Bulb Artists: ಬಲ್ಬ್ ಒಳಗಿದೆ ಸುಂದರ ಮಾಯೆ! ಇದು ಬಾಗಲಕೋಟೆ ಕಲಾವಿದರ ಕೈಚಳಕ

Arun Kumar
0

 


ಬಾಗಲಕೋಟೆ ಜಿಲ್ಲೆಯ ಹುನ್ನೂರು ಗ್ರಾಮದ ನಿವಾಸಿ ವಿಜಯ್ ಪವಾರ ಬಲ್ಬ್ ಗಳಲ್ಲಿ ಹಲವು ಕಲಾಕೃತಿಗಳನ್ನು ಮಾಡಿದ್ದಾರೆ. (ವರದಿ: ಮಂಜುನಾಥ್ ತಲ್ವಾರ್, ನ್ಯೂಸ್ 18 ಕನ್ನಡ, ಬಾಗಲಕೋಟೆ)


ಚಿಕ್ಕ ಚಿಕ್ಕದಾದ ಬಲ್ಬ್ ಗಳು. ಬಲ್ಬ್ ಗಳಲ್ಲಿ (Bulb) ಕಣ್ಮನ ಸೆಳೆಯುವ ಕಲಾಕೃತಿಗಳು. ಒಂದಕ್ಕಿಂತ ಒಂದು ಚೆಂದ ವಾವ್ ಎನ್ನುವಂತಿವೆ. ಸುಟ್ಟ ಬಲ್ಬ್‍ಗಳಲ್ಲಿ ಅದ್ಭುತ ಲೋಕವನ್ನು ಸೃಷ್ಟಿ ಮಾಡಿದ್ದು ಬಾಗಲಕೋಟೆ (Bagalkot)ಜಿಲ್ಲೆಯ ವಿಶೇಷ ಪ್ರತಿಭೆ ವಿಜಯ್ ಪವಾರ.


ಬಲ್ಬ್ ಗಳಲ್ಲಿ ಹಲವು ಕಲಾಕೃತಿಗಳು
ಬಾಗಲಕೋಟೆ ಜಿಲ್ಲೆಯ ಹುನ್ನೂರು ಗ್ರಾಮದ ನಿವಾಸಿ ವಿಜಯ್ ಪವಾರ ಬಲ್ಬ್ ಗಳಲ್ಲಿ ಹಲವು ಕಲಾಕೃತಿಗಳನ್ನು ಮಾಡಿದ್ದಾರೆ. 60, 200 ವೋಲ್ಟ್ ಬಲ್ಬ್ ಗಳಲ್ಲಿ ಸುಂದರ ಗಣೇಶ ಮಾರ್ತಿ, ತಾಜಮಹಲ್, ಗೋಳಗುಮ್ಮಟ, ವಿಧಾನಸೌಧ, ಕೂಡಲಸಂಗಮ, ಆಲಮಟ್ಟಿ ಜಲಾಶಯ, ಜಮಖಂಡಿ ಅರಮನೆ, ಶಿವಲಿಂಗ, ಎತ್ತಿನಗಾಡಿ, ಕಂಪ್ಯೂಟರ್, ಕ್ಯಾಲ್ಕುಲೇಟರ್, ಸೇರಿದಂತೆ ಅನೇಕ ಕಲಾಕೃತಿ ಮಾಡಿದ್ದಾರೆ.

ಕಲಾವಿದನ ಕೈಚಳಕ
ಬಾಟಲ್‍ನಲ್ಲಿ ಎತ್ತಿನ ಗಾಡಿ ಬಿಡಿಸಿದ ಒಬ್ಬ ಕಲಾವಿದನ ಕಂಡ ವಿಜಯ್ ಅವರು, ಬಲ್ಬ್ ನಲ್ಲಿ ಯಾಕೆ ಮಾಡಬಾರದು ಅಂತ ಆಸಕ್ತಿ ಬೆಳೆಸಿಕೊಂಡ ನಂತರ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಮೊದಲು ಬಲ್ಬ್ ನಲ್ಲಿ ಎತ್ತಿನ ಗಾಡಿ ರಚಿಸಿ, ಇಂದು 200ಕ್ಕೂ ಅಧಿಕ ಬಲ್ಬ್ ನಲ್ಲೇ ಕಲಾಕೃತಿ ರಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)