ಕರ್ನಾಟಕದಲ್ಲಿ 1 ಕಂಟ್ರೋಲ್ ರೂಮ್ ಆಪರೇಟರ್ ಹುದ್ದೆ ಖಾಲಿ ಇದೆ. ದೇಶದ ವಿವಿಧ ರಾಜ್ಯಗಳಲ್ಲಿ ಉಳಿದ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯುತ್ತಿದೆ.
SBI Recruitment 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್(State Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಒಟ್ಟು 107 ಕಂಟ್ರೋಲ್ ರೂಮ್ ಆಪರೇಟರ್, ಆರ್ಮರ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ.
ಅಕ್ಟೋಬರ್ 5, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಆಸಕ್ತರು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು. ಕರ್ನಾಟಕದಲ್ಲಿ 1 ಕಂಟ್ರೋಲ್ ರೂಮ್ ಆಪರೇಟರ್ ಹುದ್ದೆ ಖಾಲಿ ಇದೆ. ದೇಶದ ವಿವಿಧ ರಾಜ್ಯಗಳಲ್ಲಿ ಉಳಿದ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯುತ್ತಿದೆ.
ಸಂಸ್ಥೆ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
ಹುದ್ದೆ | ಕಂಟ್ರೋಲ್ ರೂಮ್ ಆಪರೇಟರ್, ಆರ್ಮರ್ |
ವಿದ್ಯಾರ್ಹತೆ | 12ನೇ ತರಗತಿ, ಪದವಿ |
ಒಟ್ಟು ಹುದ್ದೆ | 107 |
ವೇತನ | ಮಾಸಿಕ ₹ 17,900- 47,920 |
ಉದ್ಯೋಗದ ಸ್ಥಳ | ಭಾರತ (ಕರ್ನಾಟಕ ಸೇರಿ) |
ಅರ್ಜಿ ಸಲ್ಲಿಸಲು ಕೊನೆಯ ದಿನ | ಅಕ್ಟೋಬರ್ 5, 2023 (ನಾಳೆ) |
ಹುದ್ದೆಯ ಮಾಹಿತಿ:
ಕಂಟ್ರೋಲ್ ರೂಮ್ ಆಪರೇಟರ್- 89
ಆರ್ಮರ್- 18
ಇದನ್ನೂ ಓದಿ: Zilla Panchayat Jobs: ಕರ್ನಾಟಕ ಜಿಲ್ಲಾ ಪಂಚಾಯತ್ ನೇಮಕಾತಿ- ಡಿಗ್ರಿ ಪಾಸಾದವರಿಗೆ ಬಂಪರ್ ಉದ್ಯೋಗ
ವಿದ್ಯಾರ್ಹತೆ:
ಕಂಟ್ರೋಲ್ ರೂಮ್ ಆಪರೇಟರ್- 12ನೇ ತರಗತಿ, ಪದವಿ
ಆರ್ಮರ್- 12ನೇ ತರಗತಿ
ವಯೋಮಿತಿ
ಕಂಟ್ರೋಲ್ ರೂಮ್ ಆಪರೇಟರ್- 20 ರಿಂದ 35 ವರ್ಷ
ಆರ್ಮರ್- 20ರಿಂದ 45 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ:
ಆನ್ಲೈನ್ ಟೆಸ್ಟ್
ಸಂದರ್ಶನ
ವೇತನ:
ಮಾಸಿಕ ₹ 17,900- 47,920
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/09/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 5, 2023 (ನಾಳೆ)
ಆನ್ಲೈನ್ ಟೆಸ್ಟ್ ನಡೆಯುವ ದಿನ: ನವೆಂಬರ್/ ಡಿಸೆಂಬರ್ 2023
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.