ಸುಮ್ಮ ಸುಮ್ಮನೇ ಪದೆ ಪದೇ ಹೋರಾಟದಲ್ಲಿ ಭಾಗವಹಿಸಲು ನಮಗೆ ಕೆಲಸ ಇಲ್ಲವಾ? ನಮ್ಮ ಸರ್ಕಾರ ಇದ್ದಾಗ ನಾನು ಗಟ್ಟಿಯಾಗಿ ಹೋರಾಟ ಮಾಡಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಜಯಪುರ: ಪಂಚಮಸಾಲಿ 2ಎ ಮೀಸಲಾತಿ (Panchamasali Reservation) ಹೋರಾಟದಲ್ಲಿ ಭಿನ್ನಮತ ಭುಗಿಲೆದ್ದಿದೆ. ಹೋರಾಟದಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹಿಂದೆ ಸರಿದಿದ್ದಾರೆ. ಸುಮ್ ಸುಮ್ನೆ ಹೋರಾಟದಲ್ಲಿ ಭಾಗವಹಿಸಲು ಕೆಲಸ ಇಲ್ವಾ. ನಮ್ಮ ಸರ್ಕಾರ (Govt) ಇದ್ದಾಗ ಗಟ್ಟಿಯಾಗಿ ಹೋರಾಡಿದ್ದೇನೆ. ಈಗ ಉಳಿದವರು ಹೋರಾಡಲಿ. ಇನ್ಮುಂದೆ ಪ್ರತಿಭಟನೆಯಲ್ಲಿ (Protest) ನಾನು ಭಾಗಿಯಾಗಲ್ಲ ಅಂತ ಯತ್ನಾಳ್ ಘೋಷಣೆ ಮಾಡಿದರು. ಪಂಚಮಸಾಲಿ ರಿಸರ್ವೇಷನ್ ನಾವು ಈಗಾಗಲೇ ಕೊಟ್ಟಿದ್ದೀವಿ. ಮುಂದೆ ಗುರುಗಳ ಶಿಷ್ಯರೇ ಎಲ್ಲಾ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಇದ್ದಾಗ ನಾನು ಗಟ್ಟಿಯಾಗಿ ಹೋರಾಟ ಮಾಡಿದ್ದೇನೆ
ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಪಂಚಮಸಾಲಿ ಸಮುದಾಯಕ್ಕೆ ನಾವು ಈಗಾಗಲೇ ಕೊಟ್ಟಿದ್ದೀವಿ. ಮುಂದೆ ಏನಾದರೂ ಆಗಬೇಕಾದರೆ ಗುರುಗಳ ಶಿಷ್ಯಂದಿರೇ ಇದ್ದಾರೆ, ಅವರೇ ನೋಡಿಕೊಳ್ಳಲಿ. ಕಾಶಪ್ಪನವರ, ವಿನಯ ಕುಲಕರ್ಣಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಇದನ್ನ ನೋಡಿಕೊಳ್ಳಲಿ.
ಸುಮ್ಮ ಸುಮ್ಮನೇ ಪದೆ ಪದೇ ಹೋರಾಟದಲ್ಲಿ ಭಾಗವಹಿಸಲು ನಮಗೆ ಕೆಲಸ ಇಲ್ಲವಾ? ನಮ್ಮ ಸರ್ಕಾರ ಇದ್ದಾಗ ನಾನು ಗಟ್ಟಿಯಾಗಿ ಹೋರಾಟ ಮಾಡಿದ್ದೇನೆ. ಈಗ ಕಾಂಗ್ರೆಸ್ ಸರಕಾರ ಇದೆ. ಉಳಿದವರು ಮಾಡಲಿ ಎಂದು ಹೋರಾಟದಿಂದ ಯತ್ನಾಳ್ ದೂರ ಸರಿದಿದ್ದಾರೆ.
ಯತ್ನಾಳ್ ಅವರ ಹೇಳಿಕೆಗೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಹೋರಾಟದ ಮುಂಚೂಣಿಯಲ್ಲಿದ್ದ ಯತ್ನಾಳ್ ಏಕಾಏಕಿ ಹಿಂದೆ ಸರಿದಿದ್ದು ಯಾಕೆ? ಯಡಿಯೂರಪ್ಪ ಟೀಂ ಮಣಿಸಲು ಯತ್ನಾಳ್ ಹಾಗೂ ಪಂಚಮಸಾಲಿ ಹೋರಾಟ ಬಳಸಿಕೊಳ್ಳಲಾಯಿತಾ?
ಬಿಜೆಪಿ ಸರ್ಕಾರ ಇದ್ದಾಗ ನಡೆದ ಹೋರಾಟದ ತೀವ್ರತೆ ಕಾಂಗ್ರೆಸ್ ಅವಧಿಯಲ್ಲಿ ವೀಕ್ ಆಗಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿದೆ. ಸಚಿವ ಸ್ಥಾನ ನೀಡದಿದ್ದರೂ ಪರವಾಗಿಲ್ಲ, ಮೀಸಲಾತಿ ನೀಡಿ ಎಂದು ಹೋರಾಟ ಮಾಡಿದ್ದ ಯತ್ನಾಳ್ ಅವರ ಸದ್ಯದ ನಡೆ ಅಚ್ಚರಿ ಮೂಡಿಸಿದೆ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.