ರೈಲಲ್ಲಿ ಮೊಬೈಲ್ ಕಿತ್ಕೊಂಡ ಖದೀಮರು: ದುಷ್ಕರ್ಮಿ ವಿರುದ್ಧ ಫೈಟ್ ಮಾಡುವಾಗ ಕೆಳಗೆ ಬಿದ್ದ ಯುವತಿ ದುರ್ಮರಣ

Arun Kumar
0

ತನ್ನ ಮೊಬೈಲನ್ನು ಕಳ್ಳತನ ‌ಮಾಡಲು ಬಂದ ಖದೀಮರ ವಿರುದ್ಧ ಹೋರಾಟ ನಡೆಸುತ್ತಿದ್ದ ವೇಳೆ ಯುವತಿಯೊಬ್ಬಳು ರೈಲಿನಿಂದ ಕೆಳಗೆ ಬಿದ್ದು ತಲೆಗೆ ತೀವ್ರತರದ ಪೆಟ್ಟಾಗಿ ಸಾವನ್ನಪ್ಪಿದ ಘಟನೆ ಚೆನ್ನೈನ ಇಂದಿರಾ ನಗರ ರೈಲು ನಿಲ್ದಾಣದಲ್ಲಿ ನಡೆದಿದೆ.

22 ವರ್ಷದ ಪ್ರೀತಿ, ಮೃತಪಟ್ಟ ಯುವತಿ. ಖಾಸಗಿ ಸಂಸ್ಥೆಯೊಂದರಲ್ಲಿಕೆಲಸ ಮಾಡುತ್ತಿದ್ದ ಪ್ರೀತಿ, ಕೊಟ್ಟೂರ್ ಪುರಂನಿಂದ ರೈಲು ಹತ್ತಿದ್ದಳು. ರೈಲಿನೊಳಗೆ ಭಾರೀ ಜನಸಂದಣಿ ಇದ್ದುದರಿಂದ ಯುವತಿ ಬಾಗಿಲಿನ ಹತ್ತಿರ ನಿಂತಿದ್ದಳು.

ಈ ವೇಳೆ ಇಬ್ಬರು ಮೊಬೈಲ್‌ ಸ್ನ್ಯಾಚರ್ಸ್‌ ಆಕೆಯಿಂದ ಮೊಬೈಲನ್ನು ಕಿತ್ತುಕೊಂಡಿದ್ದಾರೆ. ತನ್ನ ಮೊಬೈಲನ್ನು ರಕ್ಷಿಸುವ ಭರದಲ್ಲಿ ಯುವತಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ಆಗ ಆಕೆಯ ತಲೆಗೆ ತೀವ್ರವಾದ ಏಟಾಗಿದೆ.

ಫೋನ್‌ ಖದೀಮರು ಅಂಗಡಿಯೊಂದಕ್ಕೆ ಫೋನನ್ನು 2000 ರೂ.ಗಳಿಗೆ ಮಾರಾಟ ಮಾಡಿದ್ದು, ಕಳೆದ ಐದು ದಿನಗಳಿಂದ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಫೋನ್‌ ಮತ್ತೆ ಆನ್‌ ಆಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪ್ರೀತಿ ಪ್ಲಾಟ್‌ ಫಾರ್ಮ್‌ನಲ್ಲಿ ಬಿದ್ದಿದ್ದರೂ, ಯಾರೂ ಸಹಾಯಕ್ಕೆ ಧಾವಿಸಿರಲಿಲ್ಲ. ಆಂಬ್ಯುಲೆನ್ಸ್‌ ಗೆ ಕೂಡಾ ಕರೆ ಮಾಡಿರಲಿಲ್ಲ ಎಂದು ಪ್ರೀತಿ ಅವರ ಸಹೋದರ ಗುಬೇಂದ್ರನ್ ಹೇಳಿದ್ದಾರೆ.

ಪ್ರಯಾಣಿಕರೊಬ್ಬರು ಆಕೆಯ ಗುರುತಿನ ಚೀಟಿಯಿಂದ ತುರ್ತು ಅಪಘಾತದ ಬಗ್ಗೆ ಆಕೆಯ ಪೋಷಕರಿಗೆ ತಿಳಿಸಿದ್ದಾರೆ. ಆಕೆಯ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಪ್ರೀತಿಯನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವವರೆಗೆ ಆಕೆ ಪ್ಲಾಟ್‌ಫಾರ್ಮ್‌ ನಲ್ಲಿ ಬಿದ್ದಿದ್ದಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)