ, ಯಾರಾದರೂ ಇದನ್ನು ಶುರು ಮಾಡಬಹುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)