Kichcha Sudeep: ಕಾವೇರಿ ಹೋರಾಟಕ್ಕೆ ಸುದೀಪ್ ಬೆಂಬಲ! ಸಿಎಂ ಸಿದ್ದರಾಮಯ್ಯಗೆ ಕಿಚ್ಚ ಕೊಟ್ಟ ಸಲಹೆ ಏನು?

Arun Kumar
0

 

ಕಾವೇರಿ ನಮ್ಮ ಜೀವ ಜಲ. ಕುಡಿಯಲು ನಮಗೆ ಕಾವೇರಿ ನೀರೇ ಇರೋದು. ಸಿ.ಎಂ.ಸಿದ್ದರಾಮಯ್ಯನವ್ರು ತಮಿಳುನಾಡು ಮುಖ್ಯಮಂತ್ರಿ ಜೊತೆಗೆ ಸೌಹಾರ್ದ ಮಾತುಕತೆ ನಡೆಸಿ ಈ ಸಮಸ್ಯೆ ಬಗೆ ಹರಿಸಬೇಕು ಎಂದು ಕಿಚ್ಚ ಸುದೀಪ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.


ಕಾವೇರಿ ಹೋರಾಟ ತಾರಕ್ಕೇ ಏರಿದೆ. ಇಡೀ ಬೆಂಗಳೂರು (Kichcha Sudeep Updates) ಬಂದ್ ಆಗಿದೆ. ಸ್ಟಾರ್ ನಟರು ಸಾಥ್ ಕೊಟ್ಟಿದ್ದಾರೆ. ಮ್ಯಾಕ್ಸ್ ಶೂಟಿಂಗ್‌ನಲ್ಲಿ ಬ್ಯುಸಿ ಇರೋ ಸುದೀಪ್ ಅಲ್ಲಿಂದಲೇ ಒಂದು ಪತ್ರಬರೆದಿದ್ದಾರೆ. ಕಾವೇರಿ ನೀರಿನ ಅಗತ್ಯವನ್ನ ಈ ಪತ್ರ ಸಾರಿ ಹೇಳುತ್ತಿದೆ. ಕಿಚ್ಚನ (Sudeep New Updates) ಮಾತಿನಲ್ಲಿ ಸತ್ಯ ಕೂಡ ಇದೆ. ಬರೆದಿರೋ ಪತ್ರದಲ್ಲಿ ಕಿಚ್ಚ ಸುದೀಪ್ ಒಂದಷ್ಟು ಸಲಹೆ ಸೂಚನೆ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಇತರ ನದಿಯ ಮಹತ್ವವನ್ನ ಕೂಡ ಹೇಳಿಕೊಂಡಿದ್ದಾರೆ. ಅಲ್ಲಿಯ ಸಮಸ್ಯೆ (Caveri Water Dispute) ಕುರಿತು ಈ ಒಂದು ಪತ್ರದಲ್ಲಿ ಮೆನ್ಷನ್ ಮಾಡಿದ್ದಾರೆ. ಸರ್ಕಾರಕ್ಕೆ ಒಂದು ಸಲಹೆಯನ್ನ ಕೂಡ ಕೊಟ್ಟಿದ್ದಾರೆ. ತಮಿಳು ನಾಡಿನ ರೈತರ ಬಗ್ಗೇನೂ ಯೋಚನೆ ಮಾಡಿದ್ದಾರೆ. ಈ ಪತ್ರದ ಒಟ್ಟು ಸಾರ ಇಲ್ಲಿದೆ. 


ನಮಗೆ ಕಾವೇರಿ ನದಿ ನೀರು ತುಂಬಾ ತುಂಬಾನೇ ಅವಶ್ಯ


ಕಾವೇರಿ ನೀರು ನಮಗೆ ತುಂಬಾನೆ ಅವಶ್ಯವಾಗಿದೆ. ನಮ್ಮ ರೈತರಿಗೂ ಈ ನೀರು ಬೇಕು. ಅದಕ್ಕೂ ಹೆಚ್ಚಾಗಿ ಕುಡಿಯಲು ಕಾವೇರಿ ನಮಗೆ ಅತಿ ಅವಶ್ಯವಾಗಿಯೇ ಬೇಕಿದೆ. ಕಾವೇರಿ ನೀರು ಇಲ್ಲದೇ ಹೋದ್ರೆ, ನಮಗೆ ತುಂಬಾನೆ ಕಷ್ಟ ಆಗುತ್ತದೆ. ಸರ್ಕಾರ ಈ ಒಂದು ವಿಚಾರವನ್ನ ಗಮನದಲ್ಲಿ ಇಟ್ಟಿಕೊಳ್ಳಬೇಕಿದೆ.

ತಮಿಳು ನಾಡಿನ ರೈತರ ಕುರವೈ ಬೆಳೆಗೂ ನೀರು ಸಿಗಲಿ!



ಕಾವೇರಿ ನೀರಿಗಾಗಿಯೇ ಎಲ್ಲ ಪಕ್ಷಗಳು ಒಂದಾಗಬೇಕಿದೆ


ಕಾವೇರಿ ನೀರಿನ ಹೋರಾಟಕ್ಕೆ ಎಲ್ಲರೂ ನಿಲ್ಲಬೇಕಿದೆ. ಎಲ್ಲರ ಪಕ್ಷಗಳು ಒಟ್ಟಾಗಿ ಈ ಹೋರಾಟ ಮಾಡಬೇಕಿದೆ. ಈ ಒಂದು ಹೋರಾಟ ಎಲ್ಲರೂ ಒಗ್ಗೂಡಿದಾಗಲೇ ಯಶಸ್ವಿ ಆಗುತ್ತದೆ. ಪ್ರತೇಕವಾಗಿ ಹೋರಾಡೋದು ಬೇಡ ಅನಿಸುತ್ತದೆ.

