Actor Sudeep: ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ ಸುದೀಪ್‌, ವಿಡಿಯೋ ವೈರಲ್‌

Arun Kumar
0

Acotor Kiccha Sudeep: ಇಂದು (ಸೆಪ್ಟೆಂಬರ್ 02) ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಇದ್ದಾರೆ. ಇನ್ನು ಅವರು ಇಂದೇ ತಮ್ಮ ಟ್ವೀಟ್ ಖಾತೆ ಮೂಲಕ ಪೋಸ್ಟ್ರ್ವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ನೀಡಿದ್ದಾರೆ. ಹಾಗಾದರೆ ಆ ಶುಭಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ತಮ್ಮ ಹುಟ್ಟು ಹಬ್ಬದ ದಿನವೇ ನಟ ಕಿಚ್ಚ ಸುದೀಪ್ "ಬಿಲ್ಲಾ ರಂಗಾ ಭಾಷಾ" ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

ಇನ್ನು ಬಿಲ್ಲಾ ರಂಗ ಭಾಷಾ ಸಿನಿಮಾದ ಟೈಟಲ್ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ನಟ ಸುದೀಪ್ ಹಂಚಿಕೊಂಡಿದ್ದು, ಇದು ಸಖತ್ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣ ನಿರ್ದೇಶನದಲ್ಲಿ ಈ ಬಿಲ್ಲಾ ರಂಗ ಭಾಷಾ ಸಿನಿಮಾ ತಯಾರಾಗುತ್ತಿದೆ.

ಒಂದಾನೊಂದು ಕಾಲದಲ್ಲಿ ಕ್ರಿಸ್ತ ಶಕ 2209ರಲ್ಲಿ ಎಂದು ಆರಂಭವಾಗುವ ವಿಡಿಯೋದಲ್ಲಿ ಬಿಲ್ಲಾ ರಂಗ ಭಾಷಾ
ಎಂಬ ಮೂವರ ಕಥೆಯ ಬಗ್ಗೆ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ಅನೂಪ್ ಬಂಡಾರಿ ಕಥೆ ಬರೆದಿದ್ದು, ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾ ಯಾವ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆ ಇಂದು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಇನ್ನು ಮ್ಯಾಕ್ಸ್ ಸಿನಿಮಾದ ಬಳಿಕ ನಟ ಸುದೀಪ್ ಈ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತಾರಾಗಣದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)