Prashanth Neel: ಜೂನಿಯರ್ ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರ ಯಾವಾಗ? ಇಲ್ಲಿದೆ ಹೊಸ ಮ್ಯಾಟರ್!

Arun Kumar
0

 

ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಹೊಸ ಸುದ್ದಿ ಹೊರ ಬಿದ್ದಿದೆ. ಶೂಟಿಂಗ್ ಯಾವಾಗ ಅನ್ನುವ ಮಾಹಿತಿನೂ ರಿವೀಲ್ ಆಗಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಟಾಲಿವುಡ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದಲೇ ಒಂದು ಸುದ್ದಿ ಹರಿದಾಡುತ್ತಲೇ ಇದೆ. ಜೂನಿಯರ್ ಎನ್‌.ಟಿ.ಆರ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ಸಿನಿಮಾ ಇನೇನು ಶುರು ಆಗಿಯೇ ಬಿಡುತ್ತದೆ ಅನ್ನುವ ಈ ಸುದ್ದಿ ಈಗ ಮತ್ತೆ ಸೌಂಡ್ ಮಾಡುತ್ತಿದೆ. ಇದರ ಸುತ್ತ ಇದೀಗ ಮತ್ತಷ್ಟು ಕುತೂಹಲ ಕೂಡ ಹುಟ್ಟಿಕೊಂಡಿವೆ.
ಸಲಾರ್ ಸಿನಿಮಾದ ಕೆಲಸದಲ್ಲಿಯೇ ಬ್ಯುಸಿ ಆಗಿರೋ ಡೈರೆಕ್ಟರ್ ಪ್ರಶಾಂತ್ ನೀಲ್, ಇದೀಗ ಜೂನಿಯರ್ ಎನ್.ಟಿ.ಆರ್ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ ಅನ್ನುವ ಸುದ್ದಿ ಹಬ್ಬಿದೆ. ಇದರ ಬೆನ್ನಲ್ಲಿಯೇ ಪ್ರಶಾಂತ್ ನೀಲ್ ಅವರ ಕೆಜಿಎಫ್‌-3 ಸಿನಿಮಾ ಏನ್ ಆಗುತ್ತದೆ ಅನ್ನುವ ಪ್ರಶ್ನೆ ಕೂಡ ಇದೆ.
ಜೂನಿಯರ್ ಎನ್.ಟಿ.ಆರ್ ಸದ್ಯ ದೇವರ ಸಿನಿಮಾದ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಆದ್ಮೇಲೆ ಬಾಲಿವುಡ್‌ನ ವಾರ್-2 ಸಿನಿಮಾದಲ್ಲೂ ಜೂನಿಯರ್ ಎನ್.ಟಿ.ಆರ್ ಅಭಿನಯಿಸುತ್ತಿದ್ದಾರೆ. ಈ ಮೂಲಕ ಬಾಲಿವುಡ್‌ಗೂ ಎಂಟ್ರಿಕೊಡುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)