ತಮಿಳುನಾಡಿನ ಮುಖ್ಯಮಂತ್ರಿ ಜತೆಗೆ ಸೌಹಾರ್ದ ಮಾತುಕತೆ ಅವಶ್ಯ!


ಕಾವೇರಿಗಾಗಿ ಹೋರಾಟ ಮಾಡೋದೇನೋ ಸರಿಯೇ. ಆದರೆ ಇದನ್ನ ಸರಿ ಮಾಡಲು ಸಾಹಾರ್ದ ಮಾತುಕತೆ ಅವಶ್ಯ ಇದೆ. ಈ ಹಿಂದಿನ ಮುಖ್ಯಮಂತ್ರಿಗಳು ಇದನ್ನೆ ಮಾಡಿದ್ದರು. ಈಗೀನ ಸಿ.ಎಂ.ಸಿದ್ದರಾಮಯ್ಯನವ್ರು ಇದನ್ನೆ ಮಾಡಿ ತಾತ್ಕಾಲಿಕವಾಗಿಯೇ ಸಮಸ್ಯೆಯನ್ನ ಬಗೆಹರಿಸಬೇಕಿದೆ.

ತಮಿಳುನಾಡಿನ ಮುಖ್ಯಮಂತ್ರಿ ಜತೆಗೆ ಸೌಹಾರ್ದ ಮಾತುಕತೆ ಅವಶ್ಯ!



ಕೇಂದ್ರ ಮತ್ತು ಟ್ರಿಬಿನಲ್‌ಗೆ ಬರ ಸ್ಥಿತಿ ಮನವರಿಕೆ


ಬರ ಅಧ್ಯಯನ ಸಮಿತಿ ಹಾಗೂ ಕಾವೇರಿ ಸಮಿತಿಗಳು ಈ ಒಂದು ಕೆಲಸ ಮಾಡಬೇಕಿದೆ. ಸದ್ಯ ಇಡೀ ಕರ್ನಾಟಕ ಬರದಿಂದ ತತ್ತರಿಸುತ್ತಿದೆ. ಇದನ್ನ ಈ ಸಮಿತಿಗಳ ಕೇಂದ್ರ ಸರ್ಕಾರಕ್ಕೆ ಹಾಗೂ ಟ್ರಿಬಿನಲ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ.


ತಮಿಳು ನಾಡಿನ ರೈತರ ಕುರವೈ ಬೆಳೆಗೂ ನೀರು ಸಿಗಲಿ!


ಹೌದು, ಕಿಚ್ಚ ಸುದೀಪ್ ಅಲ್ಲಿಯ ರೈತರ ಬಗ್ಗೇನೂ ಯೋಚನೆ ಮಾಡಿದ್ದಾರೆ. ತಮಿಳುನಾಡಿನ ರೈತರು ಕುರವೈ ಬೆಳೆಗೆ ನೀರು ಕೇಳುತ್ತಿದ್ದಾರೆ. ಇದು ಸರಿಯೇ ಇದೆ. ಆದರೆ ಮೊದಲು ನಮ್ಮ ಕುಡಿಯುವ ನೀರಿನ ಸಮಸ್ಯೆ ಬಗೆಹರೆಯಲಿ ಎಂದು ಸುದೀಪ್ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ನದಿಗಳ ವಿವಾದವೂ ಬಗೆಹರಿಯಲಿ


ಸುದೀಪ್ ಕೇವಲ ಕಾವೇರಿ ಬಗ್ಗೆ ಮಾತನಾಡುತ್ತಿಲ್ಲ. ಉತ್ತರ ಕರ್ನಾಟಕದ ಜನರ ನೋವನ್ನ ಕೂಡ ಅರ್ಥ ಮಾಡಿಕೊಂಡಿದ್ದಾರೆ. ಇಲ್ಲಿಯ ಕೃಷ್ಣಾ ನದಿ, ಮಹಾದಾಯಿ ನದಿ, ಕಳಸಾ-ಬಂಡೂರಿ ಹೀಗೆ ಈ ನದಿಗಳ ಸಮಸ್ಯೆಗಳೂ ಬೇಗ ಬಗೆಹರಿಯಲಿ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.


ದೂರದ ಹೈದ್ರಾಬಾದ್‌ನಲ್ಲಿ ಮ್ಯಾಕ್ಸ್ ಸಿನಿಮಾ ಕೆಲಸದಲ್ಲಿರೋ ಸುದೀಪ್, ಕಾವೇರಿ ಹೋರಾಟಕ್ಕೆ ಈ ರೀತಿ ಪತ್ರದ ಮುಖಾಂತರ ಸಾಥ್ ಕೊಟ್ಟಿದ್ದಾರೆ. ಅದೇ ಪತ್ರವನ್ನ ಬೆಂಗಳೂರು ಬಂದ ಆಗೋ ಒಂದು ದಿನ ಮುಂಚೇನೆ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ. ಪತ್ರದಲ್ಲಿರೋ ವಿಷಯ ತುಂಬಾನೆ ಕನ್ವೆನ್ಸಿಂಗ್ ಆಗಿಯೇ ಇದೆ ಅಂತಲೂ ಹೇಳಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)