ಬಳ್ಳಾರಿ ಆಗಸ್ಟ್ 28: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜನಂತೆ ಮೆರೆಯಲು ಹೋಗಿ ದರ್ಶನ್ ಬಳ್ಳಾರಿ ಜೈಲು ಪಾಲಾಗಿದ್ದಾರೆ. ಇಂದು ಅಥವಾ ನಾಳೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ದರ್ಶನ್ ತೂಗುದೀಪ, ಜೈಲನ್ನು ತಮಗೆ ಬೇಕಾದಂತೆ ಬಿಂದಾಸ್ ಆಗಿ ಬದಲಾಯಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಕೋರ್ಟ್ ದರ್ಶನ್ ಜೈಲನ್ನು ಬದಲಾಯಿಸಿದೆ.
ಹೌದು... ದರ್ಶನ್ ಹಾಗೂ ಗ್ಯಾಂಗ್ ಜೈಲಿನಲ್ಲಿ ಬಿಂದಾಸಾಗಿ ಸಿಗರೇಟ್ ಹೊಡೆಯುತ್ತಿರುವ ಪೋಟೋ ಹಾಗೂ ವಿಡಿಯೋ ವೈರಲ್ ಆಗಿದೆ. ಈ ಒಂದೇ ಒಂದು ಫೋಟೋ ದರ್ಶನ್ ಜೈಲನ್ನೇ ಬದಲಾಯಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಇನ್ಮುಂದೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಆದೇಶ ನೀಡಿದೆ. ಹಾಗಾದರೆ ಬಳ್ಳಾರಿ ಜೈಲು ಹೇಗಿದೆ? ಇಲ್ಲಿನ ವ್ಯವಸ್ಥೆಗಳು ಏನು? ಇಲ್ಲಿನ ಇತಿಹಾಸ, ಕೈದಿಗಳು ಎಷ್ಟು? ಎಲ್ಲಾ ವಿಷಯಗಳನ್ನು ಈಗ ತಿಳಿಯೋಣ.
ಬಳ್ಳಾರಿ ಜೈಲಿನ ಇತಿಹಾಸ
ಬ್ರಿಟಿಷರ ಆಳ್ವಿಕೆಯಲ್ಲಿ ಬಳ್ಳಾರಿಯು ಪ್ರಮುಖ ಪಟ್ಟಣವಾಗಿತ್ತು. ವಿಶೇಷವಾಗಿ 1800ರಲ್ಲಿ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯೊಂದಿಗೆ ವಿಲೀನಗೊಂಡ ನಂತರ ಹೆಚ್ಚಿನ ಪ್ರಾಶಸ್ತ್ಯ ಬಂತು. ಆಗ ಬ್ರಿಟಿಷರು ನಿರ್ಮಿಸಿದ್ದ ಬಳ್ಳಾರಿ ಜೈಲಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದ ಅನೇಕ ದಿಗ್ಗಜರನ್ನು ಹಾಕಲಾಗಿತ್ತು. ಸ್ವಾತಂತ್ರ್ಯ ಹೋರಾಟದ ದಿಗ್ಗಜರನ್ನು ಈ ಜೈಲಿನಲ್ಲಿ ಬಂಧಿಸಲಾಗಿತ್ತು.
ಅಲ್ಲದೆ ವಿದೇಶಿ ಯುದ್ಧ ಕೈದಿಗಳೂ ಇಲ್ಲಿದ್ದರು. ಇಷ್ಟೇ ಅಲ್ಲದೆ ಮಹಾತ್ಮಾ ಗಾಂದೀಜಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗುತ್ತದೆ. ಜೈಲಿನಲ್ಲಿ ಈಗಲೂ ಕೆಲವು ಕಟ್ಟಡಗಳು ಹಳೆಯ ಶೈಲಿನಲ್ಲಿಯೇ ಇವೆ. ಹೆಚ್ಚಿನ ಭದ್ರತೆ ಕೂಡ ಇಲ್ಲಿದೆ ಎನ್ನಲಾಗುತ್ತದೆ. ಸದ್ಯ ಈ ಜೈಲಿಗೆ ಕನ್ನಡ ಸಿನಿಮಾ ನಟ ದರ್ಶನ್ನನ್ನು ಶಿಫ್ಟ್ ಮಾಡಲಾಗುತ್ತಿದೆ. ವಿಪರ್ಯಾಸ ಅಂದರೆ ಈ ಜೈಲಿನಲ್ಲಿ ಈ ಹಿಂದೆ ದರ್ಶನ್ ಸಿನಿಮಾ ಶೂಟಿಂಗ್ ಮಾಡಿದ್ದರು. ಈಗ ಜೈಲಿನ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೋಡ್ತಾ ಹೋಗೋಣ.
ಸಂಬಂಧಿತ ವಿಷಯಕ್ಕೆ ಲಿಂಕ್ ಅನ್ನು ಸೇರಿಸಲು ಅನುಮತಿಸಲಾಗಿದೆ, ಆದರೆ ಕಾಮೆಂಟ್‌ಗಳು ಪೋಸ್ಟ್ ವಿಷಯಕ್ಕೆ ಸಂಬಂಧಿತವಾಗಿರಬೇಕು. ಅಶ್ಲೀಲತೆ ಸೇರಿದಂತೆ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ. ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ ಭಾಷೆ ಅಥವಾ ಪರಿಕಲ್ಪನೆಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಅಳಿಸಲಾಗುತ್ತದೆ.