ಆನ್‍ ಲೈನ್ ವಿವಾಹ ನೋಂದಣಿಗೆ ಶ್ರೀರಾಮಸೇನೆ ವಿರೋಧ: ಕಾರಣ ಏನು?

Arun Kumar
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ  ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್‍ ನಲ್ಲಿ ಆನ್‍ ಲೈನ್ ವಿವಾಹ ನೋಂದಣಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಶ್ರೀರಾಮ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಸಂಬಂಧ ಮಾತನಾಡಿರುವ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಲವ್ ಜಿಹಾದ್ ಪ್ರಕರಣ ಹೆಚ್ಚಾಗ್ತಿರುವ ನಡುವೆ ಈ ಆನ್‍ ಲೈನ್ ವಿವಾಹ ನೋಂದಣಿ ಕುಮ್ಮಕ್ಕು ಕೊಡುತ್ತಿದೆ. ಹೀಗಾಗಿ ಇದನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಂದೆ-ತಾಯಿಗೆ ಗೊತ್ತಾಗದೇ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಹಿಂದೂಗಳು ಆನ್‍ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಮದುವೆ ಆಗುತ್ತಾರೆ. ಹೀಗಾಗಿ ಇದರಿಂದ ದೋಖಾ ಆಗುತ್ತದೆ. ನೇರವಾಗಿ ರಿಜಿಸ್ಟ್ರಾರ್ ಆಫೀಸ್ ಗೆ ತೆರಳಿ ನೋಂದಣಿ ಮಾಡುವ ಪದ್ಧತಿಯೇ ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಆನ್‍ಲೈನ್ ನೋಂದಣಿ ರದ್ದು ಮಾಡಬೇಕು ಹೊರತು ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